Advertisement

Royal Challengers Bangalore:ಒಂದೇ ಮಾತಿನಲ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದ ಕಿಂಗ್ ಕೊಹ್ಲಿ

08:31 AM May 22, 2023 | Team Udayavani |

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023ರ ಅಂತಿಮ ಲೀಗ್ ಪಂದ್ಯದಲ್ಲಿ ಸೋಲನುಭವಿಸಿದೆ. ಈ ಮೂಲಕ ಪ್ಲೇ ಆಫ್ ತಲುಪದೆ ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದೆ. ವಿರಾಟ್ ಕೊಹ್ಲಿ ದಾಖಲೆಯ ಶತಕದ ಹೊರತಾಗಿಯೂ ಆರ್ ಸಿಬಿ ಸೋಲನುಭವಿಸಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Advertisement

ನಿರ್ಣಾಯಕ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿಗೆ ನೆರವಾಗಿದ್ದ ವಿರಾಟ್ ಕೊಹ್ಲಿ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಇತರ ಬ್ಯಾಟರ್ ಗಳು ವಿಕೆಟ್ ಚೆಲ್ಲುತ್ತಿದ್ದರೂ ಗಟ್ಟಿಯಾಗಿ ನಿಂತ ವಿರಾಟ್ ಆಕರ್ಷಕ ಶತಕ ಬಾರಿಸಿದರು. 61 ಎಸೆತ ಎದುರಿಸಿದ ಕೊಹ್ಲಿ ಅಜೇಯ 101 ರನ್ ಗಳಿಸಿ ತಂಡವನ್ನು ಆಧರಿಸಿದರು.

ಮೊದಲ ಇನ್ನಿಂಗ್ ಬಳಿಕ ಮಾತನಾಡಿದ ವಿರಾಟ್, “ನನ್ನ ಟಿ20 ಕ್ರಿಕೆಟ್ ಜೀವನ ಮುಗಿಯಿತು ಎಂದು ಬಹಳಷ್ಟು ಜನರು ಭಾವಿಸಿದ್ದರು, ಆದರೆ ನನಗೆ ಹಾಗೆ ಅನಿಸುವುದಿಲ್ಲ. ನಾನು ಮತ್ತೆ ನನ್ನ ಅತ್ಯುತ್ತಮ ಟಿ20 ಕ್ರಿಕೆಟ್ ಆಡುತ್ತಿದ್ದೇನೆ ಎಂದು ನನಗನಿಸುತ್ತಿದೆ” ಎಂದು ಹೇಳಿದರು.

“ನಾನು ನನ್ನನ್ನು ಆನಂದಿಸುತ್ತಿದ್ದೇನೆ. ನಾನು ಟಿ20 ಕ್ರಿಕೆಟ್ ಅನ್ನು ಹೀಗೆಯೇ ಆಡುತ್ತೇನೆ, ನಾನು ಗ್ಯಾಪ್ ಗಳಲ್ಲಿ ಹೊಡೆಯಲು, ಸಾಕಷ್ಟು ಬೌಂಡರಿಗಳನ್ನು ಬಾರಿಸಲು ಮತ್ತು ನಂತರ ಪರಿಸ್ಥಿತಿಯು ನನಗೆ ಅವಕಾಶ ನೀಡಿದರೆ ಕೊನೆಯಲ್ಲಿ ದೊಡ್ಡ ಹಿಟ್ ಹೊಡೆಯಲು ನೋಡುತ್ತೇನೆ” ಎಂದು ಕೊಹ್ಲಿ ಹೇಳಿದರು.

ಪಂದ್ಯದ ಮೇಲೆ ಮಳೆ ಬೀಳುವ ಅಪಾಯದ ಬಗ್ಗೆ ಯೋಚಿಸಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. “ಈ ರೀತಿಯ ಸಂದರ್ಭಗಳಲ್ಲಿ ಪಂದ್ಯದ ಬಗ್ಗೆ ಯೋಚಿಸಿವುದು ಮುಖ್ಯವಾದುದು. ನಾನು ಮಳೆಯ ಮೇಲೆ ಗಮನ ನೀಡಲಿಲ್ಲ, ನಾನು ತಂಡಕ್ಕಾಗಿ ನಾನು ಏನು ಮಾಡಬೇಕು ಎಂಬುದರ ಮೇಲೆ ಕೇಂದ್ರೀಕರಿಸಿದ್ದೇನೆ” ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next