Advertisement

ಜನ ಸಾಮಾನ್ಯ ಪಕ್ಷದಿಂದ ಅಣುಕು ಶ್ರದ್ದಾಂಜಲಿ

12:15 PM Feb 04, 2018 | Team Udayavani |

ಬೆಂಗಳೂರು: ಜನ ಸಾಮಾನ್ಯರ ಪಕ್ಷದ ವತಿಯಿಂದ ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳಸಾ ಬಂಡೂರಿ ವಿವಾದದ ಕುರಿತು ಧ್ವನಿ ಎತ್ತದ ರಾಜ್ಯದ ಸಂಸದರ ವಿರುದ್ಧ “ಅಣುಕು ಶ್ರದ್ದಾಂಜಲಿ’ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಹದಾಯಿ ವಿವಾದ ಬಗೆಹರಿಸಲು ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಡ ಹೇರುವಲ್ಲಿ ವಿಫ‌ಲರಾಗಿದ್ದಾರೆ. ಇಂತಹ ಸಂಸದರು ರಾಜ್ಯಕ್ಕೆ ಇದ್ದೂ ಇಲ್ಲದಂತೆ ಎಂದು ಅಣುಕು ಶ್ರದ್ದಾಂಜಲಿ ಮಾಡಿರುವುದಾಗಿ ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ ತಿಳಿಸಿದರು.

ಕಳಸಾ ಬಂಡೂರಿ ಕಾಮಗಾರಿಯನ್ನು ಜನರ ಶ್ರಮದಾನದಿಂದ ಮಾಡಲು ಅನುಮತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಉತ್ತರ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕಾಲಿಡುವ ಮೊದಲು ನಿರ್ಧಾರ ಪ್ರಕಟಿಸಬೇಕು ಇಲ್ಲದಿದ್ದರೇ, ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next