Advertisement

ದೇವರುಗಳಲ್ಲೂ ಅಸಮಾನತೆ ತೋರುತ್ತಿರುವ ಜನರು

12:41 PM May 15, 2017 | Team Udayavani |

ಮೈಸೂರು: ಹಿಂದೂಗಳಲ್ಲಿ ಮೇಲ್ವರ್ಗದವರ ದೇವತೆಗಳನ್ನು ಐಶ್ವರ್ಯ ರೈನಂತೆ, ಹಿಂದುಳಿದ ಸಮುದಾಯದವರ ದೇವತೆಗಳನ್ನು ಡಿ ಗ್ರೂಪ್‌ ನಂತೆ ಚಿತ್ರಿಸಿ, ದೇವರುಗಳಲ್ಲೂ ಅಸಮಾನತೆ ಬಿತ್ತಲಾಗಿದೆ ಎಂದು ಉರಿಲಿಂಗಿ ಪೆದ್ದಿಮಠದ ಜಾnನಪ್ರಕಾಶ ಸ್ವಾಮೀಜಿ ಹೇಳಿದರು. ಬಹುಜನ ವಿದ್ಯಾರ್ಥಿ ಸಂಘದವತಿಯಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಗೀತ, ಧ್ಯಾನ, ದೀûಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ದೇವರುಗಳಲ್ಲೂ ಅಸಮಾನತೆ ತೋರ್ಪಡಿಸುವ ಮೂಲಕ ಸಮಾಜದಲ್ಲಿ ಜಾತೀಯತೆ ಬಿತ್ತಲಾಗಿದೆ. ಹಿಂದೂ ಧರ್ಮದಲ್ಲಿ ಮೇಲ್ವರ್ಗದವರು ಪೂಜಿಸುವ ದೇವರುಗಳನ್ನು ಚಿನ್ನ ತೊಟ್ಟಿರುವ ಐಶ್ವರ್ಯ ರೈ ನಂತೆ ಚಿತ್ರಿಸಿಕೊಂಡು ಹಿಂದುಳಿದ ಜನಾಂಗದವರು ಪೂಜಿಸಲು ಪಟ್ಟಾಲಮ್ಮ, ಎಲ್ಲಮ್ಮ ಎಂಬ ಡಿ ಗ್ರೂಪ್‌ ದೇವರುಗಳನ್ನು ಸೃಷ್ಟಿಸುವ ಮೂಲಕ ದೇವರಲ್ಲಿಯೂ ಅಸಮಾನತೆಯನ್ನು ಕೆಲವರು ಹುಟ್ಟುಹಾಕಿದ್ದಾರೆ ಎಂದು ಕಿಡಿಕಾರಿದರು.

ಹಿಂದೂಗಳಲ್ಲಿ ಮೇಲ್ವರ್ಗವೆನಿಸಿದವರು ಪೂಜಿಸಲ್ಪಡುವ ದೇವರುಗಳು ಸಿನಿಮಾ ತಾರೆಯರಂತೆ ಚಿನ್ನ, ಬೆಳ್ಳಿ, ವಜ್ರದಿಂದ ಕೂಡಿದ್ದು, ಸಕ್ಕರೆ, ಹಾಲು ಹಾಗೂ ತುಪ್ಪವನ್ನು ಅರ್ಪಿಸಿಕೊಂಡರೆ, ಹಿಂದುಳಿದ ಸಮುದಾಯಗಳು ಪೂಜಿಸುವ ಮಾರಮ್ಮ, ಪಟ್ಟಲದಮ್ಮ, ಎಲ್ಲಮ್ಮ ಎಂಬ ಡಿ ಗ್ರೂಪ್‌ ದೇವರುಗ‌ಳಿಗೆ ಕೋಣ, ಆಡು ಮತ್ತು ಕುರಿಯೇ ಬಲಿಗೆ ಬೇಕು ಎಂದು ವ್ಯಂಗ್ಯವಾಡಿದರು.

ಕೊಳೆತು ನಾರುತ್ತಿರುವ ಅಸಮಾನತೆ, ಅಸ್ಪೃಶ್ಯತೆಯ ದಿಕ್ಸೂಚಿ, ಮೌಡ್ಯತೆಯ ಮಹಾಜಾಲ, ಅನಾಗರಿಕತೆಯ ತೇಜೋಪುಂಜದೊಳಗೆ ದೇಶವಿದೆ. ಆದರೆ, ಜಗತ್ತಿನಲ್ಲಿ ಜಾತಿಯೇ ಇಲ್ಲ ಎಂದು ಬುದ್ಧ ಹೇಳಿದ. ಅದಕ್ಕೆ ರೋಷ ಮತ್ತು ಆಕ್ರೋಶಭರಿತರಾದ ಹಿಂದೂ ಸಂಸ್ಕೃತಿ ಅವನ ಸ್ಥೂಪ ಹಾಗೂ ವಿಗ್ರಹಗಳನ್ನು ದೇಶದ ನಾನಾ ಕಡೆಗಳಲ್ಲಿ ವಿರೂಪಗೊಳಿಸಿದರು.

ಇಂತಹ ದೇಶದಲ್ಲಿ ಪ್ರತಿಯೊಬ್ಬರಲ್ಲಿಯೂ ಮಾನಸಿಕವಾಗಿ ಬುದ್ಧ ಅಡಗಿದ್ದಾನೆ. ಅದಕ್ಕಾಗಿಯೇ ಬುದ್ಧನನ್ನು ಹೊರತು ಪಡಿಸಿದರೆ ಭಾರತ ಉಳಿಯಲಾರದು ಎಂದು ಪಾಶ್ಚಿಮಾತ್ಯರು ನಂಬಿರುವಾಗ ವಿಪರ್ಯಾಸವೆಂಬಂತೆ ಬುದ್ಧನನ್ನು ಕಂಡರೆ ದೇಶದ ಮಂದಿ ರೋಷಾವೇಷದಿಂದ ನಡೆದುಕೊಳ್ಳುತ್ತಿದ್ದಾರೆ. ದೇವರು ಧರ್ಮಕ್ಕಾಗಿ ನರಬಲಿ ನೀಡುತ್ತಿದ್ದ, ಸಂಸ್ಕೃತಿ ತಡೆಯಲು ಹೊರಟವರು ಬುದ್ಧ ಅವನ ವಿಚಾರವಿಲ್ಲದೆ ಉಳಿಗಾಲವಿಲ್ಲ. ದೇವರು ದಿಂಡಿರುಗಳಿಂದ ಕೊಳೆತು ನಾರುತ್ತಿರುವ ದೇಶ ಮಾನವತೆಯ ರಾಷ್ಟ್ರವಾಗಬೇಕಿದೆ ಎಂದು ಹೇಳಿದರು.

Advertisement

ವೇದಿಕೆಯಲ್ಲಿ ಬೌದ್ಧ ಭಿಕ್ಕು ಶಿಶಕೆ ಖನ್ನಾ, ವಕೀಲ ಶೀಧರ್‌ ಪ್ರಭು, ಗ್ರಂಥಾಲಯ ಮಾಹಿತಿ ಅಧಿಕಾರಿ ಬಿ.ವೈ.ತಳವಾರ್‌, ಮಹಾರಾಜ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪೊ›.ಬಿ.ಎನ್‌. ಯಶೋಧ, ಮಾನಸಗಂಗೋತ್ರಿ ಘಟಕ ಅಧ್ಯಕ್ಷ ಹುವ್ವಿನ ಸಿದ್ದು ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next