Advertisement

ಭೀಮಾನದಿ ಪುಷ್ಕರದಲ್ಲಿ ಮಿಂದೆದ್ದ ಸಾರ್ವಜನಿಕರು

04:55 PM Oct 20, 2018 | Team Udayavani |

ಯಾದಗಿರಿ: ನಗರಕ್ಕೆ ಹತ್ತಿರ ಇರುವ ಗುಲಸರಂ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ನಡೆಯುತ್ತಿರುವ ಭೀಮಾನದಿ ಪುಷ್ಕರ ಮೇಳದಿಂದ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡುವ ಜೊತೆಗೆ ಅವರಲ್ಲಿ ಸಾಮರಸ್ಯ ಮೂಡಿದೆ ಎಂದು ಮಾಜಿ ಶಾಸಕ ಡಾ|ವೀರಬಸವಂತರೆಡ್ಡಿ ಮುದ್ನಾಳ ಹೇಳಿದರು.

Advertisement

ಶುಕ್ರವಾರ ಪುಷ್ಕರ ಮೇಳಕ್ಕೆ ದಂಪತಿ ಸಮೇತ ಭೇಟಿ ನೀಡಿ, ಜಿಲ್ಲಾ ಕಮ್ಮ ಜನ ಸೇವಾ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಿತಿಯವರು ಮೇಳದಲ್ಲಿ ಪ್ರತಿಯೊಂದು ಹಂತದಲ್ಲಿ ಶಿಸ್ತು, ಪರಿಸರ ಸ್ವತ್ಛತೆ ಜೊತೆಗೆ ದಾಸೋಹ ನಿರ್ವಹಣೆ ಮಾಡಿರುವುದು ಇತರರಿಗೆ
ಮಾರ್ಗದರ್ಶನವಾಗಿದೆ ಎಂದು ಶ್ಲಾಘಿಸಿದರು.

ನೆರೆ ರಾಜ್ಯದ ಭಕ್ತರು ಭಾಗಿ: ವಿಜಯ ದಶಮಿ ಹಿನ್ನೆಲೆಯಲ್ಲಿ ರಾಜ್ಯ, ಹೊರ ರಾಜ್ಯದ ನೂರಾರು ಭಕ್ತರು ಭೀಮಾ ಪುಷ್ಕರದಲ್ಲಿ ಪುಣ್ಯಸ್ನಾನ ಮಾಡಿದರು. ಹಬ್ಬದ ದಿನವಾಗಿದ್ದರಿಂದ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಭಕ್ತರು ಗಂಗೆಯಲ್ಲಿ ಮಿಂದೆದ್ದರು.

ಈ ಸಂದರ್ಭದಲ್ಲಿ ಡಾ| ಸಂಗಮ್ಮರಡ್ಡಿ ಮುದ್ನಾಳ, ಲಿಲಾಕೃಷ್ಣರಾವ್‌, ವೈ. ಪ್ರಸಾದ, ಪೂರ್ಣಬಾಬು ನಾಯ್ಕಲ್‌, ವಾಣಿ ಶಿರಿಷಾ, ಲಲಿತಾದೇವಿ, ಶ್ರೀಲತಾ, ಕವಿತಾ, ಜ್ಯೋತಿ, ಶ್ರೀನಿವಾಸ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next