Advertisement
“ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆ ಹೇರಲು ಹೊರಟರೆ ಸಹಿಸಲು ಸಾಧ್ಯವಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರೆ, “ಹಿಂದಿ ಹೇರಿಕೆ ಮಾಡುವ ನಿಮ್ಮ ಯತ್ನ ಫಲಿಸುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ಡಿಎಂಕೆ ಸಂಸದೆ ಕನಿಮೋಳಿ, ಪಿಎಂಕೆ ಸ್ಥಾಪಕ ಎಸ್.ರಾಮದಾಸ್, ಜೆಡಿಎಸ್, ತೃಣಮೂಲ ಕಾಂಗ್ರೆಸ್ ನಾಯಕರು ಸಹಿತ ಹಲವರು ಶಾ ಹೇಳಿಕೆಯನ್ನು ಖಂಡಿಸಿದ್ದಾರೆ.
ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅಮಿತ್ ಶಾ, “ಪ್ರಧಾನಿ ನರೇಂದ್ರ ಮೋದಿಯವರು ಸರಕಾರದ ವ್ಯವಹಾರವನ್ನು ಅಧಿಕೃತ ಭಾಷೆಯಲ್ಲೇ ನಡೆಸಲು, ಆ ಮೂಲಕ ಹಿಂದಿಗೆ ಹೆಚ್ಚಿನ ಪ್ರಾಮುಖ್ಯ ನೀಡಲು ನಿರ್ಧರಿಸಿದ್ದಾರೆ. ಈಗ ಅಧಿಕೃತ ಭಾಷೆಯನ್ನು ದೇಶದ ಏಕತೆಗಾಗಿ ಬಳಸುವ ಸಂದರ್ಭ ಬಂದಿದೆ. ಬೇರೆ ಬೇರೆ ರಾಜ್ಯಗಳಿಗೆ ಸೇರಿರುವ ಬೇರೆ ಬೇರೆ ಭಾಷೆ ಗಳನ್ನಾಡುವ ಜನರು ಒಂದೆಡೆ ಸೇರಿದಾಗ ಇಂಗ್ಲಿಷ್‌ನಲ್ಲಿ ಮಾತನಾ ಡುವ ಬದಲು, ಹಿಂದಿಯಲ್ಲೇ ಮಾತನಾಡಬೇಕು’ ಎಂದಿದ್ದಾರೆ. ಹಾಗಂತ ಹಿಂದಿಯನ್ನು ಇಂಗ್ಲಿಷ್‌ನ ಪರ್ಯಾಯವೆಂದು ಸ್ವೀಕರಿಸಬೇಕೇ ಹೊರತು ಸ್ಥಳೀಯ ಭಾಷೆ ಎಂದು ಸ್ವೀಕರಿಸಬೇಕಾಗಿಲ್ಲ ಎಂದೂ ಅವರು ಹೇಳಿದ್ದಾರೆ. ಜತೆಗೆ 9ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ಮಕ್ಕಳಿಗೆ ಹಿಂದಿ ಭಾಷೆಯ ಜ್ಞಾನವನ್ನು ನೀಡಬೇಕು ಮತ್ತು ಹಿಂದಿ ಕಲಿಸುವ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದೂ ಶಾ ಹೇಳಿದ್ದಾರೆ.
Related Articles
Advertisement
ಶಾ ಅವರ ಹೇಳಿಕೆಯು ಭಾರತದ ಏಕತೆಗೆ ಧಕ್ಕೆ ತರುವಂಥದ್ದು. ಇಂತಹ ಹೇಳಿಕೆಗಳ ಮೂಲಕ ಬಿಜೆಪಿಯು ಭಾರತದ ವೈವಿಧ್ಯವನ್ನು ನಾಶ ಮಾಡಲು ಹೊರಟಿದೆ. ಬಿಜೆಪಿ ಪದೇಪದೆ ಈ ತಪ್ಪನ್ನು ಮಾಡುತ್ತಿದೆ. ನೀವು ಇದರಲ್ಲಿ ಯಾವತ್ತೂ ಯಶಸ್ವಿಯಾಗಲು ಸಾಧ್ಯವಿಲ್ಲ.– ಎಂ.ಕೆ. ಸ್ಟಾಲಿನ್, ತಮಿಳುನಾಡು ಸಿಎಂ ನಾವು ಹಿಂದಿಯನ್ನು ಗೌರವಿಸುತ್ತೇವೆ. ಆದರೆ, ಹೇರಿಕೆಯನ್ನು ಒಪ್ಪುವುದಿಲ್ಲ. ಇಂಗ್ಲಿಷ್ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಹಲವು ರಾಜ್ಯಗಳಿವೆ, ಹಲವು ಭಾಷೆಗಳಿವೆ. ತಮ್ಮ ಹೇಳಿಕೆ ಬಗ್ಗೆ ಶಾ ಮತ್ತೂಮ್ಮೆ ಯೋಚಿಸಲಿ.
– ಕುನಾಲ್ ಘೋಷ್, ಟಿಎಂಸಿ ವಕ್ತಾರ ಒಬ್ಬ ಸ್ವಾಭಿಮಾನಿ ಕನ್ನಡಿಗನಾಗಿ ಈ ಹೇಳಿಕೆ ಯನ್ನು ತೀವ್ರವಾಗಿ ಖಂಡಿಸುತ್ತೇನೆ. ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧ ವಾದದ್ದು ಮಾತ್ರವಲ್ಲ, ಮಾತೃ ಭಾಷೆಗೆ ಮಾಡಿರುವ ಅವಮಾನ. ಹಿಂದಿ ಯಲ್ಲೇ ವ್ಯವಹರಿಸಬೇಕು ಎನ್ನು ವುದು ಸಾಂಸ್ಕೃತಿಕ ಭಯೋತ್ಪಾದನೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ ಹಿಂದಿ ಭಾಷೆಯನ್ನು ಆಂಗ್ಲ ಭಾಷೆಗೆ ಪರ್ಯಾಯ ವಾಗಿ ಬಳಸಬೇಕೆಂಬ ಶಾ ಹೇಳಿಕೆ ಖಂಡನೀಯ. ಒಕ್ಕೂಟ ವ್ಯವಸ್ಥೆ ಯನ್ನೇ ಬುಡಮೇಲು ಮಾಡಲು ಹೊರಟಿರುವ ಕೇಂದ್ರ ಸರಕಾರದ ಈ ಭಾಷಾ ಭಯೋತ್ಪಾದನೆಯನ್ನು ನಾವೆಲ್ಲರೂ ಖಂಡಿಸಬೇಕು.
– ಜೆಡಿಎಸ್