ಮುಖ ನೋಡಿದೇಟಿಗೇ ಕಾಶೀನಾಥ್ ಅವರಿಗೆ ಹುಷಾರಿಲ್ಲ ಎಂದು ಹೇಳಿಬಿಡಬಹುದಿತ್ತು. ಕೇಳಿದರೆ, “ಹೌದು’ ಎಂಬ ಉತ್ತರ ಬಂತು. ಒಂದು ತಿಂಗಳ ಹಿಂದೆ ಕೆಮ್ಮು ಬಂತಂತೆ. ಆ ಕೆಮ್ಮು ಜಾಸ್ತಿಯಾಗಿ, ರಾತ್ರಿ ಹೊತ್ತು ನಿದ್ದೆ ಕಡಿಮೆಯಾಯಿತಂತೆ. ಕೊನೆಯ ಮನೆಯವರ ಒತ್ತಾಯದ ಮೇರೆಗೆ ಡಾಕ್ಟರ್ ಬಳಿ ಹೊದರೆ, ಅವರು ಹತ್ತಾರು ಪರೀಕ್ಷೆಗಳನ್ನು ಮಾಡಿಸುವುದಕ್ಕೆ ಹೇಳಿದ್ದಾರೆ. “ಏ ಅವೆಲ್ಲಾ ಬೇಡ …’ ಅಂತ ಸುಮ್ಮನಾದರೆ, ಮನೆಯವರು ಒತ್ತಾಯ ಮಾಡಿದರಂತೆ. ಕೊನೆಗೆ ಅದೇನೂ ಅಷ್ಟು ಸೀರಿಯಸ್ ಅಲ್ಲ, ಗ್ಯಾಸ್ಟ್ರಿಕ್ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದಿಷ್ಟು ಔಷಧಿ, ಪಥ್ಯ ಎಲ್ಲಾ ಹೇಳಿದ್ದಾರೆ. ಅವೆಲ್ಲಾ ಸರಿಯಾಗಿ ಪಾಲಿಸಿದರೆ, ಬೇಗ ಸರಿ ಹೋಗುತ್ತದಂತೆ ಎಂದರು ಕಾಶೀನಾಥ್.
Advertisement
“ನಂಗೆ ಬಿಪಿ, ಶುಗರ್ ಯಾವುದೂ ಇಲ್ಲ. ಚೆನ್ನಾಗಿಯೇ ಇದ್ದೆ. ಈಗ ಒಂದು ತಿಂಗಳ ಹಿಂದೆ ಶುರುವಾಯ್ತು ನೋಡಿ, ಕೆಲವು ದಿನಗಳ ಹಿಂದೆ ಸರಿಯಾಗಿ ಮಾತಾಡೋಕೂ ಆಗುತ್ತಿರಲಿಲ್ಲ. ಈಗ ಪರವಾಗಿಲ್ಲ. ಆದರೂ ಕೆಮ್ಮು ಇದೆ, ಟ್ರೀಟ್‌ಮೆಂಟ್‌ನಲ್ಲಿದ್ದೀನಿ’ ಎಂದರು ಅವರು. ಸರಿ, ಕಾಫಿ ಕುಡೀತಾ ಮಾತಾಡೋಣ ಎಂದರೆ, ಅವರು ಒಪ್ಪಲಿಲ್ಲ. ಹೊರಗೆ ಫುಡ್ ತಗೋಬಾರ್ಧು ಅಂತ ಡಾಕ್ಟರ್ ಹೇಳಿದ್ದಾರೆ ಅಂತ ಹೇಳುತ್ತಲೇ ಕಾಫಿಯನ್ನು ನಿರಾಕರಿಸಿದರು. ಹಾಗಂತ ಮಾತನಾಡುವುದಿಲ್ಲ ಎಂದು ಹೇಳಲಿಲ್ಲ, ಮಾತಾಡೋಣ ಬನ್ನಿ ಎಂದು ಮಾತಿಗೆ ಕುಳಿತರು.
Related Articles
Advertisement
“ಚೌಕ’ ಚಿತ್ರದಲ್ಲಿ ವಿಶ್ವನಾಥ್ ಪಾತ್ರ ಬಂದಾಗ ಮೊದಲು ಇದು ತನ್ನಿಂದ ಆಗೋ ಪಾತ್ರವಾ ಎಂಬ ಸಂದೇಹ ಇತ್ತಂತೆ. “ಅಲ್ಲೀವರೆಗೂ ನಾನು ಮಾಡಿದ್ದೆಲ್ಲಾ ಕಾಮಿಡಿ ಪಾತ್ರಗಳೇ. ಇದು ಅದಕ್ಕೆ ತದ್ವಿರುದ್ಧವಾದ ರೋಲು. ಈ ಪಾತ್ರದಲ್ಲಿ ಅಳಿಸಬೇಕು. ನಗಿಸೋದಕ್ಕಿಂತ ಅಳಿಸೋದು ಕಷ್ಟ. ಅದೊಂಥರಾ ಸವಾಲು. ಅಲ್ಲಿ ಜನರಿಗೆ ಕಾಶೀನಾಥ್ ಕಾಣಬಾರದು, ವಿಶ್ವನಾಥ್ ಕಾಣಿಸಬೇಕು. ಹಾಗಾಗಿ ನನ್ನ ಮ್ಯಾನರಿಸಂ, ಔಟ್‌ಲುಕ್ ಎಲ್ಲವನ್ನೂ ಬದಲಾಯಿಸಬೇಕಿತ್ತು. ಅದೆಲ್ಲಾ ಬದಲಾಯಿಸಿ, ಪ್ರೇಕ್ಷಕರ ಮನಸ್ಸಿಗೆ ಪ್ರಭಾವ ಬೀರುವುದು ಸುಲಭಾನಾ? ಆ ಪಾತ್ರಕ್ಕೆ ಅಷ್ಟೊಂದು ಪ್ರತಿಕ್ರಿಯೆ ಸಿಗಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ಒಬ್ಬ ಹುಡುಗಿ ಬಂದು, ತಮ್ಮ ತಂದೆಯ ಹುಟ್ಟುಹಬ್ಬವನ್ನು ನನ್ನ ಜೊತೆಗೆ ಆಚರಿಸಬಹುದಾ ಎಂದು ಕೇಳಿದಳು. ಆಕೆಗೂ ತಾಯಿ ಇಲ್ಲವಂತೆ. ತಂದೆಯೇ ನೋಡಿಕೊಂಡರಂತೆ. ಚಿತ್ರದಲ್ಲಿ ನನ್ನ ಪಾತ್ರ ನೋಡಿ ಆಕೆಗೆ ಏನನಿಸಿತೋ, ಬಂದು ಐದು ನಿಮಿಷ ಟೈಮ್ ಕೊಡಿ ಎಂದು, ಬರ್ಥ್ಡೇ ಮಾಡಿಕೊಂಡಳು’ ಎನ್ನುತ್ತಾರೆ ಅವರು.
ಸರಿ, ನಿಮ್ಮ ಮಗನ ಜೊತೆಗೆ ಸೇರಿ ಸಿನಿಮಾ ಮಾಡೋ ವಿಷಯ ಏನಾಯಿತು ಅಂತ ಪ್ರಶ್ನೆ ಬಂದಿತ್ತು. “ಈ ಸಿನಿಮಾ ಇದೆಯಲ್ಲ, ಅಲ್ಲಿ ಅಂದೊRಂಡಿದ್ದು ಯಾವುದೂ ಆಗೋಲ್ಲ. ಉದಾಹರಣೆ ನೋಡಿ, “ಚೌಕ’ ಅಂತ ಚಿತ್ರದಲ್ಲಿ ನಾನು ನಟಿಸಬಹುದು ಅಂತ ಕನಸುಮನಸಿನಲ್ಲೂ ಎಣಿಸಿರಲಿಲ್ಲ. ಆ ಚಿತ್ರ ಮಾಡ್ಲಿಲ್ವಾ? ಅದಕ್ಕೂ ಮುನ್ನ ನಾನು ಬರೀ ಡಬ್ಬಲ್ ಮೀನಿಂಗ್ ಪಾತ್ರ ಮಾಡ್ತೀನಿ ಅಂತ ಎಲ್ಲಾ ಹೇಳ್ತಾ ಇದ್ರು. ಆ ಚಿತ್ರದಿಂದ ನನ್ನ ಪಾತ್ರ ಡಬ್ಬಲ್ ಆಯ್ತು’ ಎಂದು ನಕ್ಕರು ಕಾಶೀನಾಥ್.
ಹನಿಮೂನ್ ನ್ಯೂರಾಸಿಸ್ ಅಂತಾರೆಡಬ್ಬಲ್ ಮೀನಿಂಗ್ ಎನ್ನುತ್ತಿದ್ದಂತೆಯೇ “ಅನುಭವ’ ಮತ್ತು “ಅನಂತನ ಅವಾಂತರ’ ಚಿತ್ರಗಳು ನೆನಪಿಗೆ ಬಂದವು. ಅವು ಬರೀ ಕಾಮಿಡಿ ಚಿತ್ರಗಳಾಗಿರಲಿಲ್ಲ, ಅದರ ಹಿಂದೆ ಒಂದು ಆರೋಗ್ಯದ ಸಮಸ್ಯೆ ಇದೆ ಅಂತ ವಿವರಿಸಿದರು ಕಾಶೀನಾಥ್. “ಅದೊಂದು ಯುವಕನ ಮಾನಸಿಕ ವೇದನೆಯ ಕಥೆ. ರಿಯಲ್ ಸ್ಟೋರಿ ಅದು. ಡಾ.ಸಿ.ಆರ್. ಚಂದ್ರಶೇಖರ್ ಅವರ ಜೊತೆಗೆ ಮಾತಾಡಿಯೇ ಕಥೆ ಮಾಡಿದ್ದು. ಅದಕ್ಕೆ ಹನಿಮೂನ್ ನ್ಯೂರಾಸಿಸ್ ಅಂತಾರೆ. ಅಂದರೆ, ಈ ಮೊದಲ ಅನುಭವ ಆಗುತ್ತಲ್ಲ, ಆ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಟೆನ್ಶನ್ ಇರುತ್ತೆ. ಮೊದಲ ಅನುಭವದಲ್ಲಿ ಗೆಲ್ತಿàವೋ, ಸೋಲ್ತಿàವೋ ಎನ್ನುವ ಭಯ ಸಹಜ. ಎಷ್ಟೋ ಜನ ಆ ಭಯದಲ್ಲೇ ಸೋಲ್ತಾರೆ. ಕ್ರಮೇಣ, ಪ್ರತಿ ಬಾರಿ ಸಹ ಆ ಭಯ ಹೆಚ್ಚಾಗತ್ತೆ. ಅದು ಜಾಸ್ತಿಯಾಗಿ ಒಂದು ಚೈನ್ ಆದಾಗ, ನ್ಯೂರೋಸಿಸ್ ಆಗುತ್ತೆ. ಅದನ್ನು ಸೈಕ್ರಿಯಾಟಿಸ್ಟ್‌ಗಳೇ ಬಗೆಹರಿಸಬೇಕು. ಕ್ರಮೇಣ ವಿಶ್ವಾಸ ತುಂಬಬೇಕು. ಈ ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದೆ. ಆದರೆ, ಆಗಿನ ಕಾಲಕ್ಕೆ ಈ ಚಿತ್ರದ ಬಗ್ಗೆ ತುಂಬಾ ಟೀಕೆ ಬಂತು. ಚಿತ್ರ ಟ್ರಿಬ್ಯೂನಲ್‌ಗೂ ಹೋಗಿತ್ತು. ಇಬ್ಬರು ಹೆಂಗಸರು ಚಿತ್ರ ನೋಡಿ, ತುಂಬಾ ಎಂಜಾಯ್ ಮಾಡಿದ್ವಿ ಅಂತ ಹೇಳಿದ್ರು. ಅದೇ ರೀತಿ ತುಂಬಾ ಜನ ಚಿತ್ರ ನೋಡಿ ಖುಷಿಪಟ್ರಾ. ಆದರೆ, ಅದೇ ತರಹ ಸಮಸ್ಯೆàನೂ ಎದುರಿಸ್ಬೇಕಾಯ್ತು’ ಎನ್ನುತ್ತಾರೆ ಅವರು. ಮುಖಕ್ಕೆ ಕನ್ನಡಿ ಹಿಡಿದಾಗ ಜನ ಒಪ್ಪುವುದಿಲ್ಲ
ಇನ್ನು “ಅನುಭವ’ ಚಿತ್ರದ ಹಿಂದೆಯೂ ಒಂದು ಕಥೆ ಇದೆ ಮತ್ತು ಅದೂ ಸಹ ನೈಜ ಘಟನೆಯನ್ನಾಧರಿಸಿದ ಚಿತ್ರವಂತೆ. “ಆ ಕಾಲಕ್ಕೆ ಏನಾದ್ರೂ ಡಿಫರೆಂಟ್ ಆಗಿ ಮಾಡ್ಬೇಕು ಅಂತ ಅನಿಸ್ತಿತ್ತು. ಇದಕ್ಕೂ ಒಂದು ನೈಜ ಘಟನೆ ಸ್ಫೂರ್ತಿ. “ಬಾಲಿಕಾ ವಧು’ ಕಥೆಯನ್ನಿಟ್ಟುಕೊಂಡು, ಬೇರೆ ತರಹ ನೈಜವಾಗಿ ಮಾಡೋಣ ಅಂತ ಹೊರಟೆ. ಈ ಚಿತ್ರವನ್ನ ಸೆನ್ಸಾರ್‌ನವರು ನೋಡಿ, “ಲೈಫ್ಲ್ಲಿ ಇಂಥಾ ವಲ್ಗರ್ ಚಿತ್ರ’ ನೋಡಿಲ್ಲ ಎಂದುಬಿಟ್ಟರು. ಅಂಥದ್ದೇನಿದೆ ಅಂತ ಯೋಚಿಸಿದಾಗ, ಅದರಲ್ಲೊಂದು ಪಾತ್ರ, ಅವರ ತರಹವೇ ಇದೆ ಅಂತ ಗೊತ್ತಾಯ್ತು. ಚಿತ್ರದ ಒಂದು ಸೀನ್‌ನಲ್ಲಿ ಒಬ್ಬ ನಿರೋಧ್ ಕೇಳ್ಕೊಂಡು ಅಂಗಡಿಗೆ ಬರ್ತಾನೆ. ಆತ, ಸೆನ್ಸಾರ್ ಅಧಿಕಾರಿಯ ತರಹವೇ ಇದ್ದಾನೆ. ಅದು ಅವರಿಗೆ ಚುಚ್ಚಿದೆ. ಅದೇ ಕಾರಣಕ್ಕೆ ಅವರು ಅದನ್ನ ವಲ್ಗರ್ ಸಿನಿಮಾ ಎಂದರು. ಇದು ಒಂದು ಉದಾಹರಣೆಯಲ್ಲ. ಆ ಚಿತ್ರದಲ್ಲಿನ ಹಲವು ಪಾತ್ರಗಳಲ್ಲಿ ಜನ ತಮ್ಮನ್ನು ಗುರುತಿಸಿಕೊಂಡರು. ಮುಖಕ್ಕೆ ಕನ್ನಡಿ ಹಿಡಿದಾಗ, ಜನ ಒಪ್ಪುವುದಿಲ್ಲ. ಹಾಗಾಗಿ ಬಹಳಷ್ಟು ಜನರು ಚಿತ್ರದ ಬಗ್ಗೆ ಬೈದಿದ್ದರು. ಆದರೆ, ನಾನು ಗಮನಿಸಿದ್ದೀನಿ. ಈಗಲೂ ಜನ ಆ ಚಿತ್ರದ ಬಗ್ಗೆ ಮಾತಾಡ್ತಾರೆ. ಅಷ್ಟೇ ಅಲ್ಲ, ಈಗಿನ ಜನರೇಶನ್ ಹುಡುಗರು, ಮೊಬೈಲ್‌ನಲ್ಲಿ ಆ ಚಿತ್ರ ಇಟ್ಕೊಂಡಿರ್ತಾರೆ. 35 ವರ್ಷಗಳ ಹಿಂದಿನ ಸಿನಿಮಾ ಅದು. ಈಗಲೂ ಜನ ಅದನ್ನು ನೆನಪಿಸಿಕೊಳ್ತಾರೆ ಅಂದರೆ …’ ಎಂದು ಕಾಶೀನಾಥ್ ಹೇಳುತ್ತಿದ್ದಂತೆಯೇ, ಇನ್ನೊಂದು ಪ್ರಶ್ನೆ ಬಂತು. ಉಪೇಂದ್ರ ತರಹ ಯಾಕೆ ಇರಬಾರ್ಧು?
ಸಾಮಾನ್ಯವಾಗಿ ಕಾಮಣ್ಣ ಒಬ್ಬ ಸುಂದರ ಪುರುಷ ಅಂತ ಎಲ್ಲಾ ಅಂದೊಡಿದ್ದಾರೆ, ನೀವು ನೋಡಿದ್ರೆ “ಅನಂತನ ಅವಾಂತರ’ದಲ್ಲಿ ಆ ಪಾತ್ರವನ್ನು ಉಪೇಂದ್ರ ಅವರಿಂದ ಮಾಡಿಸಿದ್ರಲ್ಲ ಎಂಬ ಪ್ರಶ್ನೆ ಬಂತು. ಯಾಕಾಗಬಾರ್ಧು? ಎಂಬ ಉತ್ತರದೊಂದಿಗೆ ಕಾಶೀನಾಥ್ ಮಾತು ಶುರು ಮಾಡಿರಬಹುದು. “ಹೌದು, ಕಾಮಣ್ಣ ನೀಟ್ ಪುರುಷ ಎಂಬ ಕಲ್ಪನೆ ಇದೆ. ಆದರೆ, ಉಪೇಂದ್ರ ತರಹ ಯಾಕೆ ಇರಬಾರ್ಧು? ಇರಬಹುದಲ್ವಾ? ಮೊದಲು ನಾನು ಅವನಿಗೆ ಈ ಪಾತ್ರ ಮಾಡೋಕೆ ಹೇಳಾªಗ, ಅವನಿಗೂ ಆಶ್ಚರ್ಯವಾಗಿತ್ತು. ಕೊನೆಗೆ ಅವನಿಂದಲೇ ಮಾಡಿಸಿದೆ’ ಎಂಬ ಮಾತು ಅವರಿಂದ ಬಂತು. ಅವರನ್ನು ಕೂಡಿಸೋ ಹುಮ್ಮಸ್ಸಿಲ್ಲ
ಸರಿ, ನೀವು ಗುರು-ಶಿಷ್ಯರೆಲ್ಲಾ ಯಾಕೆ ಒಟ್ಟಿಗೆ ಸಿನಿಮಾ ಮಾಡಬಾರದು ಎಂಬ ಸಲಹೆ ಬಂತು. ಅದೆಲ್ಲಾ ಕಷ್ಟ ಎಂಬ ಉತ್ತರ ಬಂತು. “ಒಟ್ಟಿಗೆ ಸಿನಿಮಾ ಮಾಡೋದೆಲ್ಲಾ ಕಷ್ಟ. ಮನೆಗೆ ಹೋದರೆ ಸಿಗ್ತಾರೆ. ಆದರೆ, ಅವರನ್ನೆಲ್ಲಾ ಒಟ್ಟಿಗೆ ಸೇರಿಸೋದು ಕಷ್ಟ. ಅವರನ್ನು ಕೂಡಿಸೋ ಹುಮ್ಮಸ್ಸಿಲ್ಲ. ಹಾಗಾಗಿ ಚಿತ್ರ ಮಾಡೋದೆಲ್ಲಾ ಬಹಳ ಕಷ್ಟ. ಅವರೂ ಸಿನಿಮಾ ಮಾಡ್ತಿರ್ತಾರೆ. ಅವರಿಗೂ ತೊಂದರೆ ಕೊಡಬಾರ್ಧು. ಹಾಗಾಗಿ ಸಿನಿಮಾ ಯೋಚನೆ ಇಲ್ಲ’ ಎನ್ನುತ್ತಾರೆ ಅವರು. ಚೇತನ್ ನಾಡಿಗೇರ್; ಚಿತ್ರಗಳು: ಮನು