Advertisement
ಬೋಳ ಗ್ರಾ.ಪಂ. ವ್ಯಾಪ್ತಿಯ ಈ ಸೇತುವೆ ನಿರ್ಮಾಣಗೊಂಡು ಹಲವು ವರ್ಷ ಕಳೆದಿದ್ದರೂ ಅದರ ನಿರ್ವಹಣೆ ನಡೆದಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
ಈ ಕಿರು ಸೇತುವೆ ಇದೀಗ ಅಪಘಾತ ವಲಯವಾಗಿ ಮಾರ್ಪಟ್ಟಿದ್ದು ಪ್ರತಿ ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಲೇ ಇವೆ. ಎರಡೂ ಬದಿಗಳಲ್ಲಿ ತಿರುವು, ತಗ್ಗು ಪ್ರದೇಶವಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ ಚಲಿಸಿದಾಗ ಗೊತ್ತುಗುರಿ ಇಲ್ಲದೆ ಅಪಘಾತಗಳು ನಡೆಯುತ್ತಿವೆ. ಪಕ್ಕದಲ್ಲೇ ಪ್ರಾಥಮಿಕ ಶಾಲೆಯೂ ಇದ್ದು ಇಲ್ಲಿನ ಮಕ್ಕಳು ನಿತ್ಯ ಸೇತುವೆ ದಾಟುವುದು ತುಂಬಾ ಅಪಾಯಕಾರಿಯಾಗಿದೆ. ಈ ಕಿರು ಸೇತುವೆ ಅಭಿವೃದ್ಧಿಯಾಗ ಬೇಕೆಂಬುದು ಬೋಳ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿದ್ದು ಈಗಾಗಲೇ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
Related Articles
ಕಿರು ಸೇತುವೆಯ ಅಗಲೀಕರಣ ಬೇಡಿಕೆಯಿದ್ದರೂ ಪ್ರತೀ ಬಾರಿಯೂ ಬರಿ ಕಿರು ಸೇತುವೆಗೆ ಸುಣ್ಣ ಬಣ್ಣವನ್ನು ಬಳಿಯುವುದನ್ನು ಬಿಟ್ಟು ಅದರ ಅಗಲೀಕರಣದ ಬಗ್ಗೆ ಇಲಾಖೆ ಅಥವಾ ಅಧಿಕಾರಿಗಳು ಮನಸ್ಸೇ ಮಾಡುತ್ತಿಲ್ಲ. ಪದೇ ಪದೇ ಅಪಘಾತವನ್ನು ಸೃಷ್ಟಿಸುತ್ತಿರುವ ಈ ಸೇತುವೆಯ ಅಗಲೀಕರಣ ನಡೆಸುವಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement
ಶೀಘ್ರ ಕಾಮಗಾರಿ ಆರಂಭಈ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಇದರ ಕಾಮಗಾರಿ ನಡೆಯಲಿದೆ.
-ಸತೀಶ್ ಪೂಜಾರಿ, ಬೋಳ ಗ್ರಾ.ಪಂ. ಮಾಜಿ ಅಧ್ಯಕ್ಷ ಶೀಘ್ರ ದುರಸ್ತಿಗೊಳಿಸಿ
ಸೇತುವೆ ನಿರ್ಮಾಣವಾದ ಬಳಿಕ ಇದುವರೆಗೂ ದುರಸ್ತಿ ನಡೆದಿಲ್ಲ. ಅಧಿ ಕಾರಿಗಳು ಎಚ್ಚೆತ್ತು ಕಿರು ಸೇತುವೆಯ ವಿಸ್ತರಣೆ ನಡೆಸಬೇಕಿದೆ..
-ಚಂದ್ರಹಾಸ್ ಪುತ್ರನ್, ಸ್ಥಳೀಯರು.