ಬೆಂಗಳೂರು: ಲಿಫ್ಟ್ನಲ್ಲಿ ಕೈ ತಾಕಿಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸೂಡಾನ್ ಮೂಲದ ನಾಲ್ವರ ವಿರುದ್ಧ ಹಲಸೂರುಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕಟ್ಟಡದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಸಂಘಟನೆಯೊಂದರ ರಾಜ್ಯಾಧಕ್ಷೆéಯೂ ಆಗಿರುವ ಮಹಿಳೆ ದೂರು ನೀಡಿದಾಕೆ. ಸೂಡಾನ್ ಮೂಲದ ಮೆಹಾ ಮೊಹ್ಮದ್, ಅಹ್ಮದ್, ಮೊಹಮದ್, ಅಹ್ಮದ್ ಮೊಹಮದ್ ವಿರುದ್ಧ ದೂರು ನೀಡಿದ್ದು, ಕೊನೆಗೆ ಠಾಣಾ ಮಟ್ಟದಲ್ಲೇ ಇತ್ಯರ್ಥ ಪಡಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವೊಂದರ ವಿಚಾರಣೆ ಸಂಬಂಧ ಸೂಡಾನ್‌ನ ಮೆಹಾ ಮೊಹ್ಮದ್ ತಮ್ಮ ಮೂವರು ಮಕ್ಕಳೊಂದಿಗೆ ಸೋಮವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಂದಿದ್ದರು. ಮಹಿಳೆ ಕೂಡ ಪ್ರಕರಣವೊಂದರಲ್ಲಿ ಕೋರ್ಟಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಎಲ್ಲರೂ ವಾಪಸ್ ಹೋಗುವಾಗ ಲಿಫ್ಟ್ನಲ್ಲಿ ತೆರಳಿದ್ದಾರೆ.
7-8 ಮಂದಿ ಸಾಮರ್ಥಯದ ಲಿಫ್ಟ್ನಲ್ಲಿ ಹತ್ತಾರು ಮಂದಿ ಹೋಗಿದ್ದು, ಲಿಫ್ಟ್ನಿಂದ ಹೊರ ಬರುವಾಗ ಸೂಡಾನ್ ಮೂಲದ ವ್ಯಕ್ತಿಗಳು ಮಹಿಳೆಯ ಕೈ ತಗುಲಿಸಿದ್ದಾರೆ. ಇದನ್ನು ಪ್ರಶ್ನಿಸಿದ ಮಹಿಳೆ ಜತೆ ಸೂಡಾನ್ ಮೂಲದವರು ಜಗಳ ತೆಗೆದಿದ್ದಾರೆ. ಈ ವೇಳೆ ವಕೀಲರು ಮತ್ತು ಮೂವರು ಯುವಕರ ನಡುವೆ ಮಾರಾಮಾರಿ ಕೂಡ ನಡೆದಿದೆ.
ಬಳಿಕ ಹಲಸೂರು ಗೇಟ್ ಠಾಣೆಗೆ ತೆರಳಿದ ಮಹಿಳೆ ಸೂಡಾನ್ ಪ್ರಜೆಗಳ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಎರಡು ಕಡೆಯ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ನಂತರ ಇಬ್ಬರು ದೂರುದಾರರ ಪರ ವಕೀಲರು ಠಾಣೆಗೆ ಬಂದು ರಾಜಿ ಮಾಡಿಕೊಂಡು ಹೋಗಿದ್ದಾರೆ ಎಂದು ಠಾಣೆಯ ಪೊಲೀಸರು ತಿಳಿಸಿದ್ದಾರೆ.