Advertisement

ಬೈಂದೂರು: ಅಬ್ಬಾ..! ಹೇಗಿದೆ ನೋಡಿ 20 ಅಡಿ ಉದ್ದದ ‘ದೈತ್ಯ’ ಹೆಬ್ಬಾವು!

11:54 PM Sep 29, 2020 | Hari Prasad |

ಬೈಂದೂರು: ಗೋಳಿಹೊಳೆ ಗ್ರಾಮದ ಅರೆಶಿರೂರು ರವಿ ಶೆಟ್ಟಿ ಬೈಂದೂರು ಅವರ ಮನೆಯ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಭಾರೀ ಪ್ರಯತ್ನದ ಬಳಿಕ ಈ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಯಿತು.

Advertisement

ಕರ್ನಾಟಕ ಕಾರ್ಮಿಕ ವೇದಿಕೆಯ ರಾಜ್ಯಾಧ್ಯಕ್ಷ ಕಾರ್ಮಿಕ ಮುಖಂಡ ಡಾ.ರವಿ ಶೆಟ್ಟಿ ಬೈಂದೂರು ಅವರ ಮನೆಯ ಅಡಿಕೆ ತೋಟದಲ್ಲಿ ಅವರು ಸಾಕಿದ ನಾಯಿಯನ್ನು ಈ ಹೆಬ್ಬಾವು ಹಿಡಿದು ನುಂಗುತ್ತಿತ್ತು.

ಈ ಸಂದರ್ಭದಲ್ಲಿ ರವಿ ಶೆಟ್ಟಿಯವರು ಹಾವಿನ ಬಾಯಿಂದ ನಾಯಿಯನ್ನು ಬಿಡಿಸಿದ್ದಲ್ಲದೆ ಸುಮಾರು 20 ಅಡಿ ಉದ್ದ 50ಕೆಜಿಯಷ್ಟು ಭಾರ ಇರುವ ಹಾವನ್ನು ಅದಕ್ಕೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಹಿಡಿದರು.

ಆ ಬಳಿಕ ಗೋಳಿಹೊಳೆ ವಿಭಾಗಿಯ ಪ್ರಭಾರ ಅರಣ್ಯ ರಕ್ಷಕ  ರಾಜೀವ ಎಸ್ ಗೌಡರ ಸಹಾಯದೊಂದಿಗೆ ಈ ಬೃಹತ್ ಹೆಬ್ಬಾವನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ


ದೊಡ್ಡಗಾತ್ರದ ಈ ಹೆಬ್ಬಾವನ್ನು ಒಬ್ಬರಿಂದ ಎತ್ತಿ ಹಿಡಿಯುವುದು ಸಾಧ್ಯವಾಗದೇ ಇದ್ದಾಗ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಯಿತು.

Advertisement

ಮಾಹಿತಿ ಸಿಕ್ಕಿದ ತಕ್ಷಣ ಸಮೀಪದಲ್ಲೇ ಇದ್ದ ಅರಣ್ಯ ರಕ್ಷಕರಾದ ರಾಜೀವ್ ಎಸ್ ಗೌಡರು ಮತ್ತು ಸಹಾಯಕರಾದ ನಾರಾಯಣ ಗೌಡರು ಆಗಮಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿಯಲು ಸಹಕರಿಸಿದರು.

ರವಿ ಶೆಟ್ಟಿಯವರು ಇಂದು ಬೆಂಗಳೂರಿನಿಂದ ಬಂದ ಹತ್ತೇ ನಿಮಿಷದಲ್ಲಿ ಈ ಘಟನೆ ನಡೆದಿದ್ದು ಇನ್ನು ಎರಡೇ ನಿಮಿಷ ಕಳೆದಿದ್ದರು ಹಾವು ನಾಯಿಯನ್ನು ನುಂಗುತ್ತಿತ್ತು ಮತ್ತು ಅಕ್ಕಪಕ್ಕದ ಮನೆಯವರು ಮತ್ತು ಮಕ್ಕಳು ಓಡಾಡುವ ಸ್ಥಳ ಆಗಿರುವುದರಿಂದ ಹಾವನ್ನು ಎಚ್ಚರಿಕೆಯಿಂದ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಗಿದೆ.

ಇಷ್ಟು ದೊಡ್ಡ ಹಾವನ್ನು, ಅದೂ ಸಹ ತನ್ನ ಆಹಾರವನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಇದನ್ನು ಹಿಡಿಯುವುದು ತಕ್ಷಣಕ್ಕೆ ನಮಗೆ ದೊಡ್ಡ ಸವಾಲಾಗಿತ್ತು ಎಂದು ತನ್ನ ರವಿ ಶೆಟ್ಟಿಯವರು ತನ್ನ ಅನುಭವವನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next