Advertisement
ಈ ವೇಳೆ ಕಚೇರಿಯಲ್ಲಿದ್ದ ಹೆಸ್ಕಾಂ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರು ವಿದ್ಯುತ್ ಸಮಸ್ಯೆ ಬಗೆಹರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಸ್ಟೇಶನ್ ಕಾಂಪೌಂಡ್ ಹೊರಗೆ ಧರಣಿ ಕುಳಿತರು. ಸ್ಥಳಕ್ಕೆ ದೌಡಾಯಿಸಿದ ಮುದ್ದೇಬಿಹಾಳ ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ಎಂ.ಬಿ. ಬಿರಾದಾರ ನೇತೃತ್ವದ ಡಿಆರ್ ಪೊಲೀಸರು ರೈತರು, ಗ್ರಾಮಸ್ಥರನ್ನು ನಿಭಾಯಿಸುವಲ್ಲಿ ಹೈರಾಣಾದರು. ಢವಳಗಿ ಸ್ಟೇಶನ್ ವ್ಯಾಪ್ತಿಯ ರೈತರಿಗೆ ಬೆಳೆಗಳಿಗೆ ನೀರುಣಿಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸತತ 4 ಗಂಟೆ ಗುಣಮಟ್ಟದ ವಿದ್ಯುತ್ ಕೊಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಆದರೆ ಢವಳಗಿ ಹೋಬಳಿಯಲ್ಲಿ ಇದು ಸಮರ್ಪಕವಾಗಿ ಜಾರಿಯಾಗಿಲ್ಲ. ಇದರಿಂದಾಗಿ ಹೋಬಳಿ ವ್ಯಾಪ್ತಿಯ ಬಹುತೇಕ ರೈತರು ಬೆಳೆಗಳಿಗೆ ನೀರುಣಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಳೆಗಳು ಒಣಗುತ್ತಿವೆ. ಈ ಬಗ್ಗೆ ವಾರದ ಹಿಂದೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಭಟನಾನಿರತ ರೈತರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಈ ಕುರಿತು ತಾಳಿಕೋಟೆ ಹೆಸ್ಕಾಂ ಎಇಇ ತುಕಾರಾಮ ರಾಠೊಡ ಅವರಿಗೆ ಲಿಖೀತ ಮನವಿಯನ್ನೂ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಜುಗೌಡ ಪಾಟೀಲ, ವಿಜಯಕುಮಾರ ದೇಸಾಯಿ, ರಾಮನಗೌಡ ಬಿರಾದಾರ, ಬಸವರಾಜ ಸಿಂಹಾಸನ, ಪ್ರಭು ಬಿರಾದಾರ, ಪ್ರಭು ಹೂಗಾರ, ತಮ್ಮಣ್ಣ ಬೇಲಾಳ, ಮಾಂತು ಹಡಪದ, ಚನ್ನಪ್ಪಗೌಡ ಬಿರಾದಾರ, ಶಾಂತು ವಡವಡಗಿ, ಅಪ್ಪು ಕೊಣ್ಣೂರ, ರಾಜು ಚಿಗರಿ, ಮುತ್ತು ಬಿರಾದಾರ ಸೇರಿದಂತೆ ಮಡಿಕೇಶ್ವರ, ಪಡೇಕನೂರ ಭಾಗದ ನೂರಾರು ರೈತರು, ಗ್ರಾಮಸ್ಥರು ಇದ್ದರು.