ಮೈಸೂರು: ಈ ಹಿಂದಿನ ಅಸ್ಥಿರ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಜನರು ಸ್ಥಿರವಾದ ಸರ್ಕಾರವನ್ನು ಬೆಂಬಲ ನೀಡುತ್ತಾರೆ ಎಂದು ಡಿಸಿಎಂ ಸಿ.ಎನ್. ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.
ನಗರದ ಚಾಮುಂಡಿಬೆಟ್ಟಕ್ಕೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಜನರನ್ನು ಭಾವನಾತ್ಮಕವಾಗಿ ತಿರುಗಿಸುವ ಕೆಲಸ ಮಾಡುತ್ತಿವೆ. ಜನರಿಗೆ ಇವರ ತಪ್ಪುಗಳು ಗೊತ್ತಿವೆ. ಇವರು ಯಾವ ಪ್ರತಿಷ್ಠೆ ಇಟ್ಟುಕೊಂಡು ಮಾತನಾಡುತ್ತಿದ್ದಾರೆ? ಇಲ್ಲಿ ಯಾವ ಪ್ರತಿಷ್ಠೆ ಮುಖ್ಯವಲ್ಲ, ಜನರು ಇಟ್ಟಿರುವ ನಂಬಿಕೆ ಮುಖ್ಯ ಎಂದರು.
ಕಳೆದ ಬಾರಿಯ ಸರಿಯಾದ ಸರ್ಕಾರ ಇರಲಿಲ್ಲ, ಅಸ್ಥಿರ ಸರ್ಕಾರ ಇತ್ತು. ಈಗಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಕಚ್ಚಾಟ ನಡೆಸುತ್ತಿವೆ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ಕಚ್ಚಾಟವನ್ನು ಬಯಲು ಮಾಡಿಕೊಳ್ಳುತ್ತಿದ್ದಾರೆ. ಜೊತೆಯಲ್ಲೆ ಇದ್ದು ಗುಂಡಿ ತೋಡುತ್ತಿದ್ದರು ಅಂತ ಜೆಡಿಎಸ್‌ಗೆ ಗೊತ್ತಾಗಿದೆ. ಇದು ಅಧಿಕಾರದಲ್ಲಿ ಇದ್ದಾಗ, ಇಲ್ಲದಿದ್ದಾಗ ಕುಮಾರಸ್ವಾಮಿ ಅವರಿಗೆ ಗೊತ್ತಾಗಿದೆ. ಜೊತೆಯಲ್ಲೇ ಇದ್ದು ಈ ರೀತಿ ಕುತಂತ್ರ ಮಾಡಿದರು ಅಂತ ಅವರಿಗೆ ಗೊತ್ತಾಗಿದೆ. ಇದೆಲ್ಲ ರಾಜ್ಯದ ಜನತೆಗೂ ಗೊತ್ತಾಗಿದೆ. ಜನರು ಸ್ಥಿರವಾದ ಸರ್ಕಾರ ಕೊಡ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ:ಉತ್ತರ ಕರ್ನಾಟದ ನೆರೆ ಸಂತೃಸ್ಥರಿಗೆ ಅಗತ್ಯ ನೆರವು: ಪ್ರಧಾನಿ ಮೋದಿ ಭರವಸೆ
ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ಈ ಕ್ಷೇತ್ರದಲ್ಲಿ ಪ್ರತಿಷ್ಠೆ ಬಗ್ಗೆ ಮಾತಾಡುವವರಿಗೆ ಅದನ್ನು ಜನ ನಿರ್ಣಯ ಮಾಡುತ್ತಾರೆ. ಜನರಿಗೆ ಸ್ಥಿರ ಸರ್ಕಾರ ಬೇಕು. ಹೀಗಾಗಿ, ಅವರು ಬಿಜೆಪಿ ಜೊತೆ ಇರುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರಿಗೆ ಮಾತಾಡಲು ಯಾವ ನೈತಿಕತೆ ಇಲ್ಲ. ಬರ ಬಂದಾಗ ಜನರಿಗೆ ಸ್ಪಂದಿಸದೆ ಇದ್ದವರು ಅವರು. ಅಧಿಕಾರದಲ್ಲಿದ್ದ ವೇಳೆ ಒಂದು ಪ್ರವಾಸ ಮಾಡದೆ ಇದ್ದವರು ಸಿದ್ದರಾಮಯ್ಯ. ಇದೀಗಾ ಏನ್ ಬೇಕೋ ಹಾಗೆ ಹೇಳಿಕೆ ಕೊಡ್ತಿದ್ದಾರೆ. ಜನರಿಗೆ ಸ್ಪಂದಿಸದ ಅವರು ಈಗ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.