Advertisement

ರಾಜ್ಯದಲ್ಲಿ ಜನ, ಅಧಿಕಾರಿಗಳು ಬದಲಾವಣೆ ಬಯಸುತ್ತಿದ್ದಾರೆ: ಡಿ.ಕೆ.ಶಿವಕುಮಾರ್

02:44 PM Dec 04, 2021 | keerthan |

ಶಿವಮೊಗ್ಗ: ರಾಜ್ಯದಲ್ಲಿ ಜನ, ಅಧಿಕಾರಿಗಳು ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಭ್ರಷ್ಟ ಸರ್ಕಾರ ಇರಬೇಕೆ ಎಂದು ಕೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಜವಾಬ್ದಾರಿಯಿಂದ ಮತ ನೀಡಲಿದ್ದಾರೆ. ಕಾಂಗ್ರೆಸ್ 15 ಸ್ಥಾನ ಗೆಲ್ಲುವುದು ಖಚಿತ ಎಂದರು.

ಈಶ್ವರಪ್ಪ ಸಿಎಂ‌ ಬದಲಾವಣೆ ಎಂದು ಹೇಳಿದ್ದಾರೆ. ಅವರು ಹೇಳಿದ ಮೇಲೆ ನಾನು ಏನು ಹೇಳಲಿ? ಹಿಂದೆಯೂ ಯಡಿಯೂರಪ್ಪ ವಿಷಯದಲ್ಲಿ ಹೀಗೆ ಮಾತು ಕೇಳಿ ಬಂದಿತ್ತು ಎಂದರು.

ಇದನ್ನೂ ಓದಿ:ತಿರುಪತಿಯಲ್ಲಿ ಆಣೆ ಮಾಡಲು ನಾನು ಸಿದ್ದ, ಆದರೆ..:ಎಚ್ಚರಿಕೆ ನೀಡಿದ ಶಾಸಕ ಎಸ್.ಆರ್.ವಿಶ್ವನಾಥ್

ಡಿ.11ರಂದು ಬೆಲೆಯೇರಿಕೆ ವಿರುದ್ಧ ಪಕ್ಷದ ಪ್ರತಿಭಟನೆಯಿದೆ. ಇದರ ನಂತರ ಸದನದಲ್ಲಿ ರಾಜ್ಯದ ಭ್ರಷ್ಟಾಚಾರ ಹಾಗೂ‌ ಹಗರಣ ಸೇರಿದಂತೆ ಇತರ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದ ಡಿಕೆ ಶಿವಕುಮಾರ್, ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಬಹಳಷ್ಟು ಜನ ಬರುವವರಿದ್ದಾರೆ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next