Advertisement

ಪೆಂಟಗನ್‌ ಚಿತ್ರದ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ

04:24 PM Mar 04, 2021 | Team Udayavani |

“ಜಿ ಸಿನಿಮಾಸ್‌’ ಬ್ಯಾನರ್‌ನಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿರುವ “ಪೆಂಟಗನ್‌’ ಚಿತ್ರದ ಮೊದಲ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆಯಾಗಿದೆ.

Advertisement

ಐದು ವಿಭಿನ್ನ ಕಥೆಗಳನ್ನು ಹೊಂದಿರುವ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಪೆಂಟಗನ್‌’ ಚಿತ್ರಕ್ಕೆ ಆಕಾಶ್‌ ಶ್ರೀವತ್ಸ, ಚಂದ್ರಮೋಹನ್‌, ರಾಘು ಶಿವಮೊಗ್ಗ, ಕಿರಣ್‌ ಕುಮಾರ್‌, ಮತ್ತು ಗುರು ದೇಶಪಾಂಡೆ ಸೇರಿದಂತೆ ಐವರು ನಿರ್ದೇಶಕರು ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಇದನ್ನೂ ಓದಿ:ಮಾ.5ಕ್ಕೆ ದಿಗಂತ್‌ ‘ಹುಟ್ಟುಹಬ್ಬದ ಶುಭಾಶಯ’ ಟೀಸರ್‌

ಸದ್ಯ “ಪೆಂಟಗನ್‌’ ಚಿತ್ರದ ಮೊದಲ ಕಥೆಯ ಕ್ಯಾರೆಕ್ಟರ್‌ ಪೋಸ್ಟರ್‌ನಲ್ಲಿ ಪ್ರಕಾಶ್‌ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಕಾಶ್‌ ಬೆಳವಾಡಿ ಜನ್ಮದಿನದ ಪ್ರಯುಕ್ತ ಚಿತ್ರತಂಡ, ಈ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ ಪೊಲೀಸ್‌ ಅಧಿಕಾರಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next