Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರು ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳಿಗೆ 1, 2 ಪ್ರಾಶಸ್ತ್ಯದ ಮತಗಳನ್ನು ನೀಡಿ. ಮತಗಳನ್ನು ಕುಲಗೆಡಿಸಬೇಡಿ. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಿಂದ ನಾನು ಮತ್ತು ಡಾ| ಧನಂಜಯ ಸರ್ಜಿ ಗೆಲ್ಲುವ ಪೂರ್ಣ ವಿಶ್ವಾಸವಿದೆ ಎಂದರು.
ಪೆನ್‌ಡ್ರೈವ್ ಪ್ರಕರಣವು ಹೆಣ್ಣು ಮಕ್ಕಳ ವಿಷಯಕ್ಕೆ ಸಂಬಂಧಿಸಿದ್ದು, ಗೌಪ್ಯವಾಗಿ ತನಿಖೆ ನಡೆಸುವ ಬದಲು ರಾಜಕಾರಣಿಗಳು, ಅನ್ಯರು ಬಹಿರಂಗ ಗೊಳಿಸಿದ್ದು ಸರಿಯಲ್ಲ. ಪೊಲೀಸ್ ಠಾಣೆ, ಸಿಐಡಿ, ಎಸ್‌ಐಟಿ ಇನ್ ಕೆಮರಾ ಪ್ರೊಸೀಡಿಂಗ್ಸ್ (ಆಂತರಿಕವಾಗಿ) ಎಲ್ಲಿ ಮಾಡಿದೆ? ಮಕ್ಕಳಿಗೆ, ಮುಂದಿನ ಪೀಳಿಗೆಗೆ ಸೂಕ್ತ ಮಾರ್ಗದರ್ಶನದ ಬದಲು ಸ್ವೇಚ್ಛಾಚಾರಕ್ಕೆ ಪ್ರೇರಣೆ ನೀಡಿದಂತಾಗಿದೆ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರಿಯಾದ ಮಾರ್ಗದಲ್ಲಿ ಹೋಗುತ್ತಿಲ್ಲ, ನಿಷ್ಪಕ್ಷ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದರು.
ಈಗ ನಾವು ಬಿಜೆಪಿ ಜತೆಗಿದ್ದು, ನಮ್ಮ ಸಂಬಂಧ ಗಟ್ಟಿಯಾಗಿದೆ. ರಾಜ್ಯ ಸರಕಾರ ಬೀಳುತ್ತದೋ ನೋಡೋಣ. ಅಖಂಡ ಭಾರತ ನಿರ್ಮಾಣವಾಗ ಬೇಕು. ಪ್ರಧಾನಿ ನರೇಂದ್ರ ಮೋದಿ ಯವರ ಸಮರ್ಥ ನಾಯಕತ್ವ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.