Advertisement

ಸೀಲ್ ಡೌನ್ ಉಲ್ಲಂಘನೆ ಆಭರಣದ ಅಂಗಡಿಗಳಿಗೆ ದಂಡ

07:52 PM Jun 12, 2020 | Sriram |

ಗಂಗಾವತಿ: ಸೀಲ್ ಡೌನ್ ನಿಯಮ ಉಲ್ಲಂಘನೆ ಮಾಡಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ಆಭರಣದ ಅಂಗಡಿಗಳ ಮೇಲೆ ನಗರಸಭೆ ಪೌರಾಯುಕ್ತರು‌ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.

Advertisement

ಗಾಂಧಿ ಚೌಕ್ ಪ್ರದೇಶದಲ್ಲಿ ಸೀಲ್ ಡೌನ್ ಮಾಡಲಾಗಿದ್ದು ನಿಯಮ‌ ಮೀರಿ ನಾಗೇಶ್ವರ ಜುವೆಲರ್ಸ್, ಉದಯಸೇಲ್ಸ್ ಕಾರ್ಪೊರೇಷನ್, ನಾಗೇಶರಾವ್ ಎಸ್ ಭಟ್ ರಾಯಕರ್ ಚಿನ್ನದಂಗಡಿಯವರು ವ್ಯಾಪಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗಂಗಾಧರ ಹಾಗೂ ಸಿಬ್ಬಂದಿ ದಾಳಿ ಮಾಡಿದಾಗ ಚಿನ್ನದಂಗಡಿ ಮಾಲೀಕರು ವಾಗ್ವಾದ ನಡೆಸಿದ್ದಾರೆ.

ನಿಯಮಮೀರಿದ್ದಕ್ಕೆ ಚಿನ್ನದ ಅಂಗಡಿಗಳ ಮೇಲೆ ದಂಡ ಹಾಕಲಾಗಿದೆ. ಗಾಂಧಿಚೌಕ್ ಸಮೀಪದ ಜಾಮೀಯಾ ಮಸೀದಿಯ ಮೌಲ್ವಿಯೊಬ್ಬರಿಗೆ ಕೊವಿಡ್-19 ಸೋಂಕು ಹಿನ್ನೆಲೆ ಗಾಂಧಿಚೌಕ್,ಡೇಲಿಮಾರ್ಕೆಟ್,ಮಟನ್ ಮಾರ್ಕೆಟ್ ಸೇರಿ ಜಾಮೀಯಾ ಮಸೀದಿ ಪ್ರದೇಶದ ಸುತ್ತ 150 ಮೀಟರ್ ಸೀಲ್ ಡೌನ್ ಮಾಡಲಾಗಿದೆ. ನಿಯಮ ಮೀರಿದ ಅಂಗಡಿ ಮಾಲೀಕರಿಗೆ ಒಟ್ಟು 42 ಸಾವಿರ ರೂ.ದಂಡ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next