Advertisement

ಮಾಸ್ಕ್ ಧರಿಸದ ನಾಗರಿಕರಿಗೆ ದಂಡ

06:24 PM May 08, 2020 | Suhan S |

ಕನಕಪುರ: ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕೆಂಬ ಸರ್ಕಾರದ ಆದೇಶದ ಮೇರೆಗೆ ನಗರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಜೊತೆಗೆ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡುತ್ತಿದ್ದವರಿಗೆ ತಲಾ 100 ರೂ.ನಂತೆ ದಂಡ ವಿಧಿಸುತ್ತಿದ್ದಾರೆ.

Advertisement

ಚನ್ನಬಸಪ್ಪ ವೃತ್ತದಲ್ಲಿ ರಸ್ತೆಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿರುವ ಸಾರ್ವಜನಿಕರಿಗೆ ದಂಡ ವಿಧಿಸಲು ನಗರಸಭೆಯ ಅಧಿಕಾರಿಗಳು ಮುಂದಾಗಿದ್ದಾರೆ. ನಗರಸಭೆ ಪೌರಾಯುಕ್ತ ಡಾ.ಕೆ.ಮಾಯಣ್ಣಗೌಡರ ಮಾರ್ಗದರ್ಶನದಲ್ಲಿ ಪರಿಸರ ಅಭಿಯಂತರರಾದ ಡಿ.ವಿ.ಪಾರ್ವತಿ, ಹಿರಿಯ ಆರೋಗ್ಯ ನಿರೀಕ್ಷಕ ಎಲ್‌. ವೆಂಕಟೇಶ್‌, ಕಿರಿಯ ಆರೋಗ್ಯಾಧಿಕಾರಿಗಳಾದ ಎಸ್‌. ಅರುಣಾದೇವಿ, ಜಿ.ಕುಸುಮ, ಲೆಕ್ಕಾಧಿಕಾರಿ ಶಿವಣ್ಣ, ಎಇಇ ರಾಘವೇಂದ್ರ ದಂಡ ಸಂಗ್ರಹದಲ್ಲಿ ತೊಡಗಿದ್ದರು.

ಸ್ಥಳದಲ್ಲೇ ಮಾಸ್ಕ್ ಧರಿಸುವಿಕೆ: ಸರ್ಕಾರದ ನಿಯಮದಂತೆ ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಂಡು ಇತರರನ್ನೂ ರಕ್ಷಿಸಿ, ನಾವು ನಿಮಗಾಗಿ ಎನ್ನುವ ನಿಯಮದಡಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಲೇ ಬೇಕು. ಕಡ್ಡಾಯವಾಗಿ ಆದೇಶ ಇದ್ದರೂ ಸಹ ನಾಳೆುಂದ ದಂಡ ಧಿಸುವ ಜೊತೆಗೆ ಕಡುಬಡವರು ಹಾಗು ಅಶಕ್ತರಿಗೆ ಸ್ಥಳದಲ್ಲಿಯೇ ಮಾಸ್ಕ್ ಹಣ ಪಡೆದು ಮಾಸ್ಕ್ ಇಲ್ಲದವರಿಗೆ ಮಾಸ್ಕ್ ಧರಿಸುವ ಕಾರ್ಯಕ್ರಮವನ್ನು ನಗರಸಭೆ ಜಾರಿಗೆ ತರಿಲಿದೆ. ಮಾಸ್ಕ್ ಮಾರಾಟ: ನಗರಸಭೆ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದ ಅಂಗಡಿಯೊಂದರಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮೂಲಕ ಮಾಸ್ಕ್ಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಗರಸಭೆ ಅಧಿಕಾರಿಗಳು ಮನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next