Advertisement

ಮಸೀದಿಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತದೆಯೋ? ಇನ್ನೂ ತಗ್ಗಿಬಗ್ಗಿ ಇರಬೇಕೆ: ಪೇಜಾವರ ಶ್ರೀ

05:00 PM Apr 18, 2022 | Team Udayavani |

ಶಿವಮೊಗ್ಗ: ಯಾವುದೇ ಕಾಲದಲ್ಲಿ ಬದಲಾವಣೆ ಒಂದೇ ಬದಿಯಿಂದ ಅಗಬಾರದು. ನಮ್ಮ ಗುರುಗಳು ಮುಸ್ಲಿಮರನ್ನು ಮಠಕ್ಕೆ ಕರೆದೂ ಸ್ವಾಗತ ಮಾಡಿದ್ದರು. ಆದರೆ ಯಾವುದೇ ಮಸೀದಿಗೆ ಯಾವ ಮಠಾಧೀಶರನ್ನು ಕರೆದು ಒಂದು ಸತ್ಯನಾರಾಯಣ ಪೂಜೆಯೋ, ಇನ್ನೋಂದು ಎಲ್ಲೂ ನಡೆದೇ ಇಲ್ಲ. ಹೀಗೆ ಯಾಕೆ ಒಂದೇ ಬದಿಯಲ್ಲಿ ಇನ್ನೂ ತಗ್ಗಬೇಕು, ಇನ್ನೂ ಬಗ್ಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.

Advertisement

ಮಾಜಿ ಸಚಿವ ಈಶ್ವರಪ್ಪರ ಮನೆಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ಬದಿಯಿಂದ ನಾವು ಮಾತ್ರ ಉತ್ಸವಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಾ ಹೋಗುತ್ತೇವೆ. ಇದು ಯಾವ ತರನಾದ ನ್ಯಾಯ‌ ಎನ್ನುವುದು ತಿಳಿಯುತ್ತಿಲ್ಲ. ಎಲ್ಲರೂ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ಬಯಸುವವರು. ಆದರೆ ಒಂದು ಬದಿಯಿಂದ ಇಂತಹ ಆಘಾತ, ಹೊಡೆತ. ಇನ್ನೊಂದು ಕಡೆಯಿಂದ ಸದಾಕಾಲ ತಗ್ಗಿ-ಬಗ್ಗಿ ನಡಿಬೇಕೆಂದು ಆಶಿಸುವುದು. ಇದು ಎಷ್ಟರ ಮಟ್ಟಿನ ನ್ಯಾಯ ಎಂದು ಪ್ರಶ್ನಿಸಿದರು.

ಎರಡು ಕಡೆ ಹೊಂದಾಣಿಕೆಯಾದರೆ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸರ್ಕಾರ ಅದರದ್ದೇ ಆದ ಕ್ರಮಗಳನ್ನು ಕೈಗೊಳ್ಳುತ್ತದೆ. ಅದರೆ, ಅದು ಸಾಲದು. ಈ ಪರಿಯವರ್ತನೆಗಳು ಯಾಕಾಗುತ್ತಿದೆ? ಸರ್ಕಾರದ ಬಗ್ಗೆ ಭಯವಿಲ್ಲ ಎಂದೆನಿಸುತ್ತಿದೆ. ಭಯ ತರಿಸುವ ಘಟನೆಗಳು ನಡೆಯುತ್ತಿವೆ. ಮತ್ತೆ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

ಇದನ್ನೂ ಓದಿ:ಗೋವಾದಲ್ಲಿ ಮತಾಂತರ : ಸಿಎಂ ಸಾವಂತ್ ಗೆ ಸವಾಲೆಸೆದ ಮೈಕಲ್ ಲೋಬೊ

ಇತ್ತೀಚಿಗೆ ಹನುಮ ಜಯಂತಿ ಹಾಗೂ ರಾಮನ ಉತ್ಸವಗಳ ಮೇಲೆ ಕಲ್ಲುತೂರಾಟದಂತಹ ಪ್ರತಿರೋಧ ನಡೆಯುವುದು ನೋಡಿದರೆ ತುಂಬಾ ನೋವಾಗುತ್ತದೆ. ಭಾರತದಂತ ರಾಷ್ಟ್ರ, ರಾಮ ಹಾಗೂ ಹನುಮ ಹುಟ್ಟಿದ ನಾಡಿನಲ್ಲಿಯೇ ಹೀಗಾಗುತ್ತಿದೆ. ಬಹುಸಂಖ್ಯಾತರಾಗಿರುವ ಹಿಂದೂಗಳ ಉತ್ಸವದ ಮೇಲೆ ಆಘಾತಗಳು ಸಖ್ಯವಲ್ಲ. ಇಂತಹ ಘಟನೆಗಳನ್ನು ಮುಂದಿಟ್ಟುಕೊಂಡು ಸೌಹಾರ್ದತೆಯ ಬಗ್ಗೆ ಮಾತಾನಾಡುವುದು ಅರ್ಥಶೂನ್ಯ. ಮುಂದಿನ ದಿನಗಳಲ್ಲಿ ಇಂತಹ ಪ್ರತಿರೋಧಗಳು ಬಾರದೇ ಇರಲಿ. ಎಲ್ಲರೂ ಸಹಭಾಳ್ವೆ ನಡೆಸುವಂತಹ ಮೂಲಭೂತ ವ್ಯಕ್ತಿಗತ ಬದಲಾವಣೆ ಅಗಲಿ ಎಂದು ಆಶಿಸಿದರು.

Advertisement

ಅಯೋಧ್ಯೆಯಲ್ಲಿ ರಾಮಮಂದಿರ ಟ್ರಸ್ಟ್ ನ ಸಭೆ ನಡೆಯುತ್ತಿದೆ. ನಾಳೆ ನಾವು ಅಯೋಧ್ಯೆಗೆ ಹೋಗುತ್ತಿದ್ದೇವೆ. ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಈಶ್ವರಪ್ಪರ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ್ದೇನೆ. ಈಶ್ವರಪ್ಪರ ಮೇಲೆ ಗುರುತರವಾದ ಆರೋಪ ಬಂದಿದೆ. ಆಗ್ನಿಪರೀಕ್ಷೆಯಲ್ಲಿ ಅವರು ವಿಜಯಿಯಾಗಿ ಹೊರಬರಲಿ ಎಂದು ಆಶಿಸುತ್ತೇನೆ. ದೇವರು, ರಾಮದೇವರು, ದೇಶ ಸೇವೆಯನ್ನು ಅವರು ವಿಶೇಷವಾಗಿ ಮಾಡುತ್ತಾ ಬಂದಿದ್ದಾರೆ‌. ಅವರ ಮೇಲೆ ಶ್ರೀರಾಮ ದೇವರ ಶ್ರೀರಕ್ಷೆ ಸದಾ ಇರಲಿ ಎಂದು ಪೇಜಾವರ ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next