Advertisement

ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು

06:32 PM Nov 02, 2020 | sudhir |

ಉಡುಪಿ: ಸುಮಾರು ಮೂರು ದಶಕಗಳ ಹಿಂದೆ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿದ ರಾಮಲಲ್ಲಾನ ವಿಗ್ರಹದ ದರ್ಶನವನ್ನು ಶಿಷ್ಯ ಶ್ರೀವಿಶ್ವಪ್ರಸನ್ನತೀರ್ಥರು ಪಡೆದರು.

Advertisement

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಟ್ರಸ್ಟಿಯಾಗಿ ಅಯೋಧ್ಯೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಸ್ವಾಮೀಜಿ ದೇವರ ದರ್ಶನ, ಪೂಜೆ, ಮಂಗಳಾರತಿಯನ್ನು ನೋಡಿದರು.

1992ರ ಡಿಸೆಂಬರ್‌ 6ರಂದು ಅಯೋಧ್ಯೆಯ ಕರಸೇವೆಗೆ ಹೋದ ಉಡುಪಿಯ ಆರೇಳು ಸ್ವಾಮೀಜಿಯವರಲ್ಲಿ ಶ್ರೀವಿಶ್ವೇಶತೀರ್ಥರೂ ಇದ್ದರು. ಅಂದು ರಾತ್ರಿ ನಿಯಂತ್ರಣ ತಪ್ಪಿ ಹಳೆಯ ಕಟ್ಟಡವನ್ನು ಬೀಳಿಸಿದಾಗ ಕಾರ್ಯಕರ್ತರು ಅಲ್ಲಿದ್ದ ವಿಗ್ರಹವನ್ನು ಎಲ್ಲಿಗೋ ಕೊಂಡೊಯ್ದಿದ್ದರು. ಡಿ. 7ರ ಮುಂಜಾವ ಕಾರ್ಯಕರ್ತರು ವಾಪಸು ತಂದು ಮೊದಲಿದ್ದ ಸ್ಥಳದಲ್ಲಿಯೇ ಇರಿಸಬೇಕೆಂದಾದಾಗ ತರಾತುರಿಯಲ್ಲಿ ಸಿಕ್ಕಿದವರು ವಿಶ್ವೇಶತೀರ್ಥರು. ಆಗ ಬಿಗಡಾಯಿಸಿದ ಪರಿಸ್ಥಿತಿ. ಏನೂ ಯೋಚನೆ ಮಾಡಲಾಗದ ಸ್ಥಿತಿಯಲ್ಲಿ ರಾಮಮಂತ್ರವನ್ನು ಪಠಿಸುತ್ತ ವಿಗ್ರಹವನ್ನು ಮೊದಲಿದ್ದ ಸ್ಥಳದಲ್ಲಿ ಪ್ರತಿಷ್ಠೆ ಮಾಡಿದವರು ವಿಶ್ವೇಶತೀರ್ಥರು. ಅಂದಿನಿಂದ ಇಂದಿನವರೆಗೂ ಅಲ್ಲಿ ರಾಮಲಲ್ಲಾನ ವಿಗ್ರಹ ಪೂಜೆಗೊಳ್ಳುತ್ತಿದೆ. ಈ ಘಟನೆಯಾಗಿ 28 ವರ್ಷಗಳ ಬಳಿಕ ಈಗಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುವ ಹೊಣೆ ಹೊತ್ತ ಟ್ರಸ್ಟ್‌ನ ಟ್ರಸ್ಟಿಯಾಗಿ ಶ್ರೀವಿಶ್ವಪ್ರಸನ್ನತೀರ್ಥರು ದರ್ಶನ- ಪೂಜೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next