ಉಡುಪಿ: ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಲಕ್ನೋದಲ್ಲಿ ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಉತ್ತರ ಪ್ರದೇಶದಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಿದ ಬಗೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿರುವುದಕ್ಕಾಗಿ ಪೇಜಾವರ ಶ್ರೀಗಳು ಸಿಎಂ ಆದಿತ್ಯನಾಥ್ ಅವರನ್ನು ಅಭಿನಂದಿಸಿದರು. ಈ ವೇಳೆ ತಾವು ಕೈಗೊಂಡ ಕೆಲವು ಕ್ರಮಗಳನ್ನು ಯೋಗಿ ವಿವರಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನೀಡಿದ ಸಹಕಾರ ಮತ್ತು ಅಲ್ಲಿ ಶುಚಿತ್ವಕ್ಕೆ ಕೊಟ್ಟ ಮಹತ್ವದ ಕುರಿತೂ ಪೇಜಾವರ ಶ್ರೀಗಳು ಯೋಗಿಯವರನ್ನು ಅಭಿನಂದಿಸಿದರು.
ಇದನ್ನೂ ಓದಿ:ಆದಿ ಉಡುಪಿ ಎಪಿಎಂಸಿಯಲ್ಲಿ ನಿರ್ಮಿಸಿದ ಮಳಿಗೆಗೆ ವ್ಯಾಪಾರಿಗಳಿಲ್ಲ
ಉಡುಪಿಗೆ ಆಹ್ವಾನ: ಯೋಗಿಯವರ ಮೇಜಿನ ಮೇಲೆ ಗೋರಕ್ಷಣೆ ಕುರಿತ ಪುಸ್ತಕ ಗಮನಿಸಿದ ಶ್ರೀಗಳು ನೀಲಾವರ ಗೋಶಾಲೆಯಲ್ಲಿ ಕಸಾಯಿ ಖಾನೆಗೆ ಹೋಗುವ ಗೋವುಗಳನ್ನು ಸಾಕಲಾಗುತ್ತಿದೆ. ಉಡುಪಿಗೆ ಬಂದು ಶ್ರೀಕೃಷ್ಣ
ದರ್ಶನ ಪಡೆದು ನೀಲಾವರ ಗೋಶಾಲೆಗೂ ಆಗಮಿಸಬೇಕೆಂದು ಕೋರಿದರು. ಪೇಜಾವರ ಶ್ರೀಗಳು ಲಕ್ನೋನಿಂದ ನೈಮಿಶಾರಣ್ಯ, ಹರಿದ್ವಾರ, ಬದರಿಯತ್ತ ಪ್ರಯಾಣವನ್ನು ಮುಂದುವರಿಸಿದ್ದಾರೆ.