Advertisement

ಭೂಕಂಪ ಸಂತ್ರಸ್ತರಿಗೆ ಗೋವಿಂದಪುರ ಕಟ್ಟಿಕೊಟ್ಟಿದ್ದ ಪೇಜಾವರಶ್ರೀ

09:55 AM Dec 30, 2019 | keerthan |

ವಿಜಯಪುರ: ಎರಡೂವರೆ ದಶಕದ ಹಿಂದೆ ಜಿಲ್ಲೆಯ ಗಡಿಯಲ್ಲಿ ಸಂಭವಿಸಿದ ಭೂಕಂಪ ಪೀಡಿತ ಸಂತ್ರಸ್ತರಿಗೆ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರು ಆಸರೆಯಾಗಿದ್ದರು.

Advertisement

1994ರಲ್ಲಿ ಮಹಾರಾಷ್ಟ್ರದಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ರಾಜ್ಯದ ಗಡಿ ಜಿಲ್ಲೆಯಾದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗೋವಿಂದಪುರ ಗ್ರಾಮ ಸಂಪೂರ್ಣ ಬಾಧಿತವಾಗಿತ್ತು. ಸರ್ಕಾರಕ್ಕಿಂತ ಮೊದಲು ಭೂಕಂಪದಿಂದ ಬೀದಿಗೆ ಬಿದ್ದಿದ್ದ ಸಂತ್ರಸ್ತರ ನೆರವಿಗೆ ಧಾವಿದ್ದು ಪೇಜಾವರ ಶ್ರೀಪಾದರು.

ಗೋವಿಂದಪುರ ಗ್ರಾಮಕ್ಕೆ ಧಾವಿಸಿದ ವಿಶ್ವೇಶ ತೀರ್ಥರು ಗ್ರಾಮ ಸಂತ್ರಸ್ತರ ಕಣ್ಣೀರು ಆಲಿಸಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಭಯ ನೀಡಿದ್ದರು.

ನೆಲೆ‌ ಕಳೆದು ನಲುಗಿದ್ದ ಗೋವಿಂದಪುರ ಗ್ರಾಮವನ್ನು‌ ದತ್ತು ಪಡೆದರು. ಅಲ್ಲದೇ ಶ್ರೀಮಠದಿಂದ ಸುಮಾರು 35 ಮನೆಗಳನ್ನು ನಿರ್ಮಿಸಿಕೊಡುವ ಮೂಲಕ‌ ತಮ್ಮ ಸಾಮಾಜಿಕ ಹೊಣೆಗಾರಿಕೆ ಮೂಲಕ ಭಕ್ತರ ಮನಗೆದ್ದಿದ್ದರು.

ನಿರ್ಮಾಣಗೊಂಡ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮ ಮಾಡಿ ಜನರಿಗೆ ಮಾನಸಿಕ ಸ್ಥೈರ್ಯ ತುಂಬಿದ್ದರು.

Advertisement

ಆ ಕಾರ್ಯಕ್ರಮದಲ್ಲಿ ಅಂದು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಸಚಿವರಾಗಿದ್ದ ಹಾಲಿ ಸಂಸದ ರಮೇಶ್ ಜಿಗಜಿಣಗಿ, ಅಂದು ಶಾಸಕರಾಗಿದ್ದ ಹಾಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ  ಸೇರಿದಂತೆ ಹಲವು ಗಣ್ಯರು ವೇದಿಕೆ ಮೇಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next