Advertisement

ಅಯೋಧ್ಯೆ ಭೂ ಖರೀದಿ : 2 ದಿನಗಳಲ್ಲಿ ವಸ್ತುಸ್ಥಿತಿ ವಿವರಣೆ : ಪೇಜಾವರ ಶ್ರೀ

06:08 PM Jun 30, 2021 | Team Udayavani |

ಅಯೋಧ್ಯೆ :  ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖರೀದಿಸಿದ ಭೂಮಿಯ ಕುರಿತು ಇನ್ನೆರಡು ದಿನಗಳಲ್ಲಿ ಟ್ರಸ್ಟ್ ವತಿಯಿಂದ ಬಹಿರಂಗ ಪಡಿಸಲಾಗುವುದು ಎಂದು ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ತಿಳಿಸಿದ್ದಾರೆ.

Advertisement

ಇಂದು(ಬುಧವಾರ, ಜೂನ್ 30) ಅಯೋಧ್ಯೆಗೆ ಭೇಟಿ ನೀಡಿರುವ ಅವರು, ಟ್ರಸ್ಟ್  ಪದಾಧಿಕಾರಿಗಳ ಜತೆ ಸಭೆ ನಡೆಸಿದರು. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಖಜಾಂಜಿ ಶ್ರೀ ಗೋವಿಂದ ಗಿರಿ ಸರಸ್ವತಿ, ಟ್ರಸ್ಟಿಗಳಾದ ಅನಿಲ್ ಮಿಶ್ರಾ, ಕಾಮೇಶ್ವರ್ ಮೊದಲಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ : ಪ.ಬಂಗಾಳ ಶಿಕ್ಷಣ ಕ್ರಾಂತಿ :10ಲಕ್ಷ ರೂ.ಗಳ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಯೋಜನೆ

ಟ್ರಸ್ಟಿಗಳು ಎರಡು ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಇದ್ದು,  ಭೂ ಖರೀದಿ ಕುರಿತಾಗಿ ದಾಖಲೆ ಪರಿಶೀಲನೆ ನಡೆಸಲಿದ್ದಾರೆ.  ಒಂದು ಹಂತದ ಸಭೆ ಇಂದು ನಡೆದಿದ್ದು, ಎಲ್ಲಾ ಆಯಾಮಗಳಲ್ಲಿ ವಿಚಾರ ನಡೆಸಿ ವಿಚಾರಗಳನ್ನು ಬಹಿರಂಗಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

ಇನ್ನು, ದೇವಸ್ಥಾನ  ನಿರ್ಮಾಣಕ್ಕೆ ಸಂಬಂಧಿಸಿ ಭೂಮಿಯನ್ನು ಹದ ಮಾಡುವ ಕೆಲಸ ನಡೆಯುತ್ತಿದೆ.  ಸಪ್ಟೆಂಬರ್ ತನಕ ಈ ಕೆಲಸ ನಡಯಿಲಿದೆ. ಸುಮಾರು 3200 ಕೋಟಿ ರೂ ದೇಣಿಗೆ ಈವರೆಗೆ ಬಂದಿದ್ದು, ಇನ್ನೂ ಕೂಡ ಕೆಲವರು ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ರಾಮ ಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ : ಅಧಿಕ ಲಾಭಾಂಶ ಕಾಯ್ದಿರಿಸಿದ ಪರಿಣಾಮ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 67 ಅಂಕ ಕುಸಿತ

Advertisement

Udayavani is now on Telegram. Click here to join our channel and stay updated with the latest news.

Next