Advertisement

ಜಿಲ್ಲಾಡಳಿತ ಮಧ್ಯಪ್ರವೇಶಿಸಲು ಸಕಾಲ; ಕಟಾವು ಹಂತದಲ್ಲಿ ದಿಢೀರ್‌ ಶೇಂಗಾ ಬೆಲೆ ಕುಸಿತ

01:19 AM Apr 19, 2022 | Team Udayavani |

ಕೋಟ: ಉಡುಪಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಶೇಂಗಾ ಬೆಳೆ ಕಟಾವು ಹಂತ ದಲ್ಲಿರು ವಾಗ ಮಧ್ಯವರ್ತಿಗಳು ದಿಢೀರ್‌ ಬೆಲೆ ಕುಸಿತಗೊಳಿಸಿ, ಬೇಡಿಕೆಯನ್ನೂ ಕುಂಠಿತಗೊಳಿಸುತ್ತಿರುವುದಕ್ಕೆ ಬೆಳೆಗಾರರ ಆಕ್ರೋಶ ವ್ಯಕ್ತ ವಾಗಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಸರಕಾರಗಳು ಬೆಳೆಗಾರರ ಬೆಳೆಯ ಬೆಲೆ ರಕ್ಷಣೆಗೆ ಮುಂದಾಗಬೇಕಿದೆ.

Advertisement

ಬೆಳೆ ಕಟಾವಿಗೆ ಬರುವ ಹಂತದಲ್ಲೇ ಯಾವು ದಾದರೂ ಕಾರಣವೊಡ್ಡಿ ಏಕಾಏಕಿ ಬೆಲೆ ಕುಸಿತಗೊಳಿಸಿ, ಖರೀದಿಯನ್ನು ಸ್ಥಗಿತಗೊಳಿಸುವುದು. ಆಗ ಬೆಳೆಗಾರ ಬೆಳೆಯನ್ನು ಹೆಚ್ಚು ದಿನ ಇಟ್ಟು ಕೊಳ್ಳಲಾಗದೆ ಕೈಗೆ ಸಿಕ್ಕ ಬೆಲೆಗೆ ಮಾರು ತ್ತಾನೆಂಬುದು ಮಧ್ಯವರ್ತಿಗಳ ಲೆಕ್ಕಾಚಾರ. ಇದೇ ಕುತಂತ್ರಕ್ಕೆ ಈ ಬಾರಿಯೂ ಬೆಳೆಗಾರರು ಬಲಿಯಾಗುವಂಥ ಸ್ಥಿತಿ ಉದ್ಭವಿಸಿದೆ. ಇದರ ಮಧ್ಯೆಯೇ ಕೃಷಿ ಇಲಾಖೆ ಅಧಿಕಾರಿಗಳು, ಶೇಂಗಾಕ್ಕೆ ಉತ್ತಮ ಬೆಲೆಯಿದೆ. ಗಡಿಬಿಡಿ ಮಾಡಿ ಕಡಿಮೆ ಬೆಲೆಗೆ ಮಾರಬಾರದೆಂದು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ಜಿಲ್ಲೆಯ ಸುಮಾರು 1,950 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತದೆ.ಇಲ್ಲಿನ ಶೇಂಗಾ ಉತ್ತಮ ಗುಣ ಮಟ್ಟ,ರುಚಿ ಹಾಗೂ ಅಧಿಕ ಎಣ್ಣೆಯಂಶ ಹೊಂದಿರುವುದರಿಂದ ಹೊರ ಜಿಲ್ಲೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿ ಭತ್ತದ ಅನಂತರ ವಾಣಿಜ್ಯ ಬೆಳೆಯಾಗಿ ಶೇಂಗಾ ಗುರುತಿಸಿಕೊಂಡಿದೆ.

ಮಧ್ಯವರ್ತಿಗಳ ಹಾವಳಿಯೇ ಇದಕ್ಕೆ ಕಾರಣವಾಗಿದ್ದು, ಬೆಳೆ ಖರೀದಿಸ್ಥಗಿತಗೊಳಿಸಿ ಬೆಲೆ ಇನ್ನಷ್ಟು ಕುಸಿಯುವಂತೆ ಮಾಡುವ ತಂತ್ರ ನಡೆದಿದೆ ಎಂಬುದು ಬೆಳೆಗಾರರ ಆರೋಪ.

ಕ್ವಿಂಟಾಲ್‌ಗೆ 6,500 -7,000 ರೂ. ತನಕ ಜಿಲ್ಲೆಯ ಶೇಂಗಾ ಖರೀದಿ ಆಗುತ್ತದೆ. ಸರಕಾರ ಕ್ವಿಂಟಾಲ್‌ಗೆ 5,550 ರೂ.
ಬೆಂಬಲ ಬೆಲೆ ನಿಗದಿ ಮಾಡಿದೆ. ಇದು ಮಾರುಕಟ್ಟೆಗಿಂತ ಕಡಿಮೆ. ತಿಂಗಳ ಹಿಂದೆ ಕ್ವಿಂಟಾಲ್‌ಗೆ 6 ಸಾವಿರದಿಂದ 7 ಸಾವಿರ ರೂ. ತನಕ ಖರೀದಿ ನಡೆಯುತ್ತಿತ್ತು. ಈಗ ಕಟಾವು ಆರಂಭ ವಾದ ತತ್‌ಕ್ಷಣ 5 ಸಾವಿರ ರೂ.ಗಳಿಗೆ ಕುಸಿಯುವಂತೆ ಮಾಡಲಾಗಿದೆ. ಜತೆಗೆ ಖರೀದಿ ಸ್ಥಗಿತಕ್ಕೂ ಕಾರಣವಾಗಿದೆ.

Advertisement

ಕಟಾವು ಸಂದರ್ಭ ಮಳೆಯಾಗಿರುವುದರಿಂದ ಗುಣಮಟ್ಟ ಕಡಿಮೆ ಹಾಗೂ ದಾಸ್ತಾನು ಕಷ್ಟ ಎಂಬೆಲ್ಲ ನೆಪವೊಡ್ಡುತ್ತಿರುವ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿ 5 ಸಾವಿರ ರೂ. ಆಸುಪಾಸಿನಲ್ಲೇ ಬೆಳೆಯನ್ನು ಕೊಳ್ಳಲು ಮುಂದಾಗಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಕನಿಷ್ಠ ಈ ಬೆಲೆ ಏರಿಳಿತ ಮಾಡುವ ಕುತಂತ್ರವನ್ನು ತಡೆಯುವ ವ್ಯವಸ್ಥೆ ಬರಬೇಕು ಎನ್ನುತ್ತಾರೆ ಬೆಳೆಗಾರರು.

ಮಧ್ಯವರ್ತಿಗಳ ಹಾವಳಿಯಿಂದ ದರ ಕುಸಿತ ಮತ್ತು ಬೇಡಿಕೆ ಕುಂಠಿತವಾಗಿದೆ. ಉಡುಪಿ ಜಿಲ್ಲೆಯ ಶೇಂಗಾಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಒಂದೆರಡು ತಿಂಗಳಲ್ಲೇ ಕ್ವಿಂಟಾಲ್‌ಗೆ 6,500-7,000 ರೂ. ತನಕ ದರ ಸಿಗಲಿದೆ. ಆದ್ದರಿಂದ ರೈತರು ಸ್ವಲ್ಪ ಸಮಯ ಕಾದು; ಫಸಲನ್ನು ದಾಸ್ತಾನಿರಿಸಿ ಮಾರಾಟ ಮಾಡುವುದು ಉತ್ತಮ.
– ಕೆಂಪೇಗೌಡ, ಜೆಡಿಯು, ಕೃಷಿ ಇಲಾಖೆ ಉಡುಪಿ

- ರಾಜೇಶ್‌ ಗಾಣಿಗ ಅಚ್ಲಾಡಿ

 

Advertisement

Udayavani is now on Telegram. Click here to join our channel and stay updated with the latest news.

Next