Advertisement
ಬಾಲ್ಯದಲ್ಲಿ ಶ್ರೀಕೃಷ್ಣ ಗೆಳೆಯ ರೊಂದಿಗೆ ಕೂಡಿ ಹಾಲು, ಮೊಸರು, ಬೆಣ್ಣೆ ಕದಿಯು ತ್ತಿದ್ದ. ಮೊಸರಿನ ಗಡಿಗೆ ಯನ್ನು ಎತ್ತರದ ನೆಲುವಿ ನಲ್ಲಿ ಇರಿಸಿದರೆ ಗೆಳೆ ಯರು ಒಬ್ಬರ ಮೇಲೊ ಬ್ಬರು ನಿಂತು ಛಾವಣಿ ಯನ್ನೇರಿ ಹೆಂಚು ತೆಗೆದು ಮನೆಯೊಳಗಿಳಿದು ಕದಿ ಯುತ್ತಿದ್ದರು. ಎತ್ತರದಲ್ಲಿ ಇರಿಸಿದ ಗಡಿಗೆಗೆ ಕಲ್ಲು ಹೊಡೆದು ಒಡೆಯುತ್ತಿದ್ದರು. ಗಡಿಗೆ ತೂತಾಗಿ ಹರಿಯುವ ಹಾಲಿನ ಧಾರೆಗೆ ಬಾಯಿ ಒಡ್ಡಿ ಕುಡಿಯುತ್ತಿದ್ದರು. ನೆಲದಲ್ಲಿ ಮೊಸರು, ಬೆಣ್ಣೆ ಚೆಲ್ಲಿದರೆ ಬಾಚಿ ಬಾಯಿಗಿಡುತ್ತಿದ್ದರು. ಮಥುರೆಯ ಗೋಪಿಕೆಯರಿಗೆ ಹಾಲು, ಮೊಸರು, ಬೆಣ್ಣೆಯೇ ಬದುಕು. ಆದರೆ ಯಾರೂ ಕೃಷ್ಣನ ಮೇಲೆ ಸಿಟ್ಟಾಗುತ್ತಿರಲಿಲ್ಲ, ವೈರ ಸಾಧಿಸು ತ್ತಿರಲಿಲ್ಲ. ತೀರಾ ಕೋಪಿಸಿ ಕೊಂಡು ಯಶೋದೆಗೆ ದೂರಿತ್ತರೂ ಆಗ ಆಕೆಯ ಸೆರಗಿನ ಹಿಂದೆ ಅವಿತುಕೊಂಡ ಮುದ್ದುಕೃಷ್ಣನ ಮೊಗ ಕಂಡಾಗ ಅವರ ಸಿಟ್ಟು ಕರಗಿಹೋಗುತ್ತಿತ್ತು!
Related Articles
Advertisement
ಕೃಷ್ಣ ಕೆಲವೇ ತಿಂಗಳುಗಳ ಹಸುಳೆ ಯಾಗಿದ್ದಾಗ ನಡೆದ ಒಂದು ಘಟನೆ. ಅಂದು ಪೌರ್ಣಮಿ. ಮಥುರೆಯ ಜನರು ಯಮುನೆಯ ದಡದಲ್ಲಿ ಬೆಳ ದಿಂಗಳ ಊಟ ಮಾಡಲು ಸಿದ್ಧತೆ ನಡೆಸಿ ದ್ದರು. ಯಶೋದೆ ಶಿಶು ಕೃಷ್ಣನನ್ನು ಚಕ್ಕಡಿಯ ಕೆಳಗೆ ಮಲಗಿಸಿ ಅಡುಗೆ ಕೆಲಸದಲ್ಲಿದ್ದಳು. ನಿದ್ದೆಯಲ್ಲಿದ್ದ ಕೃಷ್ಣನಿಗೆ ಎಚ್ಚರವಾಯಿತು. ಎತ್ತಿಕೊಳ್ಳಲು ಹತ್ತಿರ ಯಾರೂ ಇಲ್ಲ. ದೂರದಲ್ಲಿ ಎಲ್ಲರೂ ಹಾಡು, ಕುಣಿತದಲ್ಲಿ ಮಗ್ನರಾಗಿರು ವುದು ಕಂಡಿತು. ಅವನಿಗೂ ಅಲ್ಲಿಗೆ ಹೋಗಬೇಕು, ಅವರೊಡನೆ ಭಾಗಿ ಯಾಗಬೇಕು ಎನಿಸಿತು. ಆದರೆ ಹೋಗು ವುದು ಹೇಗೆ – ಇನ್ನೂ ಶಿಶು ವಲ್ಲವೆ! ಆತ ಪುಟ್ಟ ಪಾದಗಳಿಂದ ಚಕ್ಕಡಿಯನ್ನು ಮೆಲ್ಲನೆ ಒದ್ದನಂತೆ, ಬಂಡಿ ಉರುಳಿ ಪುಡಿಯಾಯಿತಂತೆ!
ಸದ್ದು ಕೇಳಿ ಎಲ್ಲರೂ ಬಂದರು, ಪುಟ್ಟ ಕೃಷ್ಣನನ್ನು ಎತ್ತಿಕೊಂಡರು – ಬಂಡಿಯ ಕೆಳಗೆ ಸಿಲುಕಿ ಕಂದನಿಗೆ ಗಾಯವಾಯಿತೇ ಎಂದು ಗಾಬರಿ ಗೊಂಡರು. ಅಲ್ಲೇ ಇದ್ದ ಕೆಲವು ಮಕ್ಕಳು ಕೃಷ್ಣನೇ ಬಂಡಿಯನ್ನು ಒದೆದದ್ದು ಎಂದರೆ ಯಾರೂ ನಂಬಲಿಲ್ಲ.ಇದು ಪ್ರಾಯಃ ಕೃಷ್ಣನ ಮೊದಲ ನೆಯ ಲೀಲೆ. ಇಂಥ ತುಂಟತನ, ಲೀಲಾ ವಿನೋದಗಳೇ ತುಂಬಿದ ಜೀವನ ಅವನದು.
( ಸಾರ ಸಂಗ್ರಹ)