ಕಲಬುರಗಿ: ಮಹಾನಗರ ಪಾಲಿಕೆಯ 55 ವಾರ್ಡ್ ಗಳಿಗೆ ಶುಕ್ರವಾರ ನಡೆದ ಚುನಾವಣೆ ಮುಕ್ತಾಯಗೊಂಡಿದ್ದು, ಒಂದೇರಡು ಕಡೆ ಅಹಿತಕರ ಘಟನೆ ಬಿಟ್ಟರೆ ಸಂಪೂರ್ಣ ಶಾಂತಿಯುತ ಮತದಾನ ನಡೆದಿದೆ.
ವಾರ್ಡ್ ನಂ 13ರಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಈ ಘಟನೆಯಲ್ಲಿ ಮಾಜಿ ಮೇಯರ್ ಇಕ್ಬಾಲ್ ಅಹ್ಮದ ಸಿರ್ನಿಪೋಸ್ ಪುತ್ರ ಸೊಯೆಬ್ ಅಹ್ಮದ ಗೆ ಮಾರಕಾಸ್ತದಿಂದ ಇರಿಯಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯ ಬೆಂಬಲಿಗರೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅದೇ ರೀತಿ ವಾರ್ಡ್ ನಂಬರ್ 36ರಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಬೆಂಬಲಿಗ ನಡುವೆ ಮಾತಿನ ವಾಗ್ವಾದ ನಡೆದಿದೆ. ಒಬ್ಬರಿಗೊಬ್ಬರು ನೋಡಿಕೊಳ್ಳುತ್ತೇವೆ ಎನ್ನುವ ಮಾತಿನ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಅದೇ ರೀತಿ ವಾರ್ಡ ನಂಬರ್ 46ರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಕಲಬುರಗಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಪೊಲೀಸ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆಗಳನ್ನು ಬಿಟ್ಟರೆ ಕೆಲವು ಕಡೆ ಸಣ್ಣಪುಟ್ಟ ಘಟನೆಗಳು ವರದಿಯಾಗಿವೆ. ಮತ್ತೊಂದೆಡೆ ಮತಗಟ್ಟೆಗೆ ಮತದಾನಕ್ಕೆ ತೆರಳಿದವರಿಗೆ ನಿಮ್ಮ ಹಾಕಲಾಗಿದೆ ಎಂಬುದಾಗಿ ವಾಪಸ್ಸು ಹಾಕಿರುವುದು ಸಹ ವರದಿಯಾಗಿದೆ.
ಒಟ್ಟಾರೆ ಮತದಾನ ಗರಿಷ್ಠ ಪ್ರಮಾಣದ ಆಗದೇ ಶೇ 54 ರಷ್ಟು ಪ್ರಮಾಣ ಆಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಜಿಲ್ಲಾಧಿಕಾರಿ ವಿ.ವಿ ಜೋತ್ಸ್ನಾ ಕಡಿಮೆ ಮತದಾನ ನಡೆಯುತ್ತಿದ್ದ ವಿವಿಧ ವಾಡ್೯ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮತ ಏಣಿಕೆ ಸೆ. 6ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯಲಿದೆ.