Advertisement

ಹು-ಧಾ ಮಹಾನಗರ ಪಾಲಿಕೆ ಚುನಾವಣೆ: ಎಲ್ಲಡೆ ಶಾಂತಿಯುತ ಮತದಾನ

09:18 PM Sep 03, 2021 | Team Udayavani |

ಹುಬ್ಬಳ್ಳಿ: ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದ್ದು, 82 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 53.81 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

Advertisement

ಹಲವು ಅಡೆ ತಡೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಕೇವಲ ಶೇ.೫೩.೮೧ ರಷ್ಟು ಮತದಾನವಾಗಿದೆ.  ಕಳೆದ ಬಾರಿಗಿಂತ ಶೇಕಡವಾರು ಮತದಾನ ಸಾಕಷ್ಟು ಕಡಿಮೆಯಾಗಿದೆ. ಬೆಳಗ್ಗಿನಿಂದಲೂ ಪಾಲಿಕೆ ಚುನಾವಣೆ ಮತದಾನ ಪ್ರಕ್ರಿಯೆ ತುರುಸು ಪಡೆದಿರಲಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಒಂದಿಷ್ಟು ಬಿರುಸಿನ ಮತದಾನ ಕಂಡಿತ್ತಾದರೂ ಸಂಜೆ ವೇಳೆಗೆ ಮತ್ತಷ್ಟು ವೇಗಗೊಳ್ಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

೨೦೧೩ ಮಾರ್ಚ್ ತಿಂಗಳಲ್ಲಿ ೬೭ ವಾರ್ಡುಗಳಿಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಶೇ.೬೬ ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಶೇ.೧೨.೧೯ ರಷ್ಟು ಮತದಾನ ಕಡಿಮೆಯಾಗಿದೆ. ಕಳೆದ ಬಾರಿಯ ಶೇಕಡವಾರು ಮತದಾನ ಹಾಗೂ ಹಕ್ಕು ಚಲಾಯಿಸುವ ಕುರಿತು ಜನರಲ್ಲಿ ಜಾಗೃತಿ ಕಾರಣದಿಂದ ಈ ಬಾರಿ ಶೇ.೬೫-೭೦ ರಷ್ಟು ಮತದಾನ ಆಗಲಿದೆ ಎನ್ನುವ ನಿರೀಕ್ಷಿಸಲಾಗಿತ್ತು.

ಬೆಳಿಗ್ಗೆ ೯:೦೦ ಗಂಟೆಯ ಹೊತ್ತಿಗೆ ಶೇ.೭.೭೩, ೧೧:೦೦ ಗಂಟೆಯ ಹೊತ್ತಿಗೆ ಶೇ.೧೮.೧೮, ೧:೦೦ ಗಂಟೆಗೆ ಶೇ.೨೯.೦೧, ಮಧ್ಯಾಹ್ನ ೩:೦೦ ಗಂಟೆಗೆ ಶೇ.೩೯.೨೨, ಸಂಜೆ ೫:೦೦ ಗಂಟೆಗೆ ೫೦.೩೯ ಆಗಿತ್ತು.  ಮತದಾನ ಕೊನೆಗೆ ಶೇ.೫೩.೮೧ ರಷ್ಟು ಮತದಾನವಾಗಿದೆ. ಹು-ಧಾ ಮಹಾನಗರ ಪಾಲಿಕೆಯ ೮೨ ವಾರ್ಡುಗಳಲ್ಲಿ ೮೪೨ ಮತಗಟ್ಟೆಗಳು, ೮,೧೭,೪೫೮ ಮತದಾರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next