ಭಾಲ್ಕಿ: ಧರ್ಮ ಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಸಾರಿಗೆ ಘಟಕದ ಬಳಿಯ ಕಾನಡಾ ಹೋವಿಠಲ ಕರ್ನಾಟಕ ವಾರಕರಿ ಸಂಪ್ರದಾಯ ಟ್ರಸ್ಟ್ ವತಿಯಿಂದ ರವಿವಾರ ಆಯೋಜಿಸಿದ್ದ ಸಂತ ಜ್ಞಾನೇಶ್ವರ ಮಂದಿರದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ವ್ಯಕ್ತಿ ಒತ್ತಡದ ಬದುಕಿನಲ್ಲಿ ಸಿಲುಕಿದ್ದಾನೆ. ಹಣ, ಆಸ್ತಿ, ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾನೆ. ಇದರಿಂದ ಮನುಷ್ಯನಲ್ಲಿ ಸಂಸ್ಕಾರ ಮರೆಯಾಗಿ ಸಮಾಜದಲ್ಲಿ ದುಷ್ಕೃತ್ಯಗಳು ಘಟಿಸುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು. ಸಂಸದ ಭಗವಂತ ಖೂಬಾ ಧ್ವಜ ಪೂಜೆ ನೆರವೇರಿಸಿದ ಮಾತನಾಡಿ, ಸುಂದರ ನವ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದು, ನೂತನ ದೇಗುಲ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಸಂತ ಜ್ಞಾನೇಶ್ವರ ಅವರು ತಮ್ಮ ಅಗಾಧ ಜ್ಞಾನ ಶಕ್ತಿಯಿಂದ ಭಕ್ತರ ಅಜ್ಞಾನ ಹೋಗಲಾಡಿಸಿದರು. ಅಂತಹ ಮಹಾತ್ಮರ ದೇಗುಲ ನಿರ್ಮಾಣಕ್ಕೆ ದಯಾನಂದ ಸೂರ್ಯವಂಶಿ ಭೂಮಿ ದಾನ ನೀಡಿದ್ದು ಖುಷಿ ತಂದಿದೆ ಎಂದು ಹೇಳಿದರು.
ಕಿಸಾನ ಶಿಕ್ಷಣ ಪ್ರಸಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲ ಶಿಂಧೆ ಕಾರ್ಯಕ್ರಮ ಉದ್ಘಾಟಿಸಿದರು. ಹಿರೇಮಠ ಸಂಸ್ಥಾನದ ಪೀಠಾಧಿ ಪತಿ ಗುರುಬಸವ ಪಟ್ಟದ್ದೇವರು, ಗಹನೀನಾಥ ಮಹಾರಾಜ, ಭಾಗವತ ಮಹಾರಾಜ, ಏಕನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ, ಜಿಪಂ ಮಾಜಿ ಅಧ್ಯಕ್ಷ ಮುರಳಿಧರ ಕಾಳೆ, ಬಾಬುರಾವ್ ಕಾರಬಾರಿ, ಭೂದಾನಿ ದಯಾನಂದ ಅಶೋಕ ಸೂರ್ಯವಂಶಿ, ಕೇಶವರಾವ್ ನಿಟ್ಟೂರಕರ್, ರಾಮರಾವ್ ವರವಟ್ಟಿಕರ್, ವಿಶಾಲಪುರಿ, ರೇಖಾಬಾಯಿ ಅಷ್ಟೂರೆ, ರಾಜಶೇಖರ ಅಷ್ಟೂರೆ, ವಿ.ವಿ.ಪಾಟೀಲ, ದಿಗಂಬರ ಮಾನಕಾರಿ, ಜನಾರ್ಧನ ಬಿರಾದಾರ, ಶರದಚಂದ್ರ ಸಿರ್ಸೆ, ಯಾದವರಾವ್ ಕನಸೆ, ಸಂತೋಷ ಖಂಡ್ರೆ, ಕೇಶವರಾವ್ ಪವಾರ, ಶಿವಾಜಿರಾವ್ ಬಾಬ್ರೆ ಉಪಸ್ಥಿತರಿದ್ದರು. ತೊರಣೇಕರ್ ಗುರೂಜಿ ಸ್ವಾಗತಿಸಿದರು. ಅಶೋಕ ರಾಜೋಳೆ ನಿರೂಪಿಸಿದರು. ರತ್ನದೀಪ ಹುಲಸೂರೆ ವಂದಿಸಿದರು.
ಸಂತ ಜ್ಞಾನೇಶ್ವರ ಅವರು ಸತ್ಯ ಶುದ್ಧ ಕಾಯದ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದರು. ತಮ್ಮ ಜ್ಞಾನದ ಮೂಲಕ ಮಹಾತ್ಮರ ಕೃತಿಗಳನ್ನು ಎಲ್ಲ ಭಾಷೆಗಳಿಗೆ ಅನುವಾದ ಮಾಡಿ ಮಹಾತ್ಮರ ಸಂದೇಶಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದರು. ಈ ಭಾಗದಲ್ಲಿ ಅಂಥವರ ದೇಗುಲ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದರು. ಯುವಕರು ಮಹಾತ್ಮರ ಚಿಂತನೆ ಅಳವಡಿಸಿಕೊಳ್ಳುವುದರ ಜತೆಗೆ ನಮ್ಮ ಪೂರ್ವಜರು, ವಾರಿಕ ಸಂಪ್ರದಾಯಸ್ಥರು ತೋರಿದ ಮಾರ್ಗದಲ್ಲಿ ನಡೆಯಬೇಕಾಗಿದೆ.
ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ