Advertisement

ಶ್ರಮಪಟ್ಟು ದುಡಿದರೆ ನೆಮ್ಮದಿ

05:26 PM May 04, 2018 | Team Udayavani |

ಗದಗ: ಕಾರ್ಮಿಕರು ಪರಿಶ್ರಮ ಜೀವಿಗಳು. ಅವರ ಮನಃಪೂರ್ವಕ, ಪ್ರಾಮಾಣಿಕ ಹಾಗೂ ನಿಸ್ವಾರ್ಥವಾಗಿ ಮಾಡುವ ಶ್ರಮಕ್ಕೆ ಪರಮಾತ್ಮನ ಆಶೀರ್ವಾದ ದೊರಕುತ್ತದೆ ಎಂದು ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

Advertisement

ಕಾರ್ಮಿಕನ ಮನಸ್ಸು ಆರೋಗ್ಯ ಪೂರ್ಣವಾಗಿರುವುದರ ಜೊತೆಗೆ ಶರೀರವು ಆರೋಗ್ಯ ಪೂರ್ಣವಾಗಿರುತ್ತದೆ. ಶ್ರಮಪಟ್ಟು ಕೆಲಸ ಮಾಡುವುದರಿಂದ ಕಾರ್ಮಿಕ ರೋಗ ಮುಕ್ತನಾಗಿರುತ್ತಾನೆ. ಅದರೊಂದಿಗೆ ಅವರ ಮನಸ್ಸು ಯೋಗಯುಕ್ತವಾಗಿರಬೇಕು ಎಂದು ಹೇಳಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶ್ರಮಪಟ್ಟು ದುಡಿಯುವವರಿಗೆ ರಾಜಯೋಗದ ಅಭ್ಯಾಸದಿಂದ ಆಂತರಿಕ ಶಕ್ತಿ ಮತ್ತು ನೆಮ್ಮದಿ ವೃದ್ಧಿಸುತ್ತದೆ. ಕಾರ್ಮಿಕರೊಂದಿಗೆ ಮಾಲೀಕರು ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಮಿಕ ಶೇಖರಪ್ಪ ರೇವಡಿಹಾಳ, ಕಾರ್ಮಿಕ ಈರಪ್ಪ ಬೇಲೇರಿ ಮಾತನಾಡಿ, ಲಕ್ಕುಂಡಿ ಈಶ್ವರೀಯ ವಿಶ್ವ ವಿದ್ಯಾಲಯದ ಕಟ್ಟಡವನ್ನು ಕಟ್ಟಲು ಇಂಜಿನಿಯರ್‌ ನನಗೆ ಜವಾಬ್ದಾರಿ ಕೊಟ್ಟರು. ಅಲ್ಲಿಯ ಬ್ರಹ್ಮಕುಮಾರಿ ಅಕ್ಕಂದಿರು, ನನ್ನಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿದರು ಎಂದರು.

ಅಬ್ದುಲ್‌ ಹುಮನಾಬಾದ್‌, ಮಹೇಶ ವಡ್ಡರ, ಪರಶುರಾಮ ಡೊಳ್ಳಿ, ಗಣೇಶ ಹಳ್ಳಿಕೇರಿ ಮೊಹಮ್ಮದ್‌ ಶಾರುಕ್‌, ಮಲ್ಲಿಕ್‌ ಕುಂದಗೋಳ, ಸತೀಶ ಕುರಬರ, ತಿಮ್ಮಣ್ಣ ಹಳ್ಳಕೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next