Advertisement

ಶಾಂತಿ, ಸೌಹಾರ್ದ ವೃದ್ಧಿಸುವುದೇ ಜಾಗತಿಕ ತಿಳಿವಳಿಕೆ’

05:09 PM Mar 06, 2017 | |

ಪಡುಬಿದ್ರಿ: ಭಾರತೀಯರಾದ ನಮ್ಮ ಸಂಸ್ಕೃತಿ,ಜೀವನ ಪದ್ಧತಿಗಳು ಜಗತ್ತಿಗೆ ಮಾದರಿಯಾಗಿದೆ. ಆಧುನಿಕತೆಯ ಸೋಗಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ.ಮನುಕುಲದ ಬದುಕು ಒತ್ತಡರಹಿತ ಜೀವನದಲ್ಲಿ ಅಡಗಿದೆ. ನಗು ಜೀವನದ ದಿವ್ಯ ಔಷಧಿ. ನಮ್ಮ ಜೀವನಪದ್ಧತಿಯನ್ನು ಮಕ್ಕಳಿಗೆ ಕಲಿಸಿ ಆರೋಗ್ಯವಂತರಾಗಿ ಬಾಳುವುದೇ ಸುಖೀಜೀವನ. ಶಾಂತಿ ಸೌಹಾರ್ದತೆ ವೃದ್ಧಿಸುವುದೇ ಜಾಗತಿಕ ತಿಳುವಳಿಕೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3180 ಇದರ ಮಾಜಿ ರಾಜ್ಯಪಾಲ ಕೆ.ಸೂರ್ಯಪ್ರಕಾಶ್‌ ಭಟ್‌ ನುಡಿದರು.

Advertisement

ಅವರು ರೋಟರಿ ಕ್ಲಬ್‌ ಪಡುಬಿದ್ರಿಯ ಆಶ್ರಯದಲ್ಲಿ ರೋಟರಿ ಅ.ರಾ.ಜಿಲ್ಲೆ 3181 ಮತ್ತು 3182 ಇದರ ವಲಯ 1 ಮತ್ತು 5ರ ರೋಟರಿ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಇನ್ನಾ ಸುಖಂತಾಯ್‌ ಕೊಟೇಜ್‌ನಲ್ಲಿ ಫೆ. 23ರಂದು ಜರುಗಿದ ಅಂತಾರಾಷ್ಟ್ರೀಯ   ರೋಟರಿಯ 112ನೇ ಸಂಸ್ಥಾಪನಾದಿನದ ಅಂಗವಾಗಿ ಜರಗಿದ  ”ರೋಟರಿ ಜಾಗತಿಕ ತಿಳುವಳಿಕೆ ದಿನಾಚರಣೆ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ರೋಟರಿ ಅಧ್ಯಕ್ಷ ಅಬ್ದುಲ್‌ ಹಮೀದ್‌ ವಹಿಸಿದ್ದರು. ವಲಯ 1ರ ಸಹಾಯಕ ಗವರ್ನರ್‌ ಜಿನರಾಜ್‌ ಸಿ.ಸಾಲಿಯನ್‌ ಶುಭ ಹಾರೈಸಿದರು. ವೇದಿಕೆಯಲ್ಲಿ ವಲಯ ಸೇನಾನಿಗಳಾದ  ಮೋಹನ್‌ ಪಡಿವಾಳ್‌ ,
ಶ್ರೀನಿವಾಸ ರಾವ್‌, ವಿನ್ಸೆಂಟ್‌ ಡಿಸೋಜ,ಜಯರಾಮ್‌ ಪೂಂಜ, ಮಾಧವ ಅಮೀನ್‌, ರೋಟರಿ ಕ್ಲಬ್‌ಗಳ ಅಧ್ಯಕ್ಷರುಗಳಾದ ಡಾ.ಅರುಣ್‌ ಹೆಗ್ಡೆ ಶಿರ್ವ,ಸುಧೀರ್‌ಕುಮಾರ್‌ ಕಾಪು,ಜಯರಾಮ ಶೆಟ್ಟಿ ಮಣಿಪುರ, ಅನಿಲ್‌ ಡೇಸಾ ಶಂಕರಪುರ, ವಿN°àಶ್‌ ಶೆಣೆ„ ಬೆಳ್ಮಣ್‌, ಶೇಖರ್‌ ಎಚ್‌.ಕಾರ್ಕಳ, ಶೇಖರ ಪೂಜಾರಿ ನಿಟ್ಟೆ, ಜೋನ್‌ ವಿಲ್ಸನ್‌ ಡಿ’ಸೋಜ ಮುಲ್ಕಿ, ವಂದನ್‌ ಪಿಂಟೊ ಬಜ್ಪೆ, ರಮಾನಂದ ಪೂಜಾರಿ ಕಿನ್ನಿಗೋಳಿ, ಧೀರಜ್‌ ಕುಮಾರ್‌ ಮೂಡುಬಿದ್ರೆ ಮಿಡ್‌ಟೌನ್‌ ಉಪಸ್ಥಿತರಿದ್ದರು. 

ರೋಟರಿ ವಲಯ 5ರ ಸಹಾಯಕ ಗವರ್ನರ್‌ ಡಾ | ಗುರುರಾಜ್‌ ಪ್ರಾಸ್ತಾವಿಸಿದರು. ಹಿರಿಯ ಮಾಜಿ ಸಹಾಯಕ ಗವರ್ನರ್‌ ಬಿ.ಪುಂಡಲೀಕ ಮರಾಠೆ ಶಿರ್ವ ನಿರೂಪಿಸಿದರು. ಜಯರಾಮ ಪೂಂಜಾ ಕಿನ್ನಿಗೋಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next