Advertisement
ಪಿಡಿಒ ಹುದ್ದೆಗಳು ಸೃಷ್ಟಿಯಾಗಿ 13 ವರ್ಷ ಕಳೆದರೂ ಕ್ರಮಬದ್ಧವಾಗಿ ಜ್ಯೇಷ್ಠತಾ ಪಟ್ಟಿ ಅಂತಿಮಗೊಳ್ಳದೆ ಇರುವುದರಿಂದ ಭಡ್ತಿ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ಗೊಂದಲಗಳಾಗುತ್ತಿವೆ.
ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೆ.8ರಂದು ಇಲಾಖೆಯ ವಾಟ್ಸ್‌ಆಪ್ ಗ್ರೂಪ್‌ಗ್ಳಿಂದ ಹೊರಬರುವ ಮೂಲಕ ಅಸಹಕಾರ ಚಳವಳಿ ಆರಂಭಿಸಲು ಚಿಂತನೆ ನಡೆದಿತ್ತಲ್ಲದೆ, ಹಿರಿಯ ಅಧಿಕಾರಿಗಳ ಸಭೆಗೆ ಗೈರಾಗುವುದು, ಆನ್‌ಲೈನ್ ಸೇವೆ ಸ್ಥಗಿತಗೊಳಿಸುವ ಯೋಚನೆಯೂ ಇತ್ತು. ಇಷ್ಟಾದರೂ ಸರಕಾರ ಮಣಿಯದಿದ್ದರೆ, ಸೆ.14ರಿಂದ ಪಂಚಾಯತ್‌ರಾಜ್ ಆಯುಕ್ತಾಲಯದ ಎದುರು ಅನಿರ್ದಿಷ್ಟಾವಧಿ ಮುಷ್ಕರ ಹೂಡುವ ಎಚ್ಚರಿಕೆಯನ್ನೂ ನೀಡಿತ್ತು. ಇದರ ಬೆನ್ನಲ್ಲೇ ರಾಜ್ಯಾದ್ಯಂತ 99 ಪಿಡಿಒಗಳನ್ನು ಎತ್ತಂಗಡಿ ಮಾಡಲಾಗಿದ್ದು, ವರ್ಗಾವಣೆ ಆದೇಶದಿಂದ ಬಾಧಿತರಾಗುವ ಪಿಡಿಒಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಆಯಾ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳಬೇಕು. ಮುಂದಿನ ಸ್ಥಳ ನಿಯುಕ್ತಿಗಾಗಿ ಪಂಚಾಯತ್‌ರಾಜ್ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಪಂ ಸಿಇಒಗಳಿಗೆ ಆದೇಶದಲ್ಲಿ ನಿರ್ದೇಶನ ನೀಡಿದೆ.