Advertisement
ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಸ್ವೆ„ಪಿಂಗ್, ಕ್ಯಾಮೆರಾ, ಪ್ರಿಂಟಿಂಗ್, ಜಿಪಿಎಸ್ ಸೇರಿದಂತೆ ನಾಲ್ಕೈದು ಅನುಕೂಲಗಳು ಅಡಕವಾಗಿರುವ ಈ ಯಂತ್ರದ ಬ್ಯಾಟರಿ ಸಾಮರ್ಥ್ಯ ಇಡೀ ದಿನಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ಸಂಚಾರ ಪೊಲೀಸರಿಗೆ ಈ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಮೊದಲು ಬಳಕೆ ಮಾಡುತ್ತಿದ್ದ ಬ್ಲ್ಯಾಕ್‌ಬೆರಿ ಯಂತ್ರದಲ್ಲಿ ಒಂದೇ ವ್ಯವಸ್ಥೆ ಇದ್ದುದ್ದರಿಂದ ಬ್ಯಾಟರಿ ಸಾಮರ್ಥ್ಯ ಇಡೀ ದಿನಕ್ಕೆ ಸಾಕಾಗುತ್ತಿತ್ತು.
Related Articles
Advertisement
ಹಿರಿಯ ಅಕಾರಿಗಳಿಗೆ ದೂರು: ನೂತನ ಬ್ಲ್ಯಾಕ್‌ಬೆರಿ ಸಾಧನದಲ್ಲಿ ಕಂಡು ಬರುತ್ತಿರುವ ಬ್ಯಾಟರಿ ದೋಷ ಪರಿಹರಿಸುವಂತೆ ಸಂಚಾರ ವಿಭಾಗದ ಹಿರಿಯ ಅಕಾರಿಗಳಿಗೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಅಕಾರಿಗಳು ಸದ್ಯದಲ್ಲೇ ಉತ್ತಮ ಬ್ಯಾಟರಿ ಸಾಮರ್ಥಯ ಹೊಂದಿರುವ ಯಂತ್ರ ಅಥವಾ ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳಲು ಪವರ್ ಬ್ಯಾಂಕ್ ವಿತರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
20 ಲಕ್ಷ ದಂಡ ವಸೂಲಿ: ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್(ಪಿಡಿಎ) ಸಾಧನವನ್ನು ಕೇಂದ್ರ ಉಪವಿಭಾಗದ ಕಬ್ಬನ್ ಪಾರ್ಕ್, ಹಲಸೂರು ಗೇಟ್, ಹೈಗ್ರೌಂಡ್ಸ್, ಅಶೋಕನಗರ, ವಿಲ್ಸನ್ ಗಾರ್ಡನ್, ಸದಾಶಿವನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸುಮಾರು 114 ಕಡೆ ಮಾತ್ರ ವಿತರಿಸಲಾಗಿದೆ. ಈ ಯಂತ್ರದಿಂದ ಕಳೆದೊಂದು ವಾರದಲ್ಲಿ ಸುಮಾರು 27 ಸಾವಿರ ಸಂಚಾರ ನಿಯಮ ಉಲ್ಲಂ ಸಿದ ಪ್ರಕರಣಗಳನ್ನು ದಾಖಲಿಸಿದ್ದು, 20 ಲಕ್ಷ ರೂಪಾಯಿಗೂ ಅಕ ದಂಡ ವಸೂಲಿ ಮಾಡಲಾಗಿದೆ. ಈ ತಿಂಗಳ ಅಂತ್ಯದಲ್ಲಿ ನಗರದ ಎಲ್ಲಾ ಠಾಣೆಗಳಿಗೆ ವಿತರಿಸಲಾಗುತ್ತದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.
ಸಿಬ್ಬಂದಿಗೆ ತರಬೇತಿ: ಹಳೆಯ ಬ್ಲ್ಯಾಕ್‌ಬೆರಿ ಸಾಧನದಲ್ಲಿದ್ದ ತಂತ್ರಾಂಶವನ್ನು ಹೆಚ್ಚುವರಿಯಾಗಿ ಅಭಿವೃದ್ಪಡಿಸಿ ನೂತನ ಬ್ಲ್ಯಾಕ್‌ಬೆರಿ ಅಥವಾ ಪಿಡಿಎನಲ್ಲಿ ಅಳವಡಿಸಲಾಗಿದೆ. ಈ ಹೊಸ ಮಾದರಿಯ ತಂತ್ರಾಂಶದ ಬಗ್ಗೆ ಮಾಹಿತಿ ನೀಡಲು ಸಂಚಾರ ನಿರ್ವಾಹಣ ಕೇಂದ್ರದಲ್ಲಿ (ಟಿಎಂಸಿ) ಪ್ರತಿ ನಿತ್ಯ ಒಂದು ಗಂಟೆಗಳ ಕಾಲ ಠಾಣಾವಾರು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಪ್ರಾತ್ಯಕ್ಷಿಕೆ ಮೂಲಕ ಬಳಕೆಯ ಬಗ್ಗೆ ಹೇಳಿಕೊಡಲಾಗುತ್ತದೆ ಎಂದು ಸಂಚಾರ ವಿಭಾಗದ ಅಕಾರಿಗಳು ತಿಳಿಸಿದ್ದಾರೆ.
ಕಿರಿಕಿರಿ ಇಲ್ಲ: ಈ ಮೊದಲು ಸಂಚಾರ ಸಿಬ್ಬಂದಿ ಎದೆ ಭಾಗದಲ್ಲಿ ಕ್ಯಾಮೆರಾ ಅಳವಡಿಸಿಕೊಂಡು ಸಂಚಾರ ನಿಯಮ ಉಲ್ಲಂ ಸಿದ ವಾಹನ ಸವಾರರ ಭಾವಚಿತ್ರ, ವಿಡಿಯೋ ಸೆರೆ ಹಿಡಿದು, ಈ ಸಾಕ್ಷ ಬಳಸಿ ದಂಡ ವಿಸುತ್ತಿದ್ದರು. ಅಲ್ಲದೆ, ಪ್ರಿಂಟರ್‌ಅನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕಿತ್ತು. ಇದೀಗ ಹೊಸ ಯಂತ್ರದಿಂದ ಎಲ್ಲವನ್ನು ಒಂದೇ ಬಾರಿ ಉಪಯೋಗಿಸುವುದರಿಂದ ಸಮಯ ಉಳಿತಾಯವಾಗುವುದರೊಂದಿಗೆ ಸಾರ್ವಜನಿಕರು ಹಾಗೂ ಸಿಬ್ಬಂದಿ ನಡುವೆ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿದೆ ಎನ್ನುತ್ತಾರೆ ಸಾಧನ ಬಳಕೆ ಮಾಡುತ್ತಿರುವ ಸಿಬ್ಬಂದಿಯೊಬ್ಬರು.
ಪಿಡಿಎ ಯಂತ್ರಗಳನ್ನು ಬಳಸಲು ಆರಂಭಿಸಿದ ಬಳಿಕವೇ ಅದರ ಸಮಸ್ಯೆ ಏನೆಂದು ಗೊತ್ತಾಗುತ್ತದೆ. ಬ್ಯಾಟರಿ ಸಾಮರ್ಥ್ಯದ ಬಗ್ಗೆ ಸಂಚಾರ ಪೊಲೀಸರು ಗಮನಕ್ಕೆ ತಂದಿದ್ದಾರೆ. ಉಳಿದಂತೆ ಅದು ಅತ್ಯುತ್ತಮ ಎಂಬ ಅಂಶವನ್ನೂ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ, ಬ್ಯಾಟರಿ ಸಾಮರ್ಥ್ಯ ಹೆಚ್ಚಾಗಿರುವ ಯಂತ್ರಗ ಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. -ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ * ಮೋಹನ್ ಭದ್ರಾವತಿ