Advertisement
ಮಂಗಳೂರು ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ. ಎಲ್. ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ತರಬೇತಿಗೊಳಿಸುವಂತಾಗಲು ಶಿಕ್ಷಕರಿಗೆ ಇಂತಹ ಶಿಬಿರಗಳು ಪೂರಕವಾಗಿವೆ. ಶಿಕ್ಷಣದ ಜತೆಗೆ ದೈಹಿಕವಾಗಿ ವಿದ್ಯಾರ್ಥಿಗಳು ಸದೃಢವಾಗಿ ಬೆಳೆಯಲು ಶಾಲೆಗಳಲ್ಲಿ ನೀಡುವ ಶಾರೀರಿಕ ವ್ಯಾಯಾಮ, ಆಟೋಟ ಕ್ರೀಡೆಗಳು ಸಹಾಯಕವಾಗುತ್ತವೆ. ಇದು ಮಕ್ಕಳ ಕಲಿಕೆಗೂ ಪೂರಕವಾಗಿದೆ ಎಂದು ಹೇಳಿದರು. ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ. ಎಚ್. ನಾಯಕ್ ಮಾತನಾಡಿ, ಶಿಕ್ಷಕರಿಗೆ ಸರಕಾರದ ಹೆಚ್ಚುವರಿ ಭಡ್ತಿಯ ಕುರಿತು ವಿಶೇಷ ಮಾಹಿತಿ ನೀಡಿದರು. ಮೇರಿವೆಲ್ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಬಿ. ಎಸ್., ಶಿಕ್ಷಣ ಸಂಯೋಜಕಿ ಜಾನೆಟ್ ಲೋಬೋ, ತಾಲೂಕು ದೈಹಿಕ ಕ್ರೀಡಾಧಿಕಾರಿ ಆಶಾ ನಾಯಕ್, ನಾಗೇಶ್ ಎಸ್., ಬಾಲಕೃಷ್ಣ, ತ್ಯಾಗಂ, ಕರಿಯಪ್ಪ ರೈ, ಫ್ರೀಡಾ ರೋಡ್ರಿಗಸ್, ಶೇಖರ್ ಕಡ್ತಲ, ಶಕೂರ್, ಐರಿನ್ ಮತ್ತಿತರಿದ್ದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಅಧಿಕ ಅಂಕ ಗಳಿಸಿದ ದೈಹಿಕ ಶಿಕ್ಷಣ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಮ್ಮಾನ, ಅಪಘಾತಕ್ಕೀಡಾದವರಿಗೆ ಆರ್ಥಿಕ ಸಹಕಾರ ನೀಡಲಾಯಿತು. ತಾಲೂಕು ಸಂಘದ ಹರೀಶ್ ರೈ ಪ್ರಸ್ತಾವನೆಗೈದರು. ಗೌರವಾಧ್ಯಕ್ಷ ದಯಾನಂದ ಮಾಡ ಸ್ವಾಗತಿಸಿದರು. ನಾಗೇಶ್ ನಾಯಕ್ ವಂದಿಸಿದರು. ಉಮೇಶ್ ಹಾಗೂ ಹರಿಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು.