Advertisement

ಫಿಕ್ಸಿಂಗ್‌: ಪಾಕ್‌ ಕ್ರಿಕೆಟಿಗ ಲತೀಫ್ಗೆ 5 ವರ್ಷ ನಿಷೇಧ

10:11 AM Sep 21, 2017 | Team Udayavani |

ಲಾಹೋರ್‌(ಪಾಕಿಸ್ಥಾನ): ಪಾಕಿಸ್ಥಾನ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಸ್ಪಾಟ್‌ ಫಿಕ್ಸಿಂಗ್‌ ಮಾಡಿರುವ ಆರೋಪದ ಮೇಲೆ ಪಾಕ್‌ನ ಬ್ಯಾಟ್ಸ್‌ಮನ್‌ ಖಾಲೀದ್‌ ಲತೀಫ್ಗೆ 5 ವರ್ಷ ನಿಷೇಧ ವಿಧಿಸಲಾಗಿದೆ. ಬುಧವಾರ ಅಂತಿಮ ವಿಚಾರಣೆ ನಡೆಸಿದ ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ನಿಷೇಧದ ಜತೆಗೆ 10 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬಿದ್ದ ಮತ್ತೂಬ್ಬ ಆರೋಪಿ ಶಾರ್ಜಿಲ್‌ ಖಾನ್‌ಗೆ ಕಳೆದ ತಿಂಗಳು 5 ವಿರ್ಷ ನಿಷೇಧ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು.

Advertisement

ಐಪಿಎಲ್‌ ಮಾದರಿಯಲ್ಲಿಯೇ ಕಳೆದ ಫೆಬ್ರವರಿಯಲ್ಲಿ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಪಾಕಿಸ್ಥಾನ ಸೂಪರ್‌ ಲೀಗ್‌ ಅನ್ನು ಆಯೋಜಿಸಿತ್ತು. ಇಲ್ಲಿ ದೇಶಿ ಆಟಗಾರರ ಜತೆ ವಿದೇಶಿ ಆಟಗಾರರು ವಿವಿಧ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ದುಬೈನಲ್ಲಿ ನಡೆದ ಕೂಟದಲ್ಲಿ ಇಸ್ಲಾಮಾಬಾದ್‌ ಯುನೈಟೆಡ್‌ ಮತ್ತು ಪೇಶಾವರ ಜಲಿ ತಂಡಗಳ ನಡುವಿನ ಪಂದ್ಯದ ವೇಳೆ ಲತೀಫ್ ಮತ್ತು ಶಾರ್ಜಿಲ್‌ ಖಾನ್‌ ಸ್ಪಾಟ್‌ ಫಿಕ್ಸಿಂಗ್‌ ಮಾಡಿರುವುದು ಸಾಬೀತಾಗಿತ್ತು. ಪ್ರಕರಣ ಬೆಳಕಿಗೆ ಬಂದ ತತ್‌ಕ್ಷಣ ಪಾಕ್‌ ಮಂಡಳಿ ಇಬ್ಬರು ಕ್ರಿಕೆಟಿಗರನ್ನು ಅಮಾನತು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next