Advertisement

IPL Fixing;ಭ್ರಷ್ಟಾಚಾರ ತಡೆ ಕಾನೂನಿನ ಕೊರತೆಯೇ ಶ್ರೀಶಾಂತ್‌ ಪಾರಾಗಲು ಕಾರಣ

12:04 AM Apr 08, 2024 | Team Udayavani |

ಹೊಸದಿಲ್ಲಿ: “ನಮ್ಮಲ್ಲಿ ಕ್ರೀಡಾ ಭ್ರಷ್ಟಾಚಾರ ವನ್ನು ತಡೆಯಲು ಸೂಕ್ತ ಕಾನೂನುಗಳಿಲ್ಲ. ಇದ್ದಿದ್ದರೆ 2013ರ ಐಪಿಎಲ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಎಸ್‌. ಶ್ರೀಶಾಂತ್‌, ಅಜಿತ್‌ ಚಂಡೀಲಾ, ಅಂಕಿತ್‌ ಚವಾಣ್‌ರಂತಹ ಆಟಗಾರರು ಪಾರಾಗಲು ಸಾಧ್ಯ ವಿರಲಿಲ್ಲ… ‘ ಹೀಗೆಂದು ದಿಲ್ಲಿ ಮಾಜಿ ಪೊಲೀಸ್‌ ಆಯುಕ್ತ ನೀರಜ್‌ ಕುಮಾರ್‌ ಹೇಳಿದ್ದಾರೆ.

Advertisement

ನೀರಜ್‌ ನೇತೃತ್ವದಲ್ಲೇ ಕಾರ್ಯಾಚರಣೆ ನಡೆ ಸಿದ್ದ ವಿಶೇಷ ತಂಡವೊಂದು, 2013ರಲ್ಲಿ ಎಸ್‌. ಶ್ರೀಶಾಂತ್‌, ಚಂಡೀಲಾ, ಅಂಕಿತ್‌ ಚವಾಣ್‌ರನ್ನು ಬಂಧಿಸಿತ್ತು. ಇದೀಗ ಅಷ್ಟೂ ಜನ ಬಿಸಿಸಿಐ ನಿಷೇಧದಿಂದ ಪಾರಾಗಿದ್ದಾರೆ. ಶ್ರೀಶಾಂತ್‌ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದರೂ, ಅವರ ವಿರುದ್ಧದ ಆಜೀವ ನಿಷೇಧವನ್ನು 7 ವರ್ಷಕ್ಕಿಳಿಸಲು 2019ರಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಪರಿಣಾಮ, ಶ್ರೀಶಾಂತ್‌ 2020ರಲ್ಲೇ ನಿಷೇಧದಿಂದ ಹೊರಬಂದಿದ್ದರು. ಅನಂತರ ಕೇರಳ ಪರ ರಣಜಿ ಆಡಿ ನಿವೃತ್ತಿ ಹೇಳಿದ್ದರು.

ನೀರಜ್‌ ಹೇಳಿದ್ದೇನು?
ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಯಲು ನಮ್ಮ ದೇಶದಲ್ಲಿ ಸೂಕ್ತ ಕಾನೂನುಗಳಿಲ್ಲ. ಹೀಗಾಗಿ ಅಂತಹ ಪ್ರಕರಣಗಳು ನಿಲ್ಲುವುದಿಲ್ಲ. ಜಿಂಬಾಬ್ವೆಯಂತಹ ದೇಶದಲ್ಲೂ ಭ್ರಷ್ಟಾಚಾರ ತಡೆಯಲು ಬಲವಾದ ನಿಯಮಗಳಿವೆ. ಯೂರೋಪ್‌ ರಾಷ್ಟ್ರಗಳಲ್ಲೂ ನಿಯಮಗಳಿವೆ. ಕಾರಣ ಅಲ್ಲಿನ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಫ‌ುಟ್‌ಬಾಲ್‌, ಟೆನಿಸ್‌ನಲ್ಲೂ ಭ್ರಷ್ಟಾಚಾ ರವಿದೆ ಎಂದು ನೀರಜ್‌ ಹೇಳಿದರು. 37 ವರ್ಷ ದಿಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ನೀರಜ್‌, 2000ರಲ್ಲಿ ನಡೆದ ಹ್ಯಾನ್ಸಿ ಕ್ರೋನ್ಯೆ ಫಿಕ್ಸಿಂಗ್‌ ಪ್ರಕರಣದಲ್ಲೂ ಕಾರ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next