Advertisement

ಏಷ್ಯಾಕಪ್ ಕ್ರಿಕೆಟ್: ಭಾರತಕ್ಕೆ ಗಡುವು ನೀಡಿದ ಪಾಕ್

08:49 AM Oct 01, 2019 | keerthan |

ಕರಾಚಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಭಾಗವಹಿಸುವ ಬಗ್ಗೆ ಮುಂದಿನ ವರ್ಷದ ಜೂನ್ ಒಳಗೆ ಖಚಿತಪಡಿಸಬೇಕೆಂದು ಭಾರತಕ್ಕೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಗಡುವು ನೀಡಿದೆ.

Advertisement

ಟೀಂ ಇಂಡಿಯಾ ಪಾಕಿಸ್ಥಾನಕ್ಕೆ ಬರುವುದೋ ಇಲ್ಲವೋ ಎಂದು ನಾವು ನೊಡಬೇಕಿದೆ. ಮುಂದಿನ ಸೆಪ್ಟೆಂಬರ್ ತನಕ ಸಮಯವಿದ್ದರೂ ನಮಗೆ ಬಿಸಿಸಿಐ ಜೂನ್ ನಲ್ಲಿ ತಿಳಿಸಬೇಕು. ಒಂದು ವೇಳೆ ಭಾರತ ಭಾಗವಹಿಸುದಿಲ್ಲವಾದರೆ ಟೂರ್ನಿಯನ್ನು ಸ್ಥಳಾಂತರ ಮಾಡುವುದೋ ಎಂದು ಕಾದು ನೋಡುಬೇಕಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಂ ಖಾನ್ ಹೇಳಿಕೆ ನೀಡಿದ್ದಾರೆ.

ಏಷ್ಯನ್ ಕ್ರಿಕೆಟ್ ಸಮಿತಿ ಮತ್ತು ಐಸಿಸಿ ಸೇರಿ ಈ ನಿರ್ಧಾರ ಕೈಗೊಳ್ಳಬೇಕಿದೆ. ಒಂದು ವೇಳೆ ಭಾರತ ಬರಲು ಒಪ್ಪುವುದಾದರೆ ನಾವು ರಕ್ಷಣೆ ನೀಡುತ್ತೇವೆ ಎಂದರು.

ಏಷ್ಯಾ ಕಪ್ ಟೂರ್ನಮೆಂಟ್ 2020ರ ಸಪ್ಟೆಂಬರ್ ನಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿದೆ.  ಪಾಕಿಸ್ಥಾನ, ಅಫ್ಘಾನಿಸ್ಥಾನ, ಭಾರತ, ಶ್ರೀಲಂಕಾ, ಬಾಂಗ್ಲಾದೇಶಗಳು ಕೂಟದಲ್ಲಿ ಪಾಲ್ಗೊಳ್ಳಲಿವೆ. ಆದರೆ ಭಾರತ ತನ್ನ ಭಾಗವಹಿಸುವಿಕೆಯ ಬಗ್ಗೆ ಇನ್ನೂ ಖಚಿತಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next