Advertisement
ಐಪಿಎಲ್ ಮತ್ತು ಕಬಡ್ಡಿಗೆ ಸಿಕ್ಕ ವೀಕ್ಷಕರು, ಕ್ರೀಡಾಭಿಮಾನಿಗಳು, ಪ್ರಚಾರ ಬ್ಯಾಡ್ಮಿಂಟನ್ ಲೀಗ್‌ಗೆ ಸಿಕ್ಕಿಲ್ಲ. ಆದರೆ ಸ್ಟಾರ್ ಆಟಗಾರ್ತಿಯರಾದ ಒಲಿಂಪಿಕ್ಸ್ ಪದಕ ವಿಜೇತ ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಸ್ಪೇನ್‌ನ ಕ್ಯಾರೋಲಿನಾ ಮರಿನ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಆಟ ನೋಡಲೆಂದೇ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಮೂವರು ಆಟಗಾರ್ತಿಯರ ಆಟದ ವೈಖರಿ ಮತ್ತು ಗ್ಲಾಮರ್ ಅನ್ನಲು ಅಡ್ಡಿಯಿಲ್ಲ. ಹೀಗಾಗಿ ಮುಂದಿನ ಲೀಗ್‌ಗೆ ಈ ಲೀಗ್‌ನ ಯಶಸ್ಸು ಅಡಿಪಾಯವಾಗಿದೆ.
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ.ಸಿಂಧು ಟೂರ್ನಿಯ ಪ್ರಮುಖ ಸ್ಟಾರ್ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದರು. ಚೆನ್ನೈ ಸ್ಮ್ಯಾಷರ್ ತಂಡದಲ್ಲಿ ಆಡಿದ ಸಿಂಧು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಚೆನ್ನೈ
ತಂಡ ಚಾಂಪಿಯನ್ ಪಟ್ಟ ಪಡೆಯುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಸಿಂಧು ಅವರನ್ನು ಪಡೆಯಲು ಫ್ರಾಂಚೈಸಿಗಳು ದೊಡ್ಡ ಮಟ್ಟದ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಅವಧ್ ವಾರಿಯರ್ನಲ್ಲಿ ಸೈನಾ
ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಸೈನಾ ನೆಹ್ವಾಲ್ ಲೀಗ್‌ನ ಪ್ರಮುಖ ಆಕರ್ಷಣೆಯಾಗಿದ್ದರು. ಆಗಾಗ ಗಾಯಗೊಂಡು, ಫಿಟೆ°ಸ್ ಕೊರತೆಯಿಂದ ಫಾರ್ಮ್ ಕಳೆದುಕೊಳ್ಳುತ್ತಿರುವ ಸೈನಾ ಲೀಗ್‌ನ ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಖ್ಯಾತ ಆಟಗಾರ್ತಿಯರಾದ ಕ್ಯಾರೋಲಿನಾ ಮರಿನ್ ಮತ್ತು ಸಿಂಧು ವಿರುದ್ಧ ಸೋಲುಂಡರು. ಆದರೆ ಇವರಿಗೆ ಇರುವ ಸ್ಟಾರ್ ಪಟ್ಟ ಅಭಿಮಾನಿಗಳನ್ನು ಮೈದಾನಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.
Related Articles
Advertisement
ಸ್ಪೇನ್‌ನ ಕ್ಯಾರೋಲಿನಾ ಮರಿನ್ ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಆಟಗಾರ್ತಿ. ಇವರು ಹೈದ್ರಾಬಾದ್ ಹಂಟರ್ ತಂಡದಲ್ಲಿ ಆಡಿದ್ದಾರೆ. ಪ್ರಮುಖ ಎದುರಾಳಿಗಳ ವಿರುದ್ಧ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಹಂಟರ್ ತಂಡ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮರಿನ್ ಎಡವಿದ್ದು ಸೆಮಿಫೈನಲ್‌ನಲ್ಲಿ ಮುಬೈ ರಾಕೆಟ್ಸ್ ವಿರುದ್ಧ ಮಾತ್ರ. ಮರಿನ್‌ಗೂ ಭಾರತದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ ಅನ್ನೋದು ಕ್ರೀಡಾಂಗಣದಲ್ಲಿ ಹೊರಹೊಮ್ಮುತ್ತಿದ್ದ ಜೈಕಾರದಲ್ಲಿಯೇ ತಿಳಿಯುತ್ತಿತ್ತು.
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ 2ನೇ ಆವೃತ್ತಿಯ ಈ ಯಶಸ್ಸು ಮತ್ತೂಂದು ಆವೃತ್ತಿಗೆ ಅಡಿಪಾಯವಾಗಿದೆ. ಭಾರತದಲ್ಲಿನ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರಕುತ್ತಿದೆ.