Advertisement

ಇಂದಿನಿಂದ ಪಿಬಿಎಲ್‌ ಬೆಂಗಳೂರು ಆವೃತ್ತಿ

12:35 AM Jan 07, 2019 | Team Udayavani |

ಬೆಂಗಳೂರು: ಈ ಬಾರಿಯ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಪಂದ್ಯಾವಳಿಯ ಲೀಗ್‌ ಹಂತದ ಐದನೇ ಹಾಗೂ ಅಂತಿಮ ಹಂತದ ಪಂದ್ಯಗಳಿಗಾಗಿ ಬೆಂಗಳೂರು ಸಜ್ಜಾಗಿದೆ. 

Advertisement

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಅವಧೆ ವಾರಿಯರ್ಸ್‌ ಹಾಗೂ ಪಿಬಿಎಲ್‌ 2ನೇ ಆವೃತ್ತಿಯ ಚಾಂಪಿಯನ್‌ ತಂಡವಾದ ಚೆನ್ನೈ ಸ್ಮಾಷರ್ಸ್‌ ನಡುವೆ ಪಂದ್ಯ ನಡೆಯಲಿದೆ. ಈ ಹಂತ ಮುಕ್ತಾಯಗೊಂಡ ಅನಂತರ ಫೈನಲ್‌ ಪಂದ್ಯವೂ ಕಂಠೀರವ ಕ್ರೀಡಾಂಗಣದಲ್ಲೇ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next