Advertisement
ಜೂನ್ ತಿಂಗಳಿನಿಂದ ವೇತನ ಸಿಗದೇ ಅದನ್ನೇ ನಂಬಿರುವ ರಾಜ್ಯದ 5 ಸಾವಿರಕ್ಕೂ ಅಧಿಕ ಗ್ರಾಮೀಣ ಗ್ರಂಥಪಾಲಕರು ಸಂಕಷ್ಟ ಅನುಭವಿಸುತ್ತಿದ್ದರು. ಈಗ 3 ತಿಂಗಳ ಬಾಕಿ ಸಂಬಳದ ಜತೆಗೆ ಸೆಪ್ಟಂಬರ್ ತಿಂಗಳ ವರೆಗಿನ ಸಂಬಳ ಅವರ ಕೈಸೇರಿದೆ.
Related Articles
ಗ್ರಾಮೀಣ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರಾಗಿ ದುಡಿಯುತ್ತಿರುವವರಿಗೆ 3 ತಿಂಗಳಿನಿಂದ ವೇತನ ಪಾವತಿಯಾಗದ ಬಗ್ಗೆ “ಉದಯವಾಣಿ’ಯು ಸೆ. 19ರಂದು “ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು. ನಮ್ಮ ಶೋಚನೀಯ ಬದುಕಿನ ಚಿತ್ರಣವನ್ನು ತೆರೆದಿಟ್ಟ “ಉದಯವಾಣಿ’ಯ ವರದಿಯಿಂದಾಗಿ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಬಾಕಿ ವೇತನ ಒಟ್ಟಿಗೆ ಸಿಗುವಂತಾಗಿದೆ. ಪತ್ರಿಕೆಗೆ ಕೃತಜ್ಞತೆಗಳು ಎಂದು ಕುಂದಾಪುರ ತಾಲೂಕು ಗ್ರಾಮೀಣ ಗ್ರಂಥಾಲಯ ನೌಕರರ ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.
Advertisement