Advertisement
ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೊತ್ತಲವಾಡಿ ಮಹದೇವ ಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ 142 ಗ್ರಾಮ ಪಂಚಾಯ್ತಿಗಳ ನೌಕರರು ಸಭೆ ಸೇರಿ, ರಾಜ್ಯ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಅವರ ಹೋರಾಟದ ಫಲವಾಗಿ, ರಾಜ್ಯ ಸರ್ಕಾರ ಮಾರ್ಚ್‌ರಿಂದಲೇ ಅನ್ವಯವಾಗುವಂತೆ ನೌಕರರಿಗೆ ನೇರವಾಗಿ ಸಂಬಳ ನೀಡಲು ತೀರ್ಮಾನಿಸಿದೆ. ಗ್ರಾಮ ಪಂಚಾಯಿತಿ ನೌಕರರು ಸಹ ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯ ಗ್ರಾಪಂ ನೌಕರರ ಪರ ಹೋರಾಟ ಮಾಡಿದ ಫಲವಾಗಿ ಇಂದು ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ ಎಂದರು.
ಮಾರ್ಚ್ ತಿಂಗಳಲ್ಲಿ ಎಲ್ಲಾ ನೌಕರರಿಗೂ ಸಂಬಳ ನೇರವಾಗಿ ಬರುವಂತಾಗಲು ತಮ್ಮ ಪಂಚಾಯಿತಿಗಳಲ್ಲಿ ಪಿಡಿಒ ಮುಖಾಂತರ ಪೂರ್ಣ ಮಾಹಿತಿಗಳನ್ನು ಜಿಲ್ಲಾ ಪಂಚಾಯ್ತಿಗೆ ನೀಡಬೇಕು. ಮಾ. 20ರೊಳಗೆ ಅಂತಿಮ ಗಡುವು ನೀಡಲಾಗಿದೆ. ಇಲ್ಲಿಯವರಿಗೆ ತಾವುಗಳು ಬ್ಯಾಂಕ್ ಖಾತೆಯನ್ನು ಹೊಂದ ಬೇಕು ಎಂದು ತಿಳಿಸಿದರು.
Related Articles
Advertisement
ಪ್ರಧಾನ ಕಾರ್ಯದರ್ಶಿ ಪಿ.ಮಹದೇವ ಸ್ವಾಮಿ, ರಾಜ್ಯ ಸಮಿತಿ ಸದಸ್ಯ ಸಿ.ಗೋವಿಂದ ರಾಜು, ತಾಲೂಕು ಅಧ್ಯಕ್ಷರಾದ ಚಾ.ನಗರ ಸುರೇಶ್, ಕೊಳ್ಳೇಗಾಲ ಸಿದ್ದೇಗೌಡ, ಜಿಲ್ಲಾ ಖಜಾಂಚಿ ಯೋಗೇಂದ್ರ, ಯಳಂದೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ, ಪಾಪಣ್ಣ, ನಂಜಪ್ಪ, ಸುಬ್ಬಣ್ಣ, ಡಿ.ಕೆ.ರವಿ, ಚಂದ್ರು, ಸಾಕಮ್ಮ ಇತರರಿದ್ದರು.
ರಾಜ್ಯ ಸರ್ಕಾರದ ಆದೇಶ ಶೀಘ್ರ ಜಾರಿಯಾಗಬೇಕು. ಜಿಪಂ ಸಿಇಒ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕೂಡಲೇ ಗ್ರಾಮ ಪಂಚಾಯ್ತಿಯಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರ ಬ್ಯಾಂಕ್ ಖಾತೆ ವಿವರಗಳನ್ನು ಇ- ಎಫ್ಎಂಎಸ್‌ಗೆ ಅಪಲೋಡ್ ಮಾಡಿ ವೇತನವನ್ನು ಅವರ ಖಾತೆಗೆ ಜಮಾ ಮಾಡಬೇಕು. ಮಹದೇವಸ್ವಾಮಿ, ಗ್ರಾಪಂ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ