ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ರೈತ, ಕೃಷಿ ಕೂಲಿಕಾರ, ದಲಿತ ಸಂಘಟನೆಗಳ ಒಕ್ಕೂಟ ಕರೆದ ಸಭೆಯಲ್ಲಿ ಅವರು ಮಾತನಾಡಿದರು. ಬರದಿಂದ ತತ್ತರಿಸಿ ಹೋಗಿರುವ ಸಾವಿರಾರು ರೈತರು ಆತ್ಮಹತ್ಯೆಗೆ ತುತ್ತಾಗುತ್ತಿರುವಾಗ ಕೂಲಿ ಕೆಲಸಗಳನ್ನು ಕಳೆದುಕೊಂಡು ದೊಡ್ಡ ಸಂಖ್ಯೆಯಲ್ಲಿ ದಲಿತರು, ಕೂಲಿಕಾಕರರು ನಗರಗಳಿಗೆ ವಲಸೆ ಹೋಗುತ್ತಿರುವ ಸಂದರ್ಭದಲ್ಲೂ ಸಾಲಮನ್ನಾಕ್ಕೂ ನಮಗೂ ಸಂಬಂಧವಿಲ್ಲ, ಸಾಲಮನ್ನಾ ಮಾಡಿದ ರಾಜ್ಯ ಸರ್ಕಾರಕ್ಕೆ ಬಿಡಿಗಾಸಿನ ಹಣಕಾಸಿನ ಸಹಾಯವನ್ನೂ ನೀಡುವುದಿಲ್ಲ ಎನ್ನುವ ಪ್ರಧಾನಮಂತ್ರಿಗಳ ಮತ್ತು ಹಣಕಾಸು ಸಚಿವರ ನೀತಿ ಜನವಿರೋಧಿ ಆಗಿದೆ ಎಂದು ಖಂಡಿಸಿದರು. ರೈತರ, ದಲಿತರ ಮತ್ತು ಕೃಷಿ ಕಾರ್ಮಿಕರ ಸಂಪೂರ್ಣ ಸಾಲಮನ್ನಾ ಮಾಡಿದರೆ ಮಾತ್ರ ಅವರೆಲ್ಲ ಚೇತರಿಸಿಕೊಳ್ಳಲು ಸಾಧ್ಯ. ಕೃಷಿ ಕ್ಷೇತ್ರ ಸ್ವಾಲಂಬನೆಗೊಳಿಸಲು ಡಾ| ಎಂ.ಎಸ್. ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ ನಿಗದಿಗಾಗಿ ಕೃಷಿಕರ ಪರವಾದ ಬೆಳೆ ವಿಮೆ ನೀತಿ ಜಾರಿಗೊಳಿಸಬೇಕು. ರೈತರಿಗೆ ಮತ್ತು ಕೂಲಿಕಾರರಿಗೆ 5 ಸಾವಿರ ರೂ. ಮಾಸಾಶನ ನೀಡಬೇಕು ಎನ್ನುವ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಬೇಕಾಬಿಟ್ಟಿ ಭೂಸ್ವಾ ಧೀನತೆ ತಡೆಯಬೇಕು. ಭೂಮಿಗೆ ನ್ಯಾಯವಾದ ಬೆಲೆ ದೊರೆಯಬೇಕು ಸರ್ಕಾರಿ ಹಾಗೂ ಅರಣ್ಯ ಭೂಮಿ ಉಳುಮೆದಾರರಿಗೆ ಹಕ್ಕುಪತ್ರವನ್ನು ಒದಗಿಸಬೇಕು. ಭೂರಹಿತ ಬಡವರಿಗೆ ಹಾಗೂ ದಲಿತರಿಗೆ ಭೂ ಮಂಜೂರಾತಿಗಾಗಿ ಮತ್ತು ಎಲ್ಲ ಬಡವರಿಗೂ ರೇಷನ್ ಕಾರ್ಡ್ ಮಂಜೂರಾತಿ ಮಾಡಬೇಕು. ಆನ್‌ಲೈನ್ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿದರು. ಮುಖಂಡ ಆನಂದರಾವ್ ಶಿರೂರೆ, ಕಲ್ಯಾಣಿ ಅವುಟೆ, ಕಲ್ಯಾಣಿ ಹಿರೋಳಿ ಸಲಹೆ ನೀಡಿದರು. ಮಹಾವೀರ ಕಾಂಬಳೆ, ದಿನಕರ್ ಎಸ್. ವಾರಿಕ, ಮೈಲಾರಿ ಜೋಗೆ, ಲಕ್ಷ್ಮಣ ಕಾಂಬಳೆ, ರಫೀಕ ನಿಂಬಾಳಕರ್, ಧರೆಪ್ಪ ಸಿಂಗೆ, ಆದರ್ಶ ಅವಟೆ ಮತ್ತಿತರರು ಹಾಜರಿದ್ದರು.
Advertisement