Advertisement
ಎರಡು ವರ್ಷಗಳ ಹಿಂದೆ ಮೇ ತಿಂಗಳಲ್ಲಿ ಪಯಸ್ವಿನಿ ಸಂಪೂರ್ಣ ಬತ್ತಿ ನಗರದಲ್ಲಿ ಕುಡಿಯುವ ನೀರಿನ ತತ್ವಾರದ ಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿಯು ಕೊಡಗು ಭಾಗದಲ್ಲಿ ಸುರಿದ ಮಳೆ ನಗರ ವನ್ನು ಕಾಪಾಡಿತ್ತು. ಈ ಬಾರಿ ಮೇ ಮೊದಲ ವಾರದಲ್ಲಿ ಉರಿ ಬಿಸಿಲಿನ ತಾಪದಿಂದ ಪಯಸ್ವಿನಿ ಬತ್ತುವ ಆತಂಕ ಎದುರಾಗಿತ್ತು.
ನಗರದ ಕುಡಿಯುವ ನೀರಿನ ವ್ಯವಸ್ಥೆಗಾಗಿ ನಾಗಪಟ್ಟಣದ ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ನೆಲೆಯಲ್ಲಿ ನಿರ್ಮಿಸಿದ ಮರಳು ಕಟ್ಟದಿಂದ ನೀರು ಉಕ್ಕಿ ಕೆಳಭಾಗಕ್ಕೆ ಹರಿದಿದೆ. ಕಳೆದ ಎರಡು ತಿಂಗಳಿನಲ್ಲಿ ಕೆಲ ದಿನಗಳಲ್ಲಿ ಅಲ್ಲಲ್ಲಿ ಮಳೆ ಸುರಿದ ಕಾರಣ, ಮರಳು ಕಟ್ಟದಲ್ಲಿ ನೀರಿನ ಕೊರತೆ ಉಂಟಾಗಿರಲಿಲ್ಲ.