Advertisement
ವಿಧಾನ ಪರಿಷತ್ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತ ನೀಡಿ ತಮ್ಮನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಮೊದಲ ಸುತ್ತಿನಿಂದ ಕಡೆಯ ಸುತ್ತಿನ ತನಕವೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು ಪದವೀಧರರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದರು.
ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಲವು ಭರವಸೆ ನೀಡಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ
ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಮ್ಮ ಒಡನಾಡಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೋಲು ನೋವು ತಂದಿದೆ.
ಅಲ್ಲಿ ಗೆದ್ದದ್ದು ಹಣ. ಸಿದ್ದಾಂತದ ಸೋಲು ಅದು ಎಂದು ವಿಷಾದಿಸಿದರು. ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಆಯನೂರುಮಂಜುನಾಥ್ ಅವರು ವಿಧಾನ ಪರಿಷತ್‌ಗೆ ಆಯ್ಕೆಗೊಂಡಿರುವುದು ನಮ್ಮ ಉತ್ಸಾಹ ಮತ್ತು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಶೀಘ್ರದಲ್ಲಿಯೇ ಈ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ ಏರ್ಪಡಿಸಿ ಆಯನೂರು ಮಂಜುನಾಥ್ ಅವರಿಗೆ ಅಭಿನಂದನಾ ಸಮಾರಂಭ ನಡೆಸುತ್ತೇವೆ ಎಂದರು.ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ, ಮಂಜುನಾಥ್,ಶಿವಮೊಗ್ಗದ ಬಿಜೆಪಿ ಮುಖಂ ದತ್ತಾತ್ರಿ, ಅರೇಕಲ್ ಪ್ರಕಾಶ್, ಎಚ್.ವಿ.ಗಿರೀಶ್, ಬಿ.ಎಲ್. ಶ್ರೀನಿವಾಸ್, ಸುನೀತಾ ಜಗದೀಶ್, ಎ.ಮಣಿ , ಹುಲ್ಲೇಹಳ್ಳಿ ಲಕ್ಷ್ಮಣ, ಆನಂದಮೂರ್ತಿ, ಸಂತೋಷ್ ಮತ್ತಿತರರು ಇದ್ದರು.