ಕಳೆದ 10 ವರ್ಷಗಳಿಂದ ಚಂದನವನದ ಚಿತ್ರರಸಿಕರಿಗೆ ಗೋವಿಂದಾಯ ನಮಃ, ರಣವಿಕ್ರಮ, ಗೂಗ್ಲಿ, ನಟಸಾರ್ವಭೌಮ, ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್, ಈಗ ಡೈರೆಕ್ಟ್ ಆಗಿ ಬಾಲಿವುಡ್‌ಗೆ ಲ್ಯಾಂಡ್ ಆಗಿದ್ದಾರೆ.
ಪವನ್ ಒಡೆಯರ್ ನಿರ್ದೇಶನದಲ್ಲಿ ಬರುತ್ತಿರುವ ಮೊದಲ ಬಾಲಿವುಡ್ ಸಿನಿಮಾಗೆ “ನೋಟರಿ’ ಎಂದು ಟೈಟಲ್ ಇಡಲಾಗಿದ್ದು, ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದೆ. ಬೆಂಗಾಳಿಯ ಖ್ಯಾತ ಕಲಾವಿದ, ನಿರ್ದೇಶಕ ಹಾಗೂ ಕಹಾನಿ, ಅರಣ್ಯಕಾದಲ್ಲಿ ನಟಿಸಿರುವ ಪರಂಬ್ರತ ಚಟ್ಟೋಪಾಧ್ಯಾ ನೋಟರಿ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ನೋಟರಿ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಸಹ ಹೊತ್ತಿದ್ದಾರೆ. “ಶೆರ್ ಷಾ’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಖ್ಯಾತ ನಿರ್ಮಾಪಕ ಶಬೀರ್ ಬಾಕ್ಸ್ ವಾಲ್ ಅವರ “ಕಾಶ್ ಎಂಟರ್‌ಟೈನ್ ಮೆಂಟ್’ ಜೊತೆಗೂಡಿ ಪವನ್ ಒಡೆಯರ್ ತಮ್ಮದೇ “ಒಡೆಯರ್ ಮೂವೀಸ್ ಬ್ಯಾನರ್’ ನಡಿ ನೋಟರಿ ಚಿತ್ರಕ್ಕೆ ಹಣ ಹಾಕಿದ್ದಾರೆ.
ಇದನ್ನೂ ಓದಿ:ತೂಫಾನ್ ಎಬ್ಬಿಸಿದ ‘ಕೆಜಿಎಫ್ ಚಾಪ್ಟರ್ 2’; ಸಿನಿಮಾ ನೋಡಿದ ಅಭಿಮಾನಿಗಳು ಏನಂತಾರೆ?
ಸದ್ಯ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಮಧ್ಯಪ್ರದೇಶ ಅಥವಾ ಛತ್ತೀಸ್‌ಗಡಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿಕೊಂಡಿದೆ. ಸದ್ಯದಲ್ಲಿಯೇ ಉಳಿದ ತಾರಾಗಣ ಮತ್ತಿತರ ಅಪ್ ಡೇಟ್ ನೀಡಲಿದ್ದಾರೆ.
ಸದ್ಯ ಪವನ್ ಒಡೆಯರ್ “ರೆಮೋ’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದು, ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ತಯಾರಿಯಲಿದ್ದಾರೆ.