Advertisement

Renukaswamy case: ರೇಣುಕಾಸ್ವಾಮಿ ಸಾಯಿಸಲು ನಾನೇ ಹೇಳಿದ್ದು; ಪವಿತ್ರಾ ಗೌಡ

09:21 AM Sep 10, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy case) ಪ್ರಕರಣದ ಮಾಸ್ಟರ್‌ ಮೈಂಡ್‌ ಪವಿತ್ರಾ ಗೌಡ (Pavithra Gowda) ತನ್ನ ಸ್ವಇಚ್ಛೆ ಹೇಳಿಕೆ ನೀಡಿದ್ದು ರೇಣುಕಾಸ್ವಾಮಿ ನನಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದ. ಈ ವಿಚಾರ ವನ್ನು ತನ್ನ ಮನೆ ಕೆಲಸಗಾರ ಪವನ್‌ಗೆ ತಿಳಿಸಿದ್ದು, ಆತ ರೇಣುಕಸ್ವಾಮಿಯನ್ನು ಪತ್ತೆ ಹಚ್ಚಿ ಆಪ್ತರ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದ. ಆ ನಂತರ ಘಟನೆ ನಡೆದಿದೆ ಎಂದು ಪವಿತ್ರಾ ಗೌಡ ಹೇಳಿಕೆ ದಾಖಲಿಸಿದ್ದಾಳೆ ಎಂದು ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

2014ರಲ್ಲಿ ಬುಲ್‌ಬುಲ್‌ ಸಿನಿಮಾದ ಆಡಿಷನ್‌ ಸಂದರ್ಭದಲ್ಲಿ ದರ್ಶನ್‌ (Darshan) ಪರಿಚಯವಾಯಿತು. ದರ್ಶನ್‌ ವ್ಯವಸ್ಥಾಪಕರಿಂದ ನಂಬರ್‌ ಪಡೆದು, ಕರೆ ಮಾಡಿ ಸಂಪರ್ಕಿಸಿದಾಗ ಬುಲ್‌ಬುಲ್‌ ಚಿತ್ರಕ್ಕೆ ಆಡಿಷನ್‌ ಮಗಿದಿದೆ ಬೇರೆ ಯಾವುದಾದರೂ ಚಿತ್ರಕ್ಕೆ ಬೇಕಾದಲ್ಲಿ ತಿಳಿಸುವುದಾಗಿ ಹೇಳಿದ್ದರು. ಇದನ್ನು ನೆಪವಾಗಿಟ್ಟುಕೊಂಡು ದರ್ಶನ್‌ ಜತೆ ನಿತ್ಯ ವಾಟ್ಸ್‌ ಆ್ಯಪ್‌ ಚಾಟಿಂಗ್‌ ಹಾಗೂ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದೆ. ಇದು ನಮ್ಮಲ್ಲಿ ಸಲುಗೆ ಬೆಳೆಸಿತು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು.

ಪವಿತ್ರಾಗೌಡ ಹೆಸರಿನಲ್ಲಿ ಚಾಟಿಂಗ್‌ ಮಾಡಿದ್ದ ಪವನ್‌: ಈ ಮಧ್ಯೆ ದರ್ಶನ್‌ 2024ರ ಮೇ 19 ರಂದು ನನಗೆ ತಿಳಿಸದೆ ವಿಜಯಲಕ್ಷ್ಮೀ ಜತೆ ದುಬೈಗೆ ಹೋಗಿ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದರು. ಆಗ ದರ್ಶನ್‌ ಜತೆ ಜಗಳ ಮಾಡಿ ಮಾತನಾಡುವುದನ್ನು ನಿಲ್ಲಿಸಿದ್ದೆ. ಹೀಗಿರುವಾಗ ಗೌತಮ್‌ ಕೆ.ಎಸ್‌. 1990 ಇನ್‌ಸ್ಟ್ರಾಗ್ರಾಂ ಖಾತೆಯಿಂದ ಅಶ್ಲೀಲ ಹಾಗೂ ಕೆಟ್ಟದಾಗಿ ಸಂದೇಶ ಕಳುಹಿಸುತ್ತಿದ್ದರು. ಈ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಬುದ್ಧಿ ಕಲಿಸುವಾಗ ಸಲುವಾಗಿ “ಡ್ರಾಪ್‌ ಮೀ ಯುವರ್‌ ನೇಮ್‌’ ಎಂದು ಮೆಸೇಜ್‌ ಕಳುಹಿಸಿದೆ. ಅದಕ್ಕೆ ಪ್ರತಿಯಾಗಿ ನನ್ನ ನಂಬರ್‌ ಕೇಳಿದ್ದ. ಆಗ ವಿಷಯವನ್ನು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್‌ಗೆ ತಿಳಿಸಿದ್ದೆ. ಗೌತಮ್‌ ಖಾತೆಗೆ ಪವನ್‌ ನಂಬರ್‌ ಹಾಕಿ ಕಾಲ್‌ ಮೀ ಎಂದು ಮೆಸೇಜ್‌ ಹಾಕಿದ್ದೆ. ಪವಿತ್ರಾ ಗೌಡ ಎಂದು ತಿಳಿದು ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿ ಲೈಂಗಿಕ ಸಂಪರ್ಕಕ್ಕೆ ಆಹ್ವಾನ ಮಾಡಿದ್ದ. ಕೊನೆಗೆ ದರ್ಶನ್‌ ಕೂಡ ಆತನನ್ನು ಕರೆಸುವಂತೆ ಹೇಳಿದ್ದರು ಎಂದು ಪವಿತ್ರಾ ಗೌಡ ಹೇಳಿಕೆ ದಾಖಲಿಸಿದ್ದಾಳೆ.

ಚಪ್ಪಲಿಯಿಂದ ಹೊಡೆದೆ: ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಕರೆತಂದಾಗ ದರ್ಶನ್‌ ಕರೆ ಮಾಡಿ, “ನಿನಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಗೌತಮ್‌ (ರೇಣುಕಾಸ್ವಾಮಿ) ಬಂದಿದ್ದಾನೆ ಬಾ’ ಎಂದು ಕರೆದೊಯ್ದರು. ಬಳಿಕ ಶೆಡ್‌ನ‌ಲ್ಲಿ ಆತನನ್ನು ಕಂಡ ಕೂಡಲೇ ದರ್ಶನ್‌, ಮರದ ಕೊಂಬೆಯಿಂದ ಕೈ, ಕಾಲಿಗೆ ಹೊಡೆದರು. ಬಳಿಕ ನಾನು ಕೂಡ ಚಪ್ಪಲಿಯಿಂದ ಹೊಡೆದೆ. ಅಲ್ಲಿದ್ದವರಿಗೆ “ಆತನನ್ನು ಬಿಡಬೇಡಿ ಸಾಯಿಸಿ’ ಎಂದು ನಾನು ಹೇಳಿದಾಗ, ದರ್ಶನ್‌ ಸೇರಿ ಎಲ್ಲರೂ ಹಲ್ಲೆ ನಡೆಸಿದರು.

ಆಗ ದರ್ಶನ್‌ ನನಗೆ ಮನೆಗೆ ಕಳುಹಿಸಿದರು. ಅದೇ ದಿನ ರಾತ್ರಿ 9.30ಕ್ಕೆ ದರ್ಶನ್‌ ಕರೆ ಮಾಡಿ ನಾವು ಹಲ್ಲೆ ಮಾಡಿದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದು ಪವನ್‌, ಈ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಬಿಡಿ ಎಂದಿದ್ದ ಎಂದು ಪವಿತ್ರಾಗೌಡ ಹೇಳಿಕೆ ದಾಖಲಿಸಿದ್ದಾಳೆ.

Advertisement

ಹಲ್ಲೆಯ ವಿಡಿಯೋ ಮಾಡಿಕೊಳ್ಳಲು ದರ್ಶನ್‌ ಹೇಳಿದರು: ಪವನ್‌ ಹೇಳಿಕೆ

2024ರ ಜೂ 5ರಂದು ರಾತ್ರಿ 8.45 ಸುಮಾರಿಗೆ ಪವಿತ್ರಾಗೌಡ ತಮ್ಮ ಮನೆಯಲ್ಲಿ ಅಳುತ್ತಿದ್ದರು. ನಾನು ಯಾಕೆ ಎಂದು ಕೇಳಿದೆ? ಅವರು ಏನು ಉತ್ತರಿಸಲಿಲ್ಲ. ಆಗ ಅವರ ಐಫೋನ್‌ ಕೊಟ್ಟು ಇನ್ಸ್‌ಸ್ಟಾಗ್ರಾಂ ಮೇಸೆಜ್‌ ನೋಡು ಅದರಲ್ಲಿ ಗೌತಮ್‌ ಕೆ.ಎಸ್‌ ಎಂಬ ಅಕೌಂಟ್‌ನಲ್ಲಿ “ಸೆಕ್ಸಿ, ಬ್ಯೂಟಿ, ನಿನ್ನ ರೇಟ್‌ ಎಷ್ಟು? ದರ್ಶನ್‌ದೇ ಬೇಕಾ ನಿಂಗೆ. ನಂದು 7 ಇಂಚು ಇದೆ ನೋಡುತ್ತಿಯಾ? ನಿನ್ನ ನಂಬರ್‌ ಹೇಳು’ ಎಂದೆಲ್ಲ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದರು. ಆಗ ನಾನು ಅವರಿಗೆ ನೋಡಿಕೊಳ್ಳುವೆ ಬುದ್ಧಿ ಕಲಿಸುತ್ತೇನೆ ಎಂದು ಅವರ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ನನ್ನ ಫೋನ್‌ ನಂಬರ್‌ ಗೌತಮ್‌ ಅಕೌಂಟ್‌ಗೆ ಕಳಿಸಿದೆ. ಆಗ ನನ್ನ ನಂಬರ್‌ಗೆ ಕೂಡಲೇ ಕರೆ ಬಂದಾಗ ನಾನು ಸ್ಪೀಕರ್‌ ಹಾಕಿ ಪವಿತ್ರಾ ಅಕ್ಕ ಅವರಿಂದ ಪ್ರೀತಿಯ ಮಾತು ಆಡುವಂತೆ ಮಾಡಿದ್ದೆ ಎಂದಿದ್ದೆ. ರೇಣುಕಾಸ್ವಾಮಿ ಮೊಬೈಲ್‌ ಅನ್ನು ದರ್ಶನ್‌ ಸ್ನೇಹಿತ ಪ್ರದೋಷ್‌ ಚೆಕ್‌ ಮಾಡಿದಾಗ ಸುಮಾರು ಮಹಿಳೆ ಯರಿಗೆ ಆತ ಅಶ್ಲೀಲ ಸಂದೇಶ ಮಾಡಿರು ವುದು ಗೊತ್ತಾಯಿತು.

ಈ ವೇಳೆ ದರ್ಶನ್‌ ಮೆಸೇಜ್‌ ನೋಡುತ್ತಾ ರೇಣುಕಾಸ್ವಾಮಿ ಗುಪ್ತಾಂಗದ ಫೋಟೋ ಕಳುಹಿಸಿರುವುದನ್ನು ನೋಡಿ ಆತನಿಗೆ ಕಾಲಿನಲ್ಲಿ ಬಲವಾಗಿ ತುಳಿದು ಗುಪ್ತಾಂಗಕ್ಕೆ ಒದ್ದು, ಎದೆಗೆ ತುಳಿದರು. ಲಕ್ಷ್ಮಣ್‌ ರೇಣುಕಾಸ್ವಾಮಿ ಪಕ್ಕೆಗೆ ಹೊಡೆದರು. ಬೆನ್ನಿಗೆ ಹಗ್ಗದಲ್ಲಿ ನಾಗರಾಜ್‌ ಹೊಡೆದರು. ಆಗ ರೇಣುಕಾಸ್ವಾಮಿ ವಿಡಿಯೋ ಮಾಡಿಕೊಳ್ಳುವಂತೆ ಪ್ರದೂಷ್‌ಗೆ ದರ್ಶನ್‌ ಹೇಳಿದರು.  ಊಟ ತಂದು ಕೊಡಿ ಎಂದು ಪ್ರದೂಷ್‌ ಹೇಳಿದ್ದರು. ಬಳಿಕ ಕೆಂಪು ಜೀಪ್‌ನಲ್ಲಿ ಪವಿತ್ರಾ ಅವರನ್ನು ಡ್ರಾಪ್‌ ಮಾಡಿ ಬಳಿಕ ಪ್ರದೂಷ್‌ ಅವರ ಕಾರಿನಲ್ಲಿ ದರ್ಶನ್‌ ಅವರ ಮನೆಗೆ ನಾನು ಹೋಗಿದ್ದೆ. ಶೆಡ್‌ನ‌ಲ್ಲಿ ನಂದೀಶ್‌, ಲಕ್ಷ್ಮಣ್‌ನ ನಾಗರಾಜ್‌, ರಾಘವೇಂದ್ರ, ಜಗದೀಶ್‌, ದೀಪಕ್‌, ಕಾರು ಚಾಲಕರು ಇದ್ದರು ಎಂದು ಹೇಳಿಕೆ ದಾಖಲಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next