Advertisement

Pavagada: ಸಾರ್ವಜನಿಕ ಆಸ್ಪತ್ರೆಯ ಅರಿವಳಿಕೆ ತಜ್ಞೆ ಸೇರಿ ಮತ್ತೆ ಮೂವರ ಅಮಾನತು

03:02 PM Feb 28, 2024 | Team Udayavani |

ಪಾವಗಡ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಮೂವರು ಮಹಿಳೆಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಪ್ರಸೂತಿ ವೈದ್ಯೆ ಸೇರಿದಂತೆ ಮೂವರು ಸಿಬಂದಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಮಂಗಳವಾರ ರಾತ್ರಿ ಆಸ್ಪತ್ರೆಯ ಅರಿವಳಿಕೆ ತಜ್ಞೆ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.

Advertisement

ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಚ್.ಎಂ.ಪೂಜಾ, ಶುಶ್ರೂಷಣಾಧಿ- ಕಾರಿ ಜಿ.ಪದ್ಮಾವತಿ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ಸಿಬಂದಿ ಬಿ.ಆರ್. ಕಿರಣ್ ಅವರನ್ನು ವಜಾಗೊಳಿಸಲಾಗಿತ್ತು.ಅರಿವಳಿಕೆ ತಜ್ಞೆ ಡಾ.ನಮ್ರತಾ ಮತ್ತು ಶುಕ್ರೂಷಕಿಯರಾದ ಕೆ.ನಾಗರತ್ನಮ್ಮ ಹಾಗೂ ಬಿ.ಮಾರಕ್ಕೆ ಅವರನ್ನು ಮೊದಲು ಬೇರೆ ಕಡೆ ವರ್ಗಾವಣೆ ಮಾಡಲಾಗಿತ್ತು. ಅದರೆ‌ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅವರನ್ನು ಮಂಗಳವಾರ ರಾತ್ರಿ ಅಮಾನತು ಮಾಡಿ ಅದೇಶ ನೀಡಲಾಗಿದೆ.

ಸಾವನ್ನಪ್ಪಿದವರು
ಪಾವಗಡ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿದ ತಾಯಿ ಮಕ್ಕಳ ಅಸ್ಪತ್ರೆಯಲ್ಲಿ ಹೆರಿಗೆ ಮತ್ತು ಗರ್ಭ ಕೋಶ ಚಿಕಿತ್ಸೆಗೆಂದು ಈ ಹಿಂದೆ 7 ಮಂದಿ ಮಹಿಳೆಯರು ದಾಖಲಾಗಿದ್ದರು. ಈ ಪೈಕಿ ಅಂಜಲಿ(25) ಹೆರಿಗೆ ಸಂಬಂಧ ಚಿಕಿತ್ಸೆ, ಅನಿತಾ(30)ಗೆ ಸಂತಾನಶಕ್ತಿ ಹರಣ ಚಿಕಿತ್ಸೆ, ನರಸಮ್ಮ(40) ಗರ್ಭಕೋಶದ ಚಿಕಿತ್ಸೆಗೆ ದಾಖಲಾಗಿದ್ದರು. ಕೆಲವರು ಪಾವಗಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next