Advertisement
ಬೇಕಾಗುವ ಸಾಮಗ್ರಿಗಳುಪಾವ್ ಬನ್- 6 ರಿಂದ 8, ಆಲೂಗಡ್ಡೆ-3, ಬಟಾಣಿ-100ಗ್ರಾಂ, ಕ್ಯಾಪ್ಸಿಕಮ್-2,ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು-ಸ್ವಲ್ಪ, ಬೆಣ್ಣೆ-ಅರ್ಧ ಕಪ್,ಪಾವ್ ಭಾಜಿ ಮಸಾಲ-4ಚಮಚ, ಮೆಣಸಿನ ಪುಡಿ-2ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ, ನಿಂಬೆ ರಸ-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು.
-ಮೊದಲಿಗೆ ಆಲೂಗಡ್ಡೆ ಮತ್ತು ಬಟಾಣಿಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.
-ನಂತರ ಈರುಳ್ಳಿ, ಟೊಮೆಟೋ , ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಿ.
-ಒಂದು ಬಾಣಲೆಗೆ 2ಚಮಚ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ್ದ ಈರುಳ್ಳಿ, ಟೊಮೆಟೋ,ಕ್ಯಾಪ್ಸಿಕಮ್ ಅನ್ನು ಹಾಕಿ ಫ್ರೈ ಮಾಡಿಕೊಳ್ಳಿ.
-ತದನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪಾವ್ ಭಾಜಿ ಮಸಾಲ,ಮೆಣಸಿನ ಪುಡಿ,ಬೇಯಿಸಿದ ಆಲೂಗಡ್ಡೆ/ಬಟಾಣಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ(ಸ್ಮಾಶ್)ಸ್ವಲ್ಪ ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ 3 ರಿಂದ 5ನಿಮಿಷ ಬೇಯಲು ಬಿಡಿ.
-ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿದರೆ ರುಚಿಕರವಾದ ಭಾಜಿ ಸಿದ್ಧ.
-ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಬಿಸಿಯಾದ ಮೇಲೆ ಮಧ್ಯ ಸೀಳಿದ ಪಾವ್ ಬನ್ ನ ಎರಡೂ ಬದಿ ಸ್ವಲ್ಪ ರೋಸ್ಟ್ ಮಾಡಿಕೊಳ್ಳಿ ನಂತರ ಭಾಜಿ ಜೊತೆ ಸರ್ವ್ ಮಾಡಿದರೆ ಸ್ವಾಧಿಷ್ಟಕರವಾದ ಪಾವ್ ಭಾಜಿ ಸವಿಯಲು ಸಿದ್ಧ. -ಶ್ರೀರಾಮ್ ಜಿ. ನಾಯಕ್