Advertisement
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಂದಾಯ ಇಲಾಖೆ ಈಗಾಗಲೇ “ಪೌತಿ/ ವಾರಸಾಖಾತೆ ಆಂದೋಲನ’ರೂಪಿಸಿದ್ದು ಶೀಘ್ರದಲ್ಲೆ ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಗ್ರಾಮಮಟ್ಟದಲ್ಲಿ ನಡೆಸಲು ನಿರ್ಧರಿಸಿದೆ. ಕೃಷಿ ಜಮೀನಿನ ಮಾಲೀಕರು ಮರಣಹೊಂದಿದ ನಂತರ ವಾರಸಾ ರೀತ್ಯಾ ಮಾಲೀಕತ್ವವು ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದೇ ಇದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನ ಹೊಂದಿದ್ದರೂ ಕುಟುಂಬಸ್ಥರಿಗೆ ಆ ಜಮೀನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ. ಜತೆಗೆ ಸರ್ಕಾರ ದಿಂದ ದೊರೆಯುವಂತಹ ಸಾಲ ಸೌಲಭ್ಯಗಳನ್ನು ಪಡೆಯಲಾಗದು. ಅಲ್ಲದೆ ಪ್ರಕೃತಿ ವಿಕೋಪದಂತಹ ವೇಳೆ ಬೆಳೆನಾಶವಾದಾಗ, ಬೆಳೆವಿಮೆ ಪರಿಹಾರ ಪಡೆಯಲು ಕಷ್ಟವಾಗುತ್ತದೆ. ಹಾಗೆ ಸರ್ಕಾರ ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಕಾಯ್ದೆಯಂತೆ ಭೂಮಿ ವಶಪಡಿಸಿಕೊಂಡಾಗಲೂ ಪರಿಹಾರದ ಹಣ ಪಡೆಯಲುವಿವಿಧಕಚೇರಿಗೆಅಲೆಯಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಮನಗಂಡು ಸರ್ಕಾರ ರೈತಾಪಿ ವರ್ಗದ ಸಮಸ್ಯೆ ಪರಿಹರಿಸಲು “ವಾರಸಾ ಖಾತೆ ಆಂದೋಲನ’ ರೂಪಿಸಿದೆ. ಅಲ್ಲದೆ ಈ ಸಂಬಂಧ ಕಂದಾಯ ಇಲಾಖೆ (ಭೂ ಕಂದಾಯ) ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.
Related Articles
Advertisement
ಮ್ಯುಟೇಶನ್ ವಿಲೇವಾರಿ 30 ದಿನಗಳ ಅವಕಾಶ : ಮ್ಯುಟೇಶನ್ ವಿಲೇವಾರಿಗೆ ಮೂವ್ವತ್ತು ದಿನಗಳ ಅವಕಾಶ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಆಸಕ್ತರು ತಕರಾರು ಅರ್ಜಿಗಳನ್ನೂ ಸಲ್ಲಿಸಬಹುದಾಗಿದೆ. ತಕರಾರು ಬಂದರೆ ವಹಿವಾಟು ವಿವಾದಸ್ಪದ ಪ್ರಕರಣಗಳ ಪಟ್ಟಿಗೆ ಸೇರಿಸಲ್ಪಡುತ್ತದೆ. ಸದರಿ ಆಂದೋಲನದಲ್ಲಿ ಸ್ವೀಕೃತವಾಗುವ ತಕರಾರುಗಳನ್ನು ಖುದ್ದಾಗಿ ತಹಶೀಲ್ದಾರ್ ಗ್ರೇಡ್-1(ಕಸಬಾ ಹೋಬಳಿಗಳಿಗೆ),ತಹಶೀಲ್ದಾರ್ ಗ್ರೇಡ್- 2 (ಇತರೆ ಹೋಬಳಿಗಳಲ್ಲಿ) ಒಂದು ತಿಂಗಳ ಒಳಗೆ ಕ್ಯಾಂಪ್ ಮಾಡುವ ಮುಖಾಂತರ ಪರಿಹಾರ ಮಾಡಬಹುದಾಗಿದೆ.
ಗ್ರಾಮಲೆಕ್ಕಿಗರಿಂದ ಸಂದರ್ಶನ : ಗ್ರಾಮಲೆಕ್ಕಿಗರೂ ಕೂಡ ಮರಣ ಹೊಂದಿದ ಖಾತೆದಾರರುಗಳ ವಿವರಗಳನ್ನು ಮರಣ ನೋಂದಣಿ ರಿಜಿಸ್ಟ್ರಾರ್, ಪರಿಹಾರ ತಂತ್ರಾಂಶ ಹಾಗೂ ಮನೆ ಮನೆಗಳನ್ನು ಸಂದರ್ಶಿಸುವ ಮೂಲಕ ಪಡೆಯಬಹುದಾಗಿದೆ. ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷವನ್ನು ಮೃತಪಟ್ಟಿರುವಕುಟುಂಬದವರಿಂದ ಪಡೆದು ಭೂಮಿ ತಂತ್ರಾಂಶದಲ್ಲಿ ಪೌತಿ ಖಾತೆಗಾಗಿ ನಮೂನೆ-1ರಲ್ಲಿ ಅರ್ಜಿ ದಾಖಲಿಸಬಹುದು.
ಈಗಾಗಲೇ ಕಂದಾಯ ಇಲಾಖೆ “ಪೌತಿ ಖಾತೆ ಆಂದೋಲನ’ಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಶೀಘ್ರದಲ್ಲೆ ನಗರ ಜಿಪಂ ವ್ಯಾಪ್ತಿಯಲ್ಲಿಈ ಆಂದೋಲನ ನಡೆಯುವ ಸಾಧ್ಯತೆ ಇದೆ. – ಜೆ. ದಿನಕರ್, ಆನೇಕಲ್ ತಾಪಂ ಕಂದಾಯ ಇಲಾಖೆ ಅಧಿಕಾರಿ
–ದೇವೇಶ ಸೂರಗುಪ್ಪ