ಬೆಂಗಳೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಗಸ್ತು ಹೆಚ್ಚಿಸಲಾಗುವುದು. ಸಂಜೆ ಏಳು ಗಂಟೆಯ ನಂತರ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಜನರಿಗೆ ತೊಂದರೆಯಾಗದಂತೆ ರಕ್ಷಣೆಯನ್ನು ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿನಲ್ಲಿ ಸಭೆಗಳನ್ನೇ ಮಾಡುತ್ತಿದ್ದರೆ ಪೊಲೀಸರು ತನಿಖೆ ಮಾಡಲಾಗುತ್ತಿರಲಿಲ್ಲ. ಹಾಗಾಗಿ ನಾನು ಪೂರ್ವಯೋಜಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ ಎಂದರು.
ಸಂತ್ರಸ್ತೆ ಇನ್ನೂ ಶಾಕ್ ನಲ್ಲಿದ್ದಾರೆ. ಅವರ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಪೊಲೀಸರಿಗೆ ಬಹಳ ಸವಾಲಾಗಿತ್ತು. ತಾಂತ್ರಿಕ ನೆಲೆಯಲ್ಲಿ ಪೋಲಿಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಹೇಳಿಕೆ ಕೊಡುವಂತೆ ಮನವೊಲಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಮೈಸೂರಿನಲ್ಲೇ ತನಿಖೆ ಮಾಡ್ತಿದ್ದ ಪೊಲೀಸರಿಗೆ ತ.ನಾಡು ದಾರಿ ತೋರಿಸಿದ್ದು ಆ ಒಂದು ಬಸ್ ಟಿಕೆಟ್!
ಇದೊಂದು ಅಮಾನವೀಯ ಕೃತ್ಯ. ಈ ಕೃತ್ಯದ ಬಳಿಕ ಸಾಕಷ್ಟು ಆತಂಕ ವ್ಯಕ್ತವಾಗಿತ್ತು, ಇಂತಹ ನೂರು ಪ್ರಕರಣಗಳ ತನಿಖೆಯನ್ನು ನಮ್ಮ ಅಧಿಕಾರಿಗಳು ನಡೆಸಿದ್ದಾರೆ. ನಮಗೆ ಪ್ರಕರಣ ಬೇಧಿಸುತ್ತಾರೆ ಎಂಬ ವಿಶ್ವಾಸವಿತ್ತು. ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನ ಪೊಲೀಸರು ಕೊಟ್ಟಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.