Advertisement

ಒಡಿಶಾದ ಅತೀ ಉದ್ದದ ಸೇತುವೆ ಲೋಕಾರ್ಪಣೆಗೈದ ಸಿಎಂ ಪಟ್ಟನಾಯಕ್‌

03:57 PM Jul 19, 2017 | Team Udayavani |

ಭುವನೇಶ್ವರ : ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ಟನಾಯಕ್‌ ಅವರು ರಾಜ್ಯದ ಅತೀ ಉದ್ದದ ಸೇತುವೆಯನ್ನು ಲೋಕಾರ್ಪಣೆಗೈದು ಅದಕ್ಕೆ ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಹೆಸರನ್ನು ಇಟ್ಟರು.

Advertisement

ರಾಜ್ಯದ ರಾಜಧಾನಿ ಭುವನೇಶ್ವರವನ್ನು ಕಟಕ್‌ ನೊಂದಿಗೆ ಜೋಡಿಸುವ ಮೂಲಕ ಉಭಯ ನಗರಗಳ ನಡುವಿನ ದೂರವನ್ನು 12 ಕಿ.ಮೀ.ನಷ್ಟು ಕಡಿಮೆ ಮಾಡುವ ಕಠಜೋಡಿ ನದಿಯ ಮೇಲಿನ, ರಾಜ್ಯದ ಈ ಅತೀ ಉದ್ದದ ಸೇವೆಯು  2.88 ಕಿ.ಮೀ. ಉದ್ದವಿದೆ. 

ರಾಜ್ಯದ ಹಾಗೂ ಜನತೆಯ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸುವ ರಾಜ್ಯ ಸರಕಾರದ ನಿರಂತರ ಪ್ರಯತ್ನಕ್ಕೆ ಈ ಸೇತುವೆಯು ಒಂದು ಸಾಕ್ಷಿಯಾಗಿದೆ ಎಂದು  ಸಿಎಂ ಪಟ್ಟನಾಯಕ್‌ ಸೇತುವೆಯನ್ನು ಉದ್ಘಾಟಿಸಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next