Advertisement

Patna;ಗರ್ಭಿಣಿ ಸಾವು: ದಾದಿಯನ್ನು ಮಹಡಿಯಿಂದ ತಳ್ಳಿ ಆಕ್ರೋಶ

11:53 PM May 28, 2024 | Team Udayavani |

ಪಟ್ನಾ: ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ವೇಳೆ ಗರ್ಭಿಣಿ ಅಸುನೀಗಿದ್ದರಿಂದ ಕೋಪಗೊಂಡ ಸಂಬಂಧಿಕರು ನರ್ಸ್‌ ಒಬ್ಬರನ್ನು ಕಟ್ಟಡದಿಂದ ಕೆಳಗೆಸೆದಿರುವ ಘಟನೆ ನಡೆದಿದೆ. ನಳಂದಾ ಜಿಲ್ಲೆಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರನ್ನು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ದಾಖಲಿಸಲಾಗಿತ್ತು. ಅವರಿಗೆ ನರ್ಸ್‌ ಚುಚ್ಚುಮದ್ದನ್ನು ನೀಡಿದ ಬಳಿಕ ಆಕೆ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿ, ನರ್ಸ್‌ ಅನ್ನು ಮಹಡಿಯಿಂದ ಕೆಳಕ್ಕೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next