Advertisement

ಪ್ರೊ ಕಬಡ್ಡಿ: ಯು ಮುಂಬಾವನ್ನು ಕೆಡವಿದ ಪಾಟ್ನಾ ಪೈರೇಟ್ಸ್‌

11:19 PM Nov 04, 2022 | Team Udayavani |

ಪುಣೆ: ಹ್ಯಾಟ್ರಿಕ್‌ ಜಯದೊಂದಿಗೆ ಮುನ್ನುಗ್ಗುತ್ತಿದ್ದ ಯು ಮುಂಬಾ ತಂಡವನ್ನು 34-31 ಅಂಕಗಳಿಂದ ಕೆಡವಿದ ಪಾಟ್ನಾ ಪೈರೇಟ್ಸ್‌ ಸ್ವತಃ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸಂಭ್ರಮಿಸಿದೆ.

Advertisement

ಇದು 10ನೇ ಪಂದ್ಯದಲ್ಲಿ ಪಾಟ್ನಾ ಸಾಧಿಸಿದ 4ನೇ ಗೆಲುವು. ಸತತ 5 ಪಂದ್ಯಗಳಲ್ಲಿ ಪಾಟ್ನಾ ಅಜೇಯವಾಗಿ ಉಳಿಯಿತು.

ಆರಂಭದಲ್ಲಿ ಸತತವಾಗಿ ಸೋಲುತ್ತ ಬಂದ ಅದು, ಗೆಲುವಿನ ಖಾತೆ ತೆರೆದ ಬಳಿಕ ಸೋಲಿನ ಮುಖವನ್ನೇ ಕಾಣಲಿಲ್ಲ. ಒಂದು ಪಂದ್ಯ ಟೈ ಆಗಿತ್ತು. ಮುಂಬಾ 10ನೇ ಪಂದ್ಯಗಳಲ್ಲಿ 4ನೇ ಸೋಲನುಭವಿಸಿತು.

ರೈಡರ್‌ ಸಚಿನ್‌, ಡಿಫೆಂಡರ್‌ ಸುನೀಲ್‌ ಪಾಟ್ನಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ರಮವಾಗಿ 12 ಹಾಗೂ 6 ಅಂಕ ಗಳಿಸಿ ಕೊಟ್ಟರು. ಮುಂಬಾ ತಂಡದಲ್ಲಿ ರೈಡರ್‌ಗಳಾದ ಆಶಿಷ್‌ ಮತ್ತು ಜೈ ಭಗವಾನ್‌ ಉತ್ತಮ ಪ್ರದರ್ಶನವಿತ್ತರು (ತಲಾ 7 ಅಂಕ).

ಜೈಪುರ ವಿಜಯ
ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 45-40 ಅಂತರದಿಂದ ದಬಾಂಗ್‌ ಡೆಲ್ಲಿಯನ್ನು ಕೆಡವಿತು.

Advertisement

ರೈಡರ್‌ ಅರ್ಜುನ್‌ ದೇಶ್ವಾಲ್‌ ಅಮೋಘ ಪ್ರದರ್ಶನ ನೀಡಿ ಜೈಪುರ್‌ ಜಯದ ಹೀರೋ ಎನಿಸಿದರು. ಅರ್ಜುನ್‌ ತಂದಿತ್ತ ಅಂಕ 16. ಈ ಪಂದ್ಯದ ಮೂಲಕ ರಾಹುಲ್‌ ಚೌಧರಿ ಸಾವಿರ ರೈಡ್‌ ಪಾಯಿಂಟ್‌ ಸಾಧನೆಗೈದರು. ಇಲ್ಲಿ ರಾಹುಲ್‌ ಗಳಿಕೆ 6 ಅಂಕ.

ದಬಾಂಗ್‌ ಡೆಲ್ಲಿ ಪರ ನವೀನ್‌ ಕಪ್ತಾನನ ಆಟವಾಡಿ 12 ಅಂಕ ಗಳಿಸಿದರು. ರೈಡರ್‌ ಆಶು ಮಲಿಕ್‌ ಇನ್ನಷ್ಟು ಸುಧಾರಿತ ಪ್ರದರ್ಶನದೊಂದಿಗೆ 15 ಅಂಕ ಗಳಿಸಿಕೊಟ್ಟರು.

ಇದು 10ನೇ ಪಂದ್ಯದಲ್ಲಿ ಜೈಪುರ್‌ ಸಾಧಿಸಿದ 6ನೇ ಗೆಲುವು. ಇನ್ನೊಂದೆಡೆ ಡೆಲ್ಲಿ 10 ಪಂದ್ಯಗಳಿಂದ 6ನೇ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next